Don't Miss!
- Technology
ಅತಿ ಕಡಿಮೆ ಬೆಲೆಯಲ್ಲಿ ಹೊಸ ಸ್ಮಾರ್ಟ್ವಾಚ್ ಪರಿಚಯಿಸಿದ ಫೈರ್ಬೋಲ್ಟ್ !
- Sports
IND vs NZ: ಭಾರತ ತಂಡದ ಡ್ರೆಸ್ಸಿಂಗ್ ರೂಂಗೆ ದಿಢೀರ್ ಭೇಟಿ ನೀಡಿದ ಎಂಎಸ್ ಧೋನಿ; ವಿಡಿಯೋ
- News
ಬೆಂಗಳೂರು: ಖಾದಿ ಗ್ರಾಮೋದ್ಯೋಗ ಸಂಸ್ಥೆಗೆ ಆರ್ಥಿಕ ಬಲ ತುಂಬಲಿದ್ದೇವೆ: ಸಿಎಂ ಬೊಮ್ಮಾಯಿ
- Lifestyle
ನಿಮ್ಮ ಗಂಡ 'ಅಮ್ಮನ ಮಗ'ವಾಗಿರುವುದರಿಂದ ತುಂಬಾನೇ ಸಮಸ್ಯೆ ಆಗುತ್ತಿದೆಯೇ?
- Finance
ಆಧಾರ್ ಕಾರ್ಡ್ ಸುರಕ್ಷತೆಗಾಗಿ ಯುಐಡಿಎಐ ನೂತನ ನಿಯಮ ತಿಳಿಯಿರಿ!
- Automobiles
ಕೈಗೆಟುಕುವ ಬೆಲೆಯಲ್ಲಿ ಮತ್ತೊಂದು ಎಸ್ಯುವಿ ಬಿಡುಗಡೆಗೊಳಿಸಲು ಸಜ್ಜಾದ ಮಾರುತಿ ಸುಜುಕಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕೇರಳ ಸರ್ಕಾರದ ನಿರ್ಧಾರ ತಿರಸ್ಕರಿಸಿದ ಮಮ್ಮುಟ್ಟಿ: ಮೆಚ್ಚುಗೆ ವ್ಯಕ್ತಪಡಿಸಿದ ಫ್ಯಾನ್ಸ್
ಭಾರತೀಯ ಸಿನಿಮಾರಂಗದಲ್ಲಿ ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ 50 ವರ್ಷ ಪೂರೈಸಿದ್ದಾರೆ. ಆಗಸ್ಟ್ 6ಕ್ಕೆ ಮಮ್ಮುಟ್ಟಿ ಚಿತ್ರರಂಗ ಪ್ರವೇಶಿಸಿ ಐದು ದಶಕ ಪೂರ್ಣಗೊಂಡಿದೆ. ಮಮ್ಮುಟ್ಟಿಯ ಈ ಸಾಧನೆಗೆ ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು ಹಾಗೂ ಇತರೆ ಸೆಲೆಬ್ರಿಟಿಗಳು ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬಂದಿತ್ತು.
ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿಯ ಈ ಅಪರೂಪದ ಸಾಧನೆಯನ್ನು ಗೌರವಿಸುವ ಉದ್ದೇಶದಿಂದ ಕೇರಳ ಸರ್ಕಾರ ವಿಶೇಷವಾದ ಕಾರ್ಯಕ್ರಮವೊಂದನ್ನು ಆಯೋಜಿಸಲು ಮುಂದಾಗಿತ್ತು ಎಂದು ವರದಿಯಾಗಿದೆ. ಆದರೆ, ಪಿಣರಾಯಿ ಸರ್ಕಾರದ ಈ ತೀರ್ಮಾನವನ್ನು ಮಮ್ಮುಟ್ಟಿ ನಿರಾಕರಿಸಿದ್ದಾರೆ ಎಂದು ಬಹಿರಂಗವಾಗಿದೆ. ಈ ಕುರಿತು ಮಲಯಾಳಂ ಫಿಲ್ಮಿಬೀಟ್ ವರದಿ ಮಾಡಿದೆ.
ನಟ
ಮಮ್ಮುಟಿ
ಸೇರಿ
300
ಮಂದಿ
ವಿರುದ್ಧ
ಪ್ರಕರಣ
ದಾಖಲು
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ 50ನೇ ವರ್ಷದ ಸಂಭ್ರಮ ಆಚರಣೆ ಮಾಡದಿರಲು ಮಮ್ಮುಟ್ಟಿ ಕೈಗೊಂಡು ನಿರ್ಧಾರಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂದೆ ಓದಿ...

