For Quick Alerts
  ALLOW NOTIFICATIONS  
  For Daily Alerts

  ಆರೋಗ್ಯ ಹದಗೆಟ್ಟಿದೆ ಚಿಕಿತ್ಸೆಗೆ ಹಣ ಸಹಾಯ ಮಾಡಿ ಎಂದು ಅಂಗಲಾಚಿದ ನಟಿ

  |

  ಕೊರೊನಾ ಬಂದಮೇಲಂತೂ ಸತತ ಆರು ತಿಂಗಳಿಂದ ಯಾವ ನಟ-ನಟಿಯರೂ ಕೆಲಸ ಮಾಡಿಲ್ಲ. ಧಾರಾವಾಹಿ ಕಲಾವಿದರಾದರೂ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ, ಆದರೆ ಸಿನಿಮಾ ಚಿತ್ರೀಕರಣ ಇನ್ನೂ ಪ್ರಾರಂಭವಾಗಿಲ್ಲ.

  ನಟ-ನಟಿಯರಿಗೆ ಹಣಕಾಸಿನ ಸಮಸ್ಯೆ ಇರುವುದಿಲ್ಲವೆಂದೇ ಬಹುತೇಕರು ನಂಬಿದ್ದಾರೆ. ಸ್ಟಾರ್ ನಟ-ನಟಿಯರ ಪಾಲಿಗೆ ಇದು ನಿಜವೂ ಹೌದು. ಆದರೆ ಎಲ್ಲ ನಟ-ನಟಿಯರ ಪರಿಸ್ಥಿತಿ ಚೆನ್ನಾಗಿ ಇರುವುದಿಲ್ಲ.

  ಕಾಮಿಡಿ ಶೋನಲ್ಲಿ ಕಣ್ಣೀರಿಟ್ಟ 'ನಿಜ ಹೀರೋ' ನಟ ಸೋನು ಸೂದ್ಕಾಮಿಡಿ ಶೋನಲ್ಲಿ ಕಣ್ಣೀರಿಟ್ಟ 'ನಿಜ ಹೀರೋ' ನಟ ಸೋನು ಸೂದ್

  ನಟ-ನಟಿಯರು ಭಾರಿ ಆರ್ಥಿಕ ಸಂಕಷ್ಟ ಎದುರಿಸಿ ಪಡಪಾರದ ಪಾಡುಗಳನ್ನು ಪಟ್ಟ ಎಷ್ಟೋ ಉದಾಹರಣೆಗಳು ಕನ್ನಡ ಚಿತ್ರರಂಗದಲ್ಲೂ ಸಾಕಷ್ಟಿದೆ. ಇದೀಗ ಮಲಯಾಳಂ ಸಿನಿಮಾ ನಟಿಯೊಬ್ಬರು ಆಪರೇಷನ್‌ ಮಾಡಿಸಿಕೊಳ್ಳಬೇಕು ಹಣ ಸಹಾಯ ಮಾಡಿರೆಂದು ಮನವಿ ಮಾಡಿದ್ದಾರೆ.

  ಸಹನಟಿಯಾಗಿ ನಟನೆ

  ಸಹನಟಿಯಾಗಿ ನಟನೆ

  ಮಲಯಾಳಂ ಸಿನಿಮಾದಲ್ಲಿ ಸಹನಟಿಯಾಗಿ ಹಲವು ವರ್ಷಗಳಿಂದ ಕೆಲಸ ಮಾಡಿರುವ ನಟಿ ಅಂಬಿಕಾ ರಾವ್ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರಿಗೆ ಶೀಘ್ರವೇ ಸೂಕ್ತ ಚಿಕಿತ್ಸೆ ದೊರೆಯಬೇಕಿದ್ದು, ಆದರೆ ಅದಕ್ಕೆ ಬೇಕಾದಷ್ಟು ಹಣ ಅವರ ಬಳಿ ಇಲ್ಲ.

  ಅಪರ್ಣಾ ಗೆ ಕಿಡ್ನಿ ಸಮಸ್ಯೆ

  ಅಪರ್ಣಾ ಗೆ ಕಿಡ್ನಿ ಸಮಸ್ಯೆ

  ಇದೀಗ ನಟಿ ಅಂಬಿಕಾ, ಮಾಧ್ಯಮಗಳ ಮೂಲಕ ಮನವಿ ಮಾಡಿದ್ದು, ತಮಗೆ ಕಿಡ್ನಿ ಸಮಸ್ಯೆ ಇದ್ದು, ವಾರಕ್ಕೆ ಎರಡು ಬಾರಿ ಡಯಾಲಿಸಿಸ್‌ ಮಾಡಿಸಬೇಕಿದ್ದು, ಈ ಪ್ರಕ್ರಿಯೆಗೆ ಸಾಕಷ್ಟು ಹಣ ಖರ್ಚಾಗುತ್ತದೆ ತಮಗೆ ಆರ್ಥಿಕ ಸಹಾಯ ಮಾಡಿರೆಂದು ಮನವಿ ಮಾಡಿದ್ದಾರೆ ನಟಿ.

