For Quick Alerts
  ALLOW NOTIFICATIONS  
  For Daily Alerts

  ಮಲೆಯಾಳಂ ಭಾವನಾಗೆ ಉಕ್ಕಿ ಹರಿದ ಕನ್ನಡ ಪ್ರೀತಿ

  |
  <ul id="pagination-digg"><li class="previous"><a href="/news/13-actress-bhavana-rajeev-pillai-love-affair-aid0172.html">« Previous</a>

  ಆಶ್ಚರ್ಯವಾದರೂ ಸತ್ಯದ ಸಂಗತಿಯೆಂದರೆ, ಭಾವನಾ ಕನ್ನಡ ಚಿತ್ರರಂಗವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅದಕ್ಕೆ ಪೂರಕವಾದ ಸಾಕ್ಷಿಯೂ ಸಿಕ್ಕಿದೆ. ಕನ್ನಡ ಹಳೆಯ ಚಿತ್ರದ ಕಮಿಟ್ ಮೆಂಟ್ ಗಾಗಿ ಮಲಯಾಳಂನ ಸಾಜಿ ಸುರೇಂದ್ರನ್ ನಿರ್ದೇಶನದ 'ಹಸ್ಬೆಂಡ್ಸ್ ಇನ್ ಗೋವಾ' ಚಿತ್ರವನ್ನು ತಿರಸ್ಕರಿಸಿದ್ದಾರೆ ಭಾವನಾ.

  'ಹಸ್ಬೆಂಡ್ಸ್ ಇನ್ ಗೋವಾ'ನಲ್ಲಿ ಭಾವನಾ ಹೀರೋಯಿನ್ ಎಂದು ನಿರ್ಧರಿಸಿ ಅಡ್ವಾನ್ಸ್ ಕೂಡ ನೀಡಲಾಗಿತ್ತು. ಆದರೆ ಆ ವೇಳೆ ಭಾವನಾಗೆ ಕನ್ನಡ ಚಿತ್ರದ ಆಫರ್ ಸಿಕ್ಕಿತು. ಅದು ಹಳೆಯ ಆಫರ್ ಆಗಿದ್ದರೂ ಕನ್ನಡದ ಆ ಚಿತ್ರಕ್ಕಾಗಿ ಮಲೆಯಾಳಂ ಚಿತ್ರಕ್ಕೆ ಕೈಎತ್ತಿದ್ದಾರೆ ಭಾವನಾ. ಭಾವನಾ ಕನ್ನಡದ ಪ್ರೀತಿಗೆ ಜೈ ಎನ್ನುತ್ತಿದ್ದಾರೆ ಸಿನಿಪ್ರೇಕ್ಷಕರು.

  ಪುನೀತ್ 'ಜಾಕಿ', ಕಿಚ್ಚ ಸುದೀಪ್ 'ವಿಷ್ಣುವರ್ಧನ' ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ 'ರೋಮಿಯೋ' ಚಿತ್ರಗಳಲ್ಲಿ ಈಗಾಗಲೇ ನಟಿಸಿರುವ ಭಾವನಾ, ಸದ್ಯ ರಿಯಲ್ ಸ್ಟಾರ್ ಉಪೇಂದ್ರರ ಚಿತ್ರ 'ಟೋಪಿವಾಲಾ'ಕ್ಕೆ ಸಹಿ ಹಾಕಿದ್ದಾರೆ. ನಂತರ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಚಿತ್ರವೊಂದರಲ್ಲೂ ಇದೇ ಭಾವನಾ ನಟಿಸುತ್ತಿದ್ದಾರೆ ಎಂಬ ಸುದ್ದಿಯಿದೆ. ಒಟ್ಟಿನಲ್ಲಿ ಭಾವನಾ ಕನ್ನಡದಲ್ಲಿ ಬ್ಯುಸಿ. (ಒನ್ ಇಂಡಿಯಾ ಕನ್ನಡ)

  <ul id="pagination-digg"><li class="previous"><a href="/news/13-actress-bhavana-rajeev-pillai-love-affair-aid0172.html">« Previous</a>
  English summary
  Actress Bhavana rejected Malayalam movie 'Husband in Goa' for the Commitment of old Kannada movie. &#13; &#13;

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X