ಬಹುಭಾಷಾ ನಟಿ ಲೈಂಗಿಕ ಪ್ರಕರಣ: ನಟ ದಿಲೀಪ್ ಬಂಧನ

By Suneel

ಬಹುಭಾಷಾ ಸ್ಟಾರ್ ನಟಿ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಯಾಳಂ ನಟ ದಿಲೀಪ್ ರನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಅಪಹರಣಕ್ಕೊಳಗಾಗಿ ಲೈಂಗಿಕ ದೌರ್ಜನ್ಯಕ್ಕೆ ಗುರಿಯಾಗಿದ್ದ ಬಹುಭಾಷಾ ಸ್ಟಾರ್ ನಟಿ ಪ್ರಕರಣದಲ್ಲಿ ಈವರೆಗೆ 6 ಜನರನ್ನು ಬಂಧಿಸಲಾಗಿದೆ.

Actor Dileep arrested in actress abduction case

ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದ ಬಹುಭಾಷಾ ಸ್ಟಾರ್ ನಟಿ ಇತ್ತೀಚೆಗೆ 'ತನ್ನ ವಿರುದ್ಧ ಮಾನಹಾನಿಕರ ಹೇಳಿಕೆ ನೀಡಿದ್ದಾರೆ ಎಂದು ನಟ ದಿಲೀಪ್ ಗೆ ಎಚ್ಚರಿಕೆ ನೀಡಿದ್ದರು. ಅಲ್ಲದೇ ಅವರ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡುತ್ತೇನೆ ಎಂದು ಬೆದರಿಕೆ ಹಾಕಿದ್ದರು. ನಟಿಯ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆ ನಟ ದಿಲೀಪ್ ರವರು ಇತ್ತೀಚೆಗೆ 12 ತಾಸುಗಳ ಕಾಲ ಪೊಲೀಸ್ ವಿಚಾರಣೆಗೆ ಒಳಗಾಗಿದ್ದರು. ಈಗ ಕೊನೆಗೂ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಬಹುಭಾಷಾ ನಟಿಯ ಕಿಡ್ನಾಪ್ ಮತ್ತು ಲೈಂಗಿಕ ಪ್ರಕರಣದಲ್ಲಿ ಕೈಜೋಡಿಸಿದ್ದಾರೆ ಎಂಬ ಹಿನ್ನೆಲೆಯಲ್ಲಿ ನಟ ದಿಲೀಪ್ ರನ್ನು ಇಂದು(ಸೋಮವಾರ) ಬೆಳಿಗ್ಗೆ ಕಸ್ಟಡಿಗೆ ತೆಗೆದುಕೊಂಡಿದ್ದ ಪೊಲೀಸರು ಅವರನ್ನು ಇಂದು ಸಂಜೆ ಬಂಧಿಸಿರುವುದಾಗಿ ದಾಖಲಾಗಿರುವುದು ಮೂಲಗಳಿಂದ ತಿಳಿದಿದೆ. ಅಲ್ಲದೇ ನಟಿ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಕೆಲವು ವರ್ಷಗಳ ಹಿಂದೆಯೂ ದಾಳಿ ನಡೆದಿತ್ತು. ಈ ವರ್ಷ ಫೆಬ್ರವರಿ 19 ರಂದು ಕೊಚ್ಚಿ ಹತ್ತಿರ ರಾತ್ರಿವೇಳೆ ನಡೆದ ದಾಳಿ ಎರಡನೇ ಬಾರಿಯದ್ದು ಎಂಬ ಮಾಹಿತಿ ಈ ಹಿನ್ನೆಲೆಯಲ್ಲಿ ಹೊರಬಿದ್ದಿದೆ.

ನಟಿ ಮೇಲೆ ದಾಳಿ ಮಾಡಿದ್ದ ಗ್ಯಾಂಗ್ ನ ಹಲವರ ಮೇಲೆ ಪೊಲೀಸರು ಈಗಾಗಲೇ ಏಪ್ರಿಲ್ ನಲ್ಲಿ ಚಾರ್ಜ್ ಶೀಟ್ ಸಲ್ಲಿಸಿದ್ದರು. ಕಳೆದ ತಿಂಗಳು ಈ ಪ್ರಕರಣದ ಮುಖ್ಯ ಆರೋಪಿ ಸುನಿಲ್ ಕುಮಾರ್(ಪಲ್ಸರ್ ಸುನಿ) ನಟ ದಿಲೀಪ್ ಗೆ ಹಣದ ಸಹಾಯ ಕೇಳಿ ಬರೆದಿದ್ದ ಪತ್ರದ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಕೈಜೋಡಿಸಿರುವವರ ತನಿಖೆಗಾಗಿ ಪೊಲೀಸರು ತನಿಖೆಯನ್ನು ಮತ್ತೆ ಮುಂದುವರೆಸಿದ್ದರು. ಇದರ ಬೆನ್ನೆಲ್ಲೇ ನಟ ದಿಲೀಪ್ ಸಹ ಸುನಿಲ್ ಕುಮಾರ್ ಸಹಚರರು 1.5 ಕೋಟಿ ಹಣ ನೀಡಿ ಎಂದು ಬ್ಲ್ಯಾಕ್ ಮೇಲ್ ಕರೆ ಮಾಡುತ್ತಿದ್ದಾರೆ ಎಂದು ಕೊಚ್ಚಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆದರೆ ದಿಲೀಪ್ ಪೊಲೀಸ್ ತನಿಖೆಗೆ ಒಳಗಾಗಿದ್ದ ಸಂದರ್ಭದಲ್ಲಿ ಈ ಪ್ರಕರಣದಲ್ಲಿ ಭಾಗಿಯಾಗಿಲ್ಲ ಎಂಬುದು ತಿಳಿದಿತ್ತು.

More from Filmibeat

English summary
Malayalam Actor Dileep arrested in Kerala actress abduction case
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X