ಚಿತ್ರ ನಿರ್ದೇಶನಕ್ಕೆ ಹಿರಿಯ ಸಿನಿಮಾ ತಾರೆ ಊರ್ವಶಿ
ದಕ್ಷಿಣ ಭಾರತದ ಹಿರಿಯ ತಾರೆ ಊರ್ವಶಿ ಚಿತ್ರ ನಿರ್ದೇಶನಕ್ಕೆ ಕೈಹಾಕಿದ್ದಾರೆ. ತಮ್ಮ 28 ವರ್ಷಗಳ ಸುದೀರ್ಘ ವೃತಿ ಜೀವನದಲ್ಲಿ ಇದೇ ಮೊದಲ ಬಾರಿಗೆ ಊರ್ವಶಿ ಚಿತ್ರವೊಂದನ್ನು ಕೈಗೆತ್ತಿಕೊಂಡಿರುವುದು ವಿಶೇಷ. ಸದ್ಯಕ್ಕೆ ಊರ್ವಶಿ ಅವರು ಮಲಯಾಳಂ ಚಿತ್ರವೊಂದರಲ್ಲಿ ಬಿಜಿಯಾಗಿದ್ದಾರೆ.
ಊರ್ವಶಿ ಅವರ ಚೊಚ್ಚಲ ನಿರ್ದೇಶನದ ಚಿತ್ರ ತಮಿಳು ಭಾಷೆಯಲ್ಲಿ ಮೂಡಿಬರಲಿದೆ. ಮೋಹನ್ ಎಂಬುವವರು ಕತೆ, ಚಿತ್ರಕತೆ ಬರೆದಿದ್ದಾರೆ. ಚಿತ್ರದ ಶೀರ್ಷಿಕೆ ಹಾಗೂ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಊರ್ವಶಿ ಅವರ ಸಮಕಾಲೀನರಾದ ರೇವತಿ ಹಾಗೂ ಅಂಬಿಕಾ ಅವರು ಈಗಾಗಲೆ ಚಿತ್ರ ನಿರ್ದೇಶನದಲ್ಲಿ ಗುರುತಿಸಿಕೊಂಡಿದ್ದಾರೆ.
'ಶ್ರಾವಣ ಬಂತು', 'ರಾಮಾ ಶಾಮಾ ಭಾಮ', 'ನಾನು ನನ್ನ ಹೆಂಡ್ತಿ' ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ತಮಿಳು ಹಾಗೂ ಮಲೆಯಾಳಂನಲ್ಲೂ ಜನಪ್ರಿಯತೆ ಗಳಿಸಿರುವ ಊರ್ವಶಿ ಇತ್ತೀಚೆಗಷ್ಟೆ ಫಾರ್ಮ್‌ಗೆ ಮರಳಿದ್ದರು. (ಏಜೆನ್ಸೀಸ್)
More from Filmibeat
English summary
Senior South Indian actress Urvashi turns director. Her directorial venture will be a Tamil film, written by renowned writer Mohan. The cast and the title of the film are yet to be finalized.


Click it and Unblock the Notifications











