For Quick Alerts
  ALLOW NOTIFICATIONS  
  For Daily Alerts

  ಮೋಹನ್ ಲಾಲ್ ಗೆ ಪರೋಕ್ಷವಾಗಿ ತಿರುಗೇಟು ನೀಡಿದ ನಟಿ ರೇವತಿ

  |

  ಮೀಟೂ ಅಭಿಮಾನ ಸದ್ಯಕ್ಕೆ ಕಡಿಮೆ ಆಗಿದೆ. ಆದರೂ, ಜೋರಾಗಿ ಮಳೆ ಸುರಿದ ಮೇಲೆ ಹನಿ ಬೀಳುವ ಹಾಗೆ ಈಗಲೂ ಅಲ್ಲೊಂದು.. ಇಲ್ಲೊಂದು ಮೀಟೂ ಗಲಾಟೆಗಳು ನಡೆಯುತ್ತಿದೆ. ಸದ್ಯ ಮಾಲಿವುಡ್ ಅಂಗಳದಲ್ಲಿ ಮೀಟೂ ಚರ್ಚೆ ಜೋರಾಗಿದೆ.

  #ಮೀಟೂ ಬಗ್ಗೆ ಕಾಮೆಂಟ್: ಪ್ರೀತಿ ಜಿಂಟಾ ಬಗ್ಗೆ ಟ್ವೀಟಿಗರು ಗರಂ #ಮೀಟೂ ಬಗ್ಗೆ ಕಾಮೆಂಟ್: ಪ್ರೀತಿ ಜಿಂಟಾ ಬಗ್ಗೆ ಟ್ವೀಟಿಗರು ಗರಂ

  ನಟ ಮೋಹನ್ ಲಾಲ್ ಇತ್ತೀಚಿಗಷ್ಟೆ ಮೀಟೂ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದರು. ''ಮಲೆಯಾಳಂ ಚಿತ್ರರಂಗದಲ್ಲಿ ಮೀಟೂ ಬಗ್ಗೆ ಯಾವುದೇ ದೊಡ್ಡ ಸಮಸ್ಯೆ ಇಲ್ಲ. ಮೀಟೂ ಒಂದು ಅಭಿಯಾನ ಅಂತ ಭಾವಿಸಬೇಡಿ. ಇದೊಂದು ಫ್ಯಾಶನ್ ಆಗಿಬಿಟ್ಟಿದೆ.'' ಎಂದು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದರು.

  'ಮೀಟೂ' ಆರೋಪ ಮಾಡಿದ್ದಕ್ಕೆ ಗಾಯಕಿ ಚಿನ್ಮಯಿ ಸಿನಿಜೀವನ ಅಂತ್ಯ.! 'ಮೀಟೂ' ಆರೋಪ ಮಾಡಿದ್ದಕ್ಕೆ ಗಾಯಕಿ ಚಿನ್ಮಯಿ ಸಿನಿಜೀವನ ಅಂತ್ಯ.!

  ಮೋಹನ್ ಲಾಲ್ ಅವರ ಹೇಳಿಕೆಗೆ ಈಗ ನಟಿ ರೇವತಿ ತಿರುಗೇಟು ನೀಡಿದ್ದಾರೆ. ಪರೋಕ್ಷವಾಗಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೋಹನ್ ಲಾಲ್ ಅವರಿಗೆ ಟಾಂಗ್ ನೀಡಿದ್ದಾರೆ.

  ''ಮೀಟೂ ಅಭಿಯಾನದ ಬಗ್ಗೆ ಇತ್ತೀಚಿಗಷ್ಟೆ ಒಬ್ಬ ಹೆಸರಾಂತ ನಟರೊಬ್ಬರು ಮಾತನಾಡಿದ್ದರು. ಅಂತಹ ವ್ಯಕ್ತಿಗಳಲ್ಲಿ ನಾವು ಹೇಗೆ ಸೂಕ್ಷ್ಮತೆಯನ್ನು ತರುವುದು. ಅಂಜಲಿ ಮೆನನ್ ಹೇಳಿದ ಹಾಗೆ ಮಂಗಳ ಗ್ರಹದಿಂದ ಬಂದವರಿಗೆ ನಿಂದನೆ ಮಾಡಿದರೆ ಅರ್ಥ ಆಗುವುದಿಲ್ಲ. ಆ ರೀತಿಯ ಈ ವ್ಯಕ್ತಿಗಳಲ್ಲಿ ಹೇಗೆ ಬದಲಾವಣೆ ತರಲು ಸಾಧ್ಯ'' ಎಂದು ಬರೆದುಕೊಂಡಿದ್ದಾರೆ.

  ಅಂದಹಾಗೆ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯಾಗಿರುವ ರೇವತಿ ತಮಿಳು, ಮಲೆಯಾಳಂ