ಸಾರ್ವಜನಿಕರ ದುಡ್ಡು ವ್ಯರ್ಥ ಮಾಡಬಾರದು
ಕೇರಳ ಸರ್ಕಾರದಿಂದ 50 ವರ್ಷ ಪೂರೈಸಿದ್ದಕ್ಕೆ ವಿಶೇಷ ಕಾರ್ಯಕ್ರಮ ಆಯೋಜನೆ ಬಗ್ಗೆ ಪ್ರತಿಕ್ರಿಯಿಸಿದ ಮಮ್ಮುಟ್ಟಿ, 'ಸರ್ಕಾರದಿಂದ ಅಂತಹ ಯಾವುದೇ ಕಾರ್ಯಕ್ರಮ ನಡೆಯುತ್ತಿಲ್ಲ' ಎಂದು ತಿಳಿಸಿದ್ದಾರೆ. 'ಸಾರ್ವಜನಿಕರ ಹಣದಿಂದ ಸುವರ್ಣ ಮಹೋತ್ಸವ ಆಚರಿಸಿಕೊಳ್ಳಲು ನಾನು ಬಯಸುವುದಿಲ್ಲ' ಎಂದು ಹೇಳಿ ಅಭಿಮಾನಿಗಳಿಂದ ಮೆಚ್ಚುಗೆ ಪಡೆದುಕೊಂಡಿದ್ದಾರೆ.

ಸಚಿವಾಲಯಕ್ಕೆ ಮಮ್ಮುಟ್ಟಿ ಸಂದೇಶ
ಮಲಯಾಳಂ ಮೆಗಾಸ್ಟಾರ್ ಸರ್ಕಾರದ ಚಿಂತನೆಯನ್ನು ನಿರಾಕರಿಸಿದ ಬಗ್ಗೆ ಸಂಸ್ಕೃತಿ ಮತ್ತು ಯುವ ವ್ಯವಹಾರಗಳ ರಾಜ್ಯ ಸಚಿವರಾದ ಸಜಿ ಚೆರಿಯನ್ ಬಹಿರಂಗಪಡಿಸಿದ್ದಾರೆ. ತಮ್ಮ ವೃತ್ತಿಜೀವನದ 50 ನೇ ವರ್ಷವನ್ನು ಆಚರಿಸಲು ಸರ್ಕಾರ ಮುಂದೆ ಬಂದಿದ್ದಕ್ಕೆ ಧನ್ಯವಾದ ಸಲ್ಲಿಸಿದ ಮಮ್ಮುಟ್ಟಿ, ಇಂತಹ ಕಾರ್ಯಕ್ರಮಕ್ಕಾಗಿ ಸಾರ್ವಜನಿಕರ ಹಣವನ್ನು ಖರ್ಚು ಮಾಡುವುದನ್ನು ನಾನು ಸಂಪೂರ್ಣವಾಗಿ ವಿರೋಧಿಸುತ್ತೇನೆ ಎಂದು ತಿಳಿಸಿರುವುದಾಗಿ ಹೇಳಿದ್ದಾರೆ.
275
ದಿನಗಳ
ಬಳಿಕ
ಮನೆಯಿಂದ
ಹೊರಗೆ
ಬಂದ
ಮಲಯಾಳಂ
ಸೂಪರ್
ಸ್ಟಾರ್

ದುಲ್ಕರ್ ಸಲ್ಮಾನ್ ಮಾಹಿತಿ ನೀಡಿದ್ದರು
ಮಮ್ಮುಟ್ಟಿ ಅವರ ಮಗ, ನಟ ದುಲ್ಕರ್ ಸಲ್ಮಾನ್ ಸಹ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಈ ಹಿಂದೆಯೇ ಮಾಹಿತಿ ನೀಡಿದ್ದರು. ತಮ್ಮ ವೃತ್ತಿಜೀವನದ ಈ ವಿಶೇಷ ಸಾಧನೆಯ ಸಂಭ್ರಮಾಚರಣೆ ಮಾಡುವುದನ್ನು ನಮ್ಮ ತಂದೆ ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದರು. 50 ವರ್ಷ ಪೂರೈಸಿದ್ದಕ್ಕೆ ಮಮ್ಮುಟ್ಟಿ ಅವರಿಗೆ ದುಲ್ಕರ್ ಶುಭಕೋರಿದ್ದರು. ಮೋಹನ್ ಲಾಲ್, ತೆಲುಗು ಮೆಗಾಸ್ಟಾರ್ ಚಿರಂಜೀವಿ, ಸುರೇಶ್ ಗೋಪಿ, ಪೃಥ್ವಿರಾಜ್ ಸುಕುಮಾರನ್, ನಿವಿನ್ ಪೌಲಿ ಸೇರಿದಂತೆ ಭಾರತೀಯ ಚಿತ್ರರಂಗದ ಖ್ಯಾತನಾಮರು ಸಾಮಾಜಿಕ ಜಾಲತಾಣದಲ್ಲಿ ಶುಭಹಾರೈಸಿದ್ದರು.

ಧನ್ಯವಾದ ಅರ್ಪಿಸಿದ ಸೂಪರ್ ಸ್ಟಾರ್
ಚಿತ್ರರಂಗದಲ್ಲಿ 50 ವರ್ಷ ಪೂರೈಸಿದ ಹಿನ್ನೆಲೆ ಶುಭಕೋರಿದ ಎಲ್ಲರಿಗೂ ಮಮ್ಮುಟ್ಟಿ ಧನ್ಯವಾದ ಅರ್ಪಿಸಿದರು. ಟ್ವಿಟ್ಟರ್ ಮೂಲಕ ಥ್ಯಾಂಕ್ಸ್ ಹೇಳಿದ ನಟ, ''ನಿಮ್ಮ ಹೃದಯಪೂರ್ವಕ ಶುಭಹಾರೈಕೆಗಳಿಂದ ನಾನು ಮುಳುಗಿ ಹೋಗಿದ್ದೇನೆ. ನನ್ನ ಸಹೋದ್ಯೋಗಿಗಳು ಹಾಗೂ ಎಲ್ಲರೂ ಶುಭಕೋರಿದ್ದಾರೆ. ಪ್ರತಿಯೊಬ್ಬರಿಗೂ ಧನ್ಯವಾದ ಹೇಳಲು ಬಯಸುತ್ತೇನೆ'' ಎಂದಿದ್ದರು.

1971ರಲ್ಲಿ ಚಿತ್ರರಂಗ ಪ್ರವೇಶ
ಮಮ್ಮುಟ್ಟಿ 1971ರಲ್ಲಿ ಮೊದಲ ಸಲ ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. 'ಅನುಭವಂಗಳ ಪಾಲೀಚಕಲ್' ಚಿತ್ರದಲ್ಲಿ ಜೂನಿಯರ್ ಕಲಾವಿದನಾಗಿ ಚೊಚ್ಚಲ ಬಾರಿಗೆ ಬಣ್ಣ ಹಚ್ಚಿದ್ದರು. ದೇವಲೋಕಂ ಎಂಬ ಚಿತ್ರದಲ್ಲಿ ನಾಯಕನಾಗಿ ಪರಿಚಯ ಆದರು. ಆದರೆ ಈ ಸಿನಿಮಾ ರಿಲೀಸ್ ಆಗಲೇ ಇಲ್ಲ. 'ಮೇಳಾ' ಎನ್ನುವ ಮತ್ತೊಂದು ಸಿನಿಮಾದಲ್ಲಿ ನಾಯನಕಾಗಿ ನಟಿಸಿದರು. ಇದು ಮೂರನೇ ಚಿತ್ರವಾಗಿದ್ದರೂ ನಾಯಕನಾಗಿ ತೆರೆಕಂಡ ಮೊದಲ ಸಿನಿಮಾ. ಮಮ್ಮುಟ್ಟಿ ಸುಮಾರು ಐದು ದಶಕಗಳಿಂದ ಮಲಯಾಳಂ, ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ಪೋಷಕ ಪಾತ್ರ, ಅತಿಥಿ ಪಾತ್ರಗಳು ಸೇರಿದಂತೆ ಸುಮಾರು 400ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟು ಮೂರು ಬಾರಿ ಅತ್ಯುತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ಸದ್ಯ ಮಮ್ಮುಟ್ಟಿ ಅಭಿನಯದ 'ಭೀಷ್ಮ ಪರ್ವಂ' ಸಿನಿಮಾ ತೆರೆಗೆ ಬರಬೇಕಿದೆ. ಈ ಚಿತ್ರದ ನಂತರ ಮತ್ತಷ್ಟು ಸಿನಿಮಾಗಳು ಕೈಯಲ್ಲಿದೆ.