For Quick Alerts
  ALLOW NOTIFICATIONS  
  For Daily Alerts

  ನಟಿ ಊರ್ವಶಿ ಬಾಳಿನಲ್ಲಿ ಮತ್ತೆ ಶ್ರಾವಣ ಬಂತು

  By Rajendra
  |

  ತಮ್ಮ ಪತಿ ಮನೋಜ್ ಕುಮಾರ್‌ಗೆ ಸೋಡಾಚೀಟಿ ನೀಡಿದ ಮೇಲೆ ಕೆಲದಿನಗಳ ಕಾಲ ಊರ್ವಶಿ ಸುಳಿವಿರಲಿಲ್ಲ. ಈಗ ಮತ್ತೆ ಊರ್ವಶಿ ಬಾಳಿನಲ್ಲಿ ಶ್ರಾವಣ ಬಂದಿದೆ. ಅರ್ಥಾತ್ 'ಶ್ರಾವಣ ಬಂತು', 'ರಾಮಾ ಶಾಮಾ ಭಾಮ', 'ನಾನು ನನ್ನ ಹೆಂಡ್ತಿ' ಸೇರಿದಂತೆ ಅನೇಕ ಕನ್ನಡ ಚಿತ್ರಗಳಲ್ಲಿ ನಟಿಸಿರುವ ತಮಿಳು ಹಾಗೂ ಮಲೆಯಾಳಂನಲ್ಲೂ ಜನಪ್ರಿಯತೆ ಗಳಿಸಿರುವ ಊರ್ವಶಿ ಮತೆ ಫಾಮ್‌ಗೆ ಮರಳಿದ್ದಾರೆ.

  ಚಿತ್ರರಂಗದಲ್ಲಿ ಮತ್ತೆ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳಲು ಊರ್ವಶಿ ತೀರ್ಮಾನಿಸಿದ್ದಾರೆ. ಈಗ ಆಕೆಯ ಕುಟುಂಬ ಸಮಸ್ಯೆಗಳೆಲ್ಲಾ ಅಷ್ಟಾಗಿ ಇಲ್ಲವಂತೆ. ಹಾಗಾಗಿ ಮತ್ತೆ ತಮ್ಮ ನಟನಾ ಪ್ರತಿಭೆಯನ್ನು ಓರೆಗೆ ಹಚ್ಚಲು ಊರ್ವಶಿ ನಿರ್ಧರಿಸಿದ್ದಾರೆ. ಅವರು ಎಂಟ್ರಿ ಕೊಡುತ್ತಿರುವುದು ಮಲಯಾಳಂ ಚಿತ್ರರಂಗಕ್ಕೆ.

  'ಲಕ್ಷ್ಮಿ ವಿಲಾಸಂ ಮಕನ್ ರಘುರಾಂ' ಎಂಬ ಚಿತ್ರದಲ್ಲಿ ಪೂರ್ಣ ಪ್ರಮಾಣದ ನಾಯಕಿಯಾಗಿ ಊರ್ವಶಿ ಕಾಣಿಸಲಿದ್ದಾರೆ. ಇದೊಂದು ಮಹಿಳಾ ಪ್ರಧಾನ ಚಿತ್ರವಂತೆ. ಊರ್ವಶಿ ಮತ್ತೆ ಚಿತ್ರರಂಗಕ್ಕೆ ಮರಳಿರುವುದು ಆಕೆಯ ಅಭಿಮಾನಿಗಳ ಪಾಲಿಗೆ ಸಂತಸದ ವಿಚಾರ. ಆದಷ್ಟು ಬೇಗ ಕನ್ನಡಕ್ಕೂ ಊರ್ವಶಿ ಮತ್ತೆ ಎಂಟ್ರಿ ಕೊಡಲಿ ಎಂದು ಆಶಿಸೋಣ. (ಏಜೆನ್ಸೀಸ್)

  English summary
  After the divorce from Manoj Kumar, Urvasi have decided to get back in the industry in full swing. She acted in Kannada films like Shravana Bantu, Rama Shama Bhama, Naanu Nanna Hendthi.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X