Don't Miss!
- News
ಇಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ಜನ್ಮದಿನ: ತಂದೆ ತಾಯಿಯ ಸಮಾಧಿಗೆ ಪೂಜೆ ಸಲ್ಲಿಸಿದ ಸಿಎಂ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ಸರ್ಫರಾಜ್ ಖಾನ್ಗೆ ಅವಕಾಶ ಇಲ್ಲ: ಬಿಸಿಸಿಐ ನೀಡಿದ ಭರವಸೆ ಏನು?
- Technology
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕ್ಯಾನ್ಸರ್ ಗೆದ್ದ 'ಗೂಳಿ' ಸಿನಿಮಾ ನಟಿಗೆ ಮತ್ತೊಂದು ಕಾಯಿಲೆ: ಸೂರ್ಯನ ಕಿರಣಗಳೇ ಮದ್ದು!
ಬಹಳ ಮಂದಿ ಸಿನಿಮಾ ಸೆಲೆಬ್ರೆಟಿಗಳು ಅನಾರೋಗ್ಯದಿಂದ ಬಳಲುತ್ತಿದ್ದಾರೆ. ನಟಿ ಮಮತಾ ಮೋಹನ್ ದಾಸ್ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದಿದ್ದರು. ಆದರೆ ಈಗ ಆಕೆಗೆ ಮತ್ತೊಂದು ಸಮಸ್ಯೆ ಕಾಣಿಸಿಕೊಂಡಿದೆ. ಈ ವಿಚಾರವನ್ನು ಮಮತಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟಿ ಸಮಂತಾ ಮಯೋಸೈಟಿಸ್ ಎನ್ನುವ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದಾರೆ. ಬಾಲಿವುಡ್‌ನಲ್ಲಿ ಹಲವು ಮಾರಕ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಕೆಲವರು ಈಗಾಗಲೇ ಅದರಿಂದ ಚೇತರಿಸಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮಮತಾ ಮೋಹನ್ ದಾಸ್ ಮತ್ತೊಮ್ಮೆ ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ ಎನ್ನುವ ಗುಸು ಗುಸು ಕೇಳಿ ಬಂದಿತ್ತು. ಆದರೆ ಆಕೆ ಅದೆಲ್ಲಾ ಸುಳ್ಳು, ಸುಖಾ ಸುಮ್ಮಗೆ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದಿದ್ದರು. "ನಿಮ್ಮ ಸುದ್ದಿಗಳನ್ನು ನೋಡಿ ನನ್ನ ಆಪ್ತರು ಫೋನ್ , ಮೆಸೇಜ್ ಮಾಡಿ ನನ್ನ ಆರೋಗ್ಯ ವಿಚಾರಿಸುತ್ತಿದ್ದಾರೆ. ಈ ಬಾರಿ ಕ್ಯಾನ್ಸರ್ ವಿರುದ್ಧ ನನ್ನಿಂದ ಹೋರಾಡಲು ಸಾಧ್ಯವಾಗುತ್ತಿಲ್ಲ ಅಂತೆಲ್ಲಾ ಹೇಳುತ್ತಿದ್ದೀರಾ. ಇದೆಲ್ಲ ಸುಳ್ಳು" ಎಂದಿದ್ದರು.
ಸ್ವಿಮ್ಮಿಂಗ್
ಪೂಲ್‌ನಲ್ಲಿ
ಹಲ್‌ಚಲ್
ಎಬ್ಬಿಸಿದ
ಕೀರ್ತಿ
ಸುರೇಶ್:
ಮಹಾನಟಿ
ಬಿಸಿಯೇರಿಸುವ
ಫೋಟೊಗಳು
ಮಮತಾ ಮೋಹನ್ ದಾಸ್ ಕನ್ನಡದ 'ಗೂಳಿ' ಚಿತ್ರದಲ್ಲೂ ನಟಿಸಿದ್ದಾರೆ. ಬಹ್ರೇನ್‌ನಲ್ಲಿ ಹುಟ್ಟಿ ಬೆಳೆದ ಮಮತಾ ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಡಿಗ್ರಿ ಪಡೆದುಕೊಂಡಿದ್ದರು.

