For Quick Alerts
  ALLOW NOTIFICATIONS  
  For Daily Alerts

  ಹಸಿರು ಡ್ರೆಸ್‌ನಲ್ಲಿ ಹಾಟ್ ಲುಕ್ ಕೊಟ್ಟ ಮೀರಾ ಜಾಸ್ಮಿನ್ ಫೋಟೊಗಳು ವೈರಲ್

  |

  ಈ ಮಲಯಾಳ ನಟಿ ಯಾರಿಗೆ ಗೊತ್ತಿಲ್ಲ ಹೇಳಿ? ದಕ್ಷಿಣ ಭಾರತ ಎಲ್ಲಾ ಭಾಷೆಯ ಸಿನಿಪ್ರೇಮಿಗಳಿಗೂ ಗೊತ್ತು. ಮಲಯಾಳಂ, ತೆಲುಗು, ತಮಿಳು ಹಾಗೂ ಕನ್ನಡ ಸಿನಿಮಾದಲ್ಲಿ ನಟಿಸಿ ಉತ್ತುಂಗದಲ್ಲಿದ್ದ ನಟಿ ಮೀರಾ ಜಾಸ್ಮಿನ್. ಈ ನಟಿ ತನ್ನ ವೃತ್ತಿ ಬದುಕಿನ ಉತ್ತುಂಗದಲ್ಲಿರುವಾಗಲೇ ಸಿನಿಮಾದಿಂದ ದೂರ ಉಳಿದಿದ್ದರು. ಅದಕ್ಕೆ ಕಾರಣ ವೈವಾಹಿಕ ಬದುಕು. ಆದ್ರೀಗ ಮತ್ತೆ ಕೆಲವು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿದ್ದಾರೆ.

  ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಿಸಿದ 'ಅರಸು' ಸಿನಿಮಾದಲ್ಲಿ ಮೀರಾ ಜಾಸ್ಮಿನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಅದು ಅವರು ಉತ್ತುಂಗದಲ್ಲಿದ್ದ ಕಾಲ. ಆಗಲೇ ಪುನೀತ್ ರಾಜ್‌ಕುಮಾರ್, ರಮ್ಯಾ ಹಾಗೂ ಮೀರಾ ಜೋಡಿ 'ಅರಸು' ಅಂತಹ ಬ್ಲಾಕ್‌ಬಸ್ಟರ್ ಸಿನಿಮಾವನ್ನು ನೀಡಿತ್ತು. ಹೀಗಾಗಿ ಕನ್ನಡಿಗರು ಈ ನಟಿಯನ್ನು ಮರೆಯುವುದಕ್ಕೆ ಸಾಧ್ಯನೇ ಇಲ್ಲ.

  ಮತ್ತೆ ಹಾಟ್ ಫೋಟೊ ಹರಿಬಿಟ್ಟ ಮೀರಾ ಜಾಸ್ಮಿನ್ ಮತ್ತೆ ಹಾಟ್ ಫೋಟೊ ಹರಿಬಿಟ್ಟ ಮೀರಾ ಜಾಸ್ಮಿನ್

  ತೆಲುಗಿನಲ್ಲಿಯೂ ಮೀರಾ ಜಾಸ್ಮಿನ್ ತುಂಬಾನೇ ಫೇಮಸ್. 'ಅಮ್ಮಾಯಿ ಬಾಗುಂದಿ' ಸಿನಿಮಾ ಟಾಲಿವುಡ್‌ಗೆ ಕಾಲಿಟ್ಟಿದ್ದರು. ಬಳಿಕ ಪವನ್ ಕಲ್ಯಾಣ್ ಜೊತೆ'ಗುಡುಂಬ ಶಂಕರ್' ಸಿನಿಮಾ ನಟಿಸಿ ಸೈ ಎನಿಸಿಕೊಂಡಿದ್ದರು. ಪಕ್ಕಾ ಕಮರ್ಷಿಯಲ್ ಸಿನಿಮಾಗಳಲ್ಲೂ ಮೀರಾ ಕಾಣಿಸಿಕೊಂಡಿದ್ದರು. 'ಭದ್ರ', 'ರಾರಾಜು', 'ಆಕಾಶ ರಾಮಣ್ಣ', 'ಆ ಆ ಇ ಈ', 'ಬಂಗಾರ ಬಾಬು' ಅಂತ ಸಿನಿಮಾಗಳು ಮೀರಾ ಜಾಸ್ಮಿನ್ ದಕ್ಷಿಣ ಭಾರತದ ಸ್ಟಾರ್ ನಟಿಯನ್ನಾಗಿ ಮಾಡಿದ್ದವು.

  ಹಾಟ್ ಗ್ರೀನ್ ಡ್ರೆಸ್‌ನಲ್ಲಿ ಮಿಂಚಿದ ಮೀರಾ ಜಾಸ್ಮಿನ್

  ಫೆಬ್ರವರಿ 12, 2014ರಂದು ಮೀರಾ ಜಾಸ್ಮಿನ್ ಅನಿಲ್ ಜಾನ್ ಎಂಬುವವರನ್ನು ವಿವಾಹವಾಗಿದ್ದರು. ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿರುವ ಅನಿಲ್ ದುಬೈನಲ್ಲಿ ನೆಲೆಸಿದ್ದಾರೆ. ಹೆಚ್ಚು ಕಡಿಮೆ ಎಂಟು ವರ್ಷಗಳಿಂದ ಸಿನಿಮಾರಂಗದಿಂದ ಮೀರಾ ಜಾಸ್ಮಿನ್ ದೂರವಿದ್ದರು. ಆದ್ರೀಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಕಾರಣಕ್ಕಾಗಿಯೇ ಸೋಶಿಯಲ್ ಮೀಡಿಯಾದಲ್ಲಿ ಮೀರಾ ಜಾಸ್ಮಿನ್ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಪದೇ ಪದೆ ಗ್ಲಾಮರ್ ಫೋಟೊಗಳನ್ನು ಶೇರ್ ಮಾಡುತ್ತಿದ್ದಾರೆ.

  ಮೀರಾ ಜಾಸ್ಮಿನ್ ಈ ಫೋಟೊಗಳನ್ನು ನೋಡಿ ಸಿನಿ ಪ್ರೇಮಿಗಳು 8 ವರ್ಷದ ಹಿಂದಕ್ಕೆ ಹೋಗಿದ್ದಾರೆ. ಗ್ಲಾಮರಸ್‌ ಗ್ರೀನ್ ಡ್ರೆಸ್‌ನಲ್ಲಿ ಹಾಟ್ ಲುಕ್ ಕೊಟ್ಟಿದ್ದಾರೆ. ಈ ಪೋಟೊ ನೋಡಿದವರು ಮೀರಾ ಜಾಸ್ಮಿನ್ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಯಾಕೆಂದರೆ, ಮೀರಾ ಜಾಸ್ಮಿನ್‌ಗೀಗ 40 ವರ್ಷ. ಆದರೂ, ಅವರ ವಯಸ್ಸಿನ ಬಗ್ಗೆ ಅನುಮಾನ ಮೂಡಿದೆ. ಅದರಲ್ಲೂ ಈ ಫೋಟೊಗಳನ್ನು ನೋಡಿದ ಮೇಲಂತೂ ಅಭಿಮಾನಿಗಳು ಮತ್ತೆ ಫ್ಯಾನ್ ಆಗಿದ್ದಾರೆ.

  English summary
  Actress Meera Jasmine Green Dress Hot Photos Goes Viral, Know More.
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X