  'ಕೊರೊನಾದಿಂದ ಸತ್ತು ಹೋಗಿ' ಎಂದು ಟ್ರೋಲ್ ಮಾಡಿದವರಿಗೆ ಅಮಿತಾಬ್ ಬಚ್ಚನ್ ಕ್ಲಾಸ್'ಕೊರೊನಾದಿಂದ ಸತ್ತು ಹೋಗಿ' ಎಂದು ಟ್ರೋಲ್ ಮಾಡಿದವರಿಗೆ ಅಮಿತಾಬ್ ಬಚ್ಚನ್ ಕ್ಲಾಸ್

  ಸಹೋದರನಿಗೂ ಆರೋಗ್ಯ ಸಮಸ್ಯೆ

  ಸಹೋದರನಿಗೂ ಆರೋಗ್ಯ ಸಮಸ್ಯೆ

  ನಟಿ ಅಂಬಿಕಾ ಎರಡು ವರ್ಷದಿಂದಲೂ ಅನಾರೋಗ್ಯದಿಂದ ಬಳಲುತ್ತಿದ್ದಾರಂತೆ. ಅವರನ್ನು ಅವರ ಸಹೋದರ ನೋಡಿಕೊಳ್ಳುತ್ತಿದ್ದರು. ಆದರೆ ಇತ್ತೀಚೆಗೆ ಅವರಿಗೆ ಪಾರ್ಶ್ವವಾಯು ಆಗಿ ಐಸಿಯುಗೆ ದಾಖಲಾದ ಕಾರಣ ಈಗ ಅಂಬಿಕಾ ಅವರಿಗೆ ಸಮಸ್ಯೆ ಎದುರಾಗಿದೆ

  ಸಂಘವು ಸಹಾಯ ಮಾಡುತ್ತಿದೆ

  ಸಂಘವು ಸಹಾಯ ಮಾಡುತ್ತಿದೆ

  ಅಂಬಿಕಾ ಅವರಿಗೆ ಕೇರಳ ಸಿನಿಮಾ ನಟ-ನಟಿಯರ ಸಂಘವು ಸಹಾಯ ಮಾಡುತ್ತಿದೆಯಂತೆ ಆದರೆ ಅದು ಬಹಳ ಕಡಿಮೆಯಾಗಿದೆಯಂತೆ. ಇದೀಗ ಅಂಬಿಕಾ ಅವರ ಬ್ಯಾಂಕ್ ಖಾತೆ ಸಂಖ್ಯೆ ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಹಲವರು ಸಹಾಯ ಮಾಡುತ್ತಿದ್ದಾರೆ.

  ಹಲವು ಸಿನಿಮಾದಲ್ಲಿ ನಟಿಸಿದ್ದರು ಅಂಬಿಕಾ

  ಹಲವು ಸಿನಿಮಾದಲ್ಲಿ ನಟಿಸಿದ್ದರು ಅಂಬಿಕಾ

  ವೈರಸ್, ಕುಂಬಲಂಗಿ ನೈಟ್ಸ್, ಅನುರಾಗ ಕರಿಕ್ಕಿನ್ ವೆಲ್ಲಂ, ಸಾಲ್ಟ್ ಆಂಡ್ ಪೆಪ್ಪರ್, ತಮಾಶಾ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕುಂಬಲಂಗಿ ನೈಟ್ಸ್ ಸಿನಿಮಾದಲ್ಲಿ ಅವರ ನಟನೆ ಸಾಕಷ್ಟು ಮೆಚ್ಚುಗೆ ಗಳಿಸಿತ್ತು.

  ನಿರೀಕ್ಷೆ ಹುಸಿ: ಚಿತ್ರಮಂದಿರಗಳ ತೆರೆಯಲು ಅವಕಾಶ ಇಲ್ಲನಿರೀಕ್ಷೆ ಹುಸಿ: ಚಿತ್ರಮಂದಿರಗಳ ತೆರೆಯಲು ಅವಕಾಶ ಇಲ್ಲ

  English summary
  Malayalam movie actress Ambika Rao facing serious health problems she seeks help for her treatment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X