ಮಮತಾಗೆ ವಿಟಿಲಿಗೊ ಸಮಸ್ಯೆ
ಮಲಯಾಳಂ ನಟಿ ಮಮತಾ ಮೋಹನ್ ದಾಸ್ ಆಟೋ ಇಮ್ಯೂನ್ ಕಾಯಿಲೆಯ ವಿಟಲಿಗೋದಿಂದ ಬಳಲುತ್ತಿರುವ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ. ಇದನ್ನು ತೊನ್ನು ರೋಗ ಎಂದು ಕೂಡ ಕರೆಯುತ್ತಾರೆ. ಕ್ಯಾನ್ಸರ್ ವಿರುದ್ಧ್ ಹೋರಾಡಿ ಗೆದ್ದಿದ್ದ ನಟಿ ಈಗ ಮತ್ತೊಂದು ಸಮಸ್ಯೆಯಿಂದ ಬಳಲುತ್ತಿರುವ ಸಂಗತಿ ಅಭಿಮಾನಿಗಳಿಗೆ ಆತಂಕ ತಂದಿದೆ. ವಿಟಿಲಿಗೊದಿಂದ ಬಳಲುವವರು ಚರ್ಮದ ಬಣ್ಣ ಕಳೆದುಕೊಳ್ಳುತ್ತಾರೆ. ಇದರಿಂದ ಮೆಲಟೋನಿನ್ ಸೃಷ್ಟಿಸುವ ಚರ್ಮದ ಕೋಶಗಳನ್ನು ಸಾಯುವಂತೆ ಅಥವಾ ಕೆಲಸವೇ ಮಾಡದಂತೆ ತಡೆಯುತ್ತದೆ. ಇದು ಮಾರಣಾಂತಕ ಅಲ್ಲದೇ ಇದ್ದರೂ ಚರ್ಮದ ಬಣ್ಣ ಬದಲಾಗಿ ಸಮಸ್ಯೆ ಎದುರಾಗುತ್ತದೆ.
ಮಮತಾ ಎಮೋಷನಲ್ ಪೋಸ್ಟ್
ಮಮತಾ ತಮಗಿರುವ ಚರ್ಮದ ಸಮಸ್ಯೆ ಬಗ್ಗೆ ಕಾವ್ಯಾತ್ಮಕವಾಗಿ ಬರೆದುಕೊಂಡಿದ್ದಾರೆ. "ಪ್ರೀತಿಯ ಸೂರ್ಯದೇವ. ಇಂದೆಂದಿಗಿಂತ ನಾನು ಈಗ ನಿನ್ನನ್ನು ಹೆಚ್ಚು ಅಪ್ಪಿಕೊಳ್ಳುತ್ತಿದ್ದೇನೆ. ನನ್ನ ಶರೀರದ ಬಣ್ಣ ಬದಲಾಗುತ್ತಿದೆ. ಅದಕ್ಕೆ ನೀನು ಬರುವುದಕ್ಕು ಮುನ್ನ ಎದ್ದು ನಿನ್ನ ಕಿರಣಗಳಿಗಾಗಿ ಕಾಯುತ್ತೇನೆ. ನಿನ್ನ ಶಕ್ತಿಯನ್ನು ನನಗೆ ಕೊಡು. ಜೀವನವಿಡಿ ನಿನಗೆ ಋಣಿಯಾಗಿ ಇರುತ್ತೇನೆ" ಎಂದು ಬರೆದುಕೊಂಡಿದ್ದಾರೆ. ಅದರ ಅರ್ಥ ಸೂರ್ಯನ ಬೆಳಗಿನ ಕಿರಣಗಳು ಮಮತಾಗೆ ಇರುವ ವಿಟಿಲಿಗೊ ಕಾಯಿಲೆಗೆ ರಾಮಬಾಣ ಎನ್ನುವುದು ಗೊತ್ತಾಗುತ್ತಿದೆ.

ಧೈರ್ಯ ತುಂಬಿದ ಅಭಿಮಾನಿಗಳು
ನಟಿ ಮಮತಾ ಮೋಹನ್ ದಾಸ್ ಪೋಸ್ಟ್ ಅಭಿಮಾನಿಗಳಿಗೆ ಬೇಸರ ತಂದಿದೆ. ಈಗಷ್ಟೇ ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ನಟಿಗೆ ಇದೆಂಥಾ ಶಿಕ್ಷೆ ಎನ್ನುತ್ತಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಅಭಿಮಾನಿಗಳು ಪ್ರತಿಕ್ರಿಯಿಸಿ ಶೀಘ್ರ ಚೇತರಿಸಿಕೊಳ್ಳುವಂತೆ ಪ್ರಾರ್ಥಿಸುತ್ತಿದ್ದಾರೆ. ನೀನು ಒಬ್ಬ ಫೈಟರ್, ಎಂದು ಧೈರ್ಯ ತುಂಬುತ್ತಿದ್ದಾರೆ. ಕ್ಯಾನ್ಸರ್‌ನ ಹಿಮ್ಮೆಟಿಸಿದಂತೆ ಇದರಿಂದಲೂ ಹೊರಬರುತ್ತೀಯಾ ಎನ್ನುತ್ತಿದ್ದಾರೆ. ಮಮತಾ ಕೊನೆಯದಾಗಿ ಮಲಯಾಳಂನ 'ಜನ ಗಣ ಮನ' ಚಿತ್ರದಲ್ಲಿ ನಟಿಸಿದ್ದರು.

'ಗೂಳಿ' ಚಿತ್ರದಲ್ಲಿ ನಟನೆ
ಮಾಲಿವುಡ್ ಬ್ಯೂಟಿ ಮಮತಾ ಮೋಹನ್ ದಾಸ್ ಹೆಚ್ಚು ಮಲಯಾಳಂ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಇನ್ನುಳಿದಂತೆ ತೆಲುಗು, ತಮಿಳು, ಕನ್ನಡ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಕನ್ನಡದ 'ಗೂಳಿ' ಚಿತ್ರದಲ್ಲಿ ಸುದೀಪ್ ಜೋಡಿಯಾಗಿ ಮಿಂಚಿದ್ದರು. ಗಾಯಕಿ ಆಗಿಯೂ ಗುರ್ತಿಸಿಕೊಂಡಿರುವ ಚೆಲುವೆ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ.