For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಮೊದಲ ಸಲ' ನಟಿ ಭಾಮಾ

  |

  ಕನ್ನಡ ಚಿತ್ರಗಳಲ್ಲೂ ಮಿಂಚಿರುವ ಮಲೆಯಾಳಂ ಭಾಷೆಯ ಖ್ಯಾತ ನಟಿ ಭಾಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ ಭಾಮಾ-ಅರುಣ್ ವಿವಾಹ ಮಹೋತ್ಸವ ಇಂದು ಕೇರಳದಲ್ಲಿ ಅದ್ಧೂರಿಯಾಗಿ ನೆರವೇರಿದೆ.

  ಪ್ರಿಯಾ ಮಾತ್ರವಲ್ಲ. ಮಲೆಯಾಳಂನ ಬೇರೇ ನಾಯಕಿಯರಿಗೂ ಬಹಳ ಅದೃಷ್ಟವಿದೆ | Filmibeat Kannada

  ಕೇರಳದ ಕೊಟ್ಟಾಯಂನಲ್ಲಿ ಇವತ್ತು (ಜನವರಿ 30) ನಟಿ ಭಾಮಾ ಮತ್ತು ಅರುಣ್ ರವರ ಕಲ್ಯಾಣ ವಿಜೃಂಭಣೆಯಿಂದ, ಅಷ್ಟೇ ಸಾಂಪ್ರದಾಯಿಕವಾಗಿ ಜರುಗಿದೆ.

  ಉದ್ಯಮಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 'ಶೈಲೂ' ನಟಿ ಭಾಮಾಉದ್ಯಮಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡ 'ಶೈಲೂ' ನಟಿ ಭಾಮಾ

  ನಟಿ ಭಾಮಾ ಮತ್ತು ಅರುಣ್ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ...

  ತಾಳಿ ಕಟ್ಟುವ ಶುಭ ವೇಳೆ...

  ತಾಳಿ ಕಟ್ಟುವ ಶುಭ ವೇಳೆ...

  ಹಿಂದು ಸಂಪ್ರದಾಯದಂತೆ ನಟಿ ಭಾಮಾ ಮತ್ತು ಅರುಣ್ ಇಂದು ವೈವಾಹಿಕ ಬದುಕು ಆರಂಭಿಸಿದರು. ಭಾಮಾ ಕೊರಳಿಗೆ ಅರುಣ್ ತಾಳಿ ಕಟ್ಟುವ ಶುಭ ವೇಳೆಯಲ್ಲಿ ಕ್ಲಿಕ್ ಆಗಿರುವ ಫೋಟೋ ಇದು.

  ಮಿರಿ ಮಿರಿ ಮಿಂಚಿದ ವಧು-ವರ

  ಮಿರಿ ಮಿರಿ ಮಿಂಚಿದ ವಧು-ವರ

  ಮುಹೂರ್ತ-ಧಾರೆ ಸಮಾರಂಭಕ್ಕೆ ಕೆಂಪು ಬಣ್ಣದ ಕಾಂಚೀಪುರಂ ಸೀರೆಯಲ್ಲಿ ವಧು ಭಾಮಾ ಮಿಂಚಿದರೆ, ಬಿಳಿ ಮತ್ತು ಗೋಲ್ಡನ್ ಬಣ್ಣದ ಪಂಚೆ ಶಲ್ಯ ತೊಟ್ಟು ವರ ಅರುಣ್ ಹೀರೋ ರೀತಿ ಸಿದ್ಧವಾಗಿದ್ದರು.

  ಶುಭ ಕೋರಿದ ಚಿತ್ರರಂಗದ ಗೆಳೆಯರು

  ಶುಭ ಕೋರಿದ ಚಿತ್ರರಂಗದ ಗೆಳೆಯರು

  ಉಭಯ ಕುಟುಂಬಸ್ಥರು, ಸ್ನೇಹಿತರು ಭಾಮಾ-ಅರುಣ್ ಕಲ್ಯಾಣಕ್ಕೆ ಸಾಕ್ಷಿಯಾಗಿ ಆಶೀರ್ವಾದ ಮಾಡಿದರು. ಚಿತ್ರರಂಗದ ಸ್ನೇಹಿತರಾದ ಸುರೇಶ್ ಗೋಪಿ, ವಿನು ಮೋಹನ್, ಮೀರಾ ಮದುವೆಗೆ ಬಂದು ನವ ವಧು-ವರರಿಗೆ ಶುಭಾಶಯ ಕೋರಿದರು.

  ಯಾರೀ ಅರುಣ್.?

  ಯಾರೀ ಅರುಣ್.?

  ಭಾಮಾ ಪತಿ ಅರುಣ್ ಕೆನಡಾದಲ್ಲಿ ವಿಧ್ಯಾಭ್ಯಾಸ ಮುಗಿಸಿದ್ದಾರೆ. ಸದ್ಯ ದುಬೈನಲ್ಲಿ ಬ್ಯುಸಿನೆಸ್ ಮಾಡುತ್ತಿದ್ದಾರೆ. ಭಾಮಾ ಹಾಗೂ ಅರುಣ್ ಕುಟುಂಬದ ನಡುವೆ ಅನೇಕ ವರ್ಷಗಳಿಂದ ಒಡನಾಟ ಇದ್ದು, ಇಬ್ಬರ ನಡುವೆ ಪರಿಚಯ ಇತ್ತು.

  ನಟಿ ಭಾಮಾ ಕುರಿತು...

  ನಟಿ ಭಾಮಾ ಕುರಿತು...

  ನಟಿ ಭಾಮಾ ಮಲೆಯಾಳಂನಲ್ಲಿ ಹೆಚ್ಚು ಜನಪ್ರಿಯತೆ ಹೊಂದಿದ್ದಾರೆ. ಕನ್ನಡದಲ್ಲಿಯೂ ಒಳ್ಳೆ ಒಳ್ಳೆಯ ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. 'ಶೈಲೂ', 'ಮೊದಲು ಸಲ', 'ಅರ್ಜುನ' 'ಆಟೋ ರಾಜ', 'ರಾಗ' ಭಾಮಾ ನಟನೆಯ ಪ್ರಮುಖ ಸಿನಿಮಾಗಳಾಗಿವೆ.

  English summary
  Actress bhama got married with Arun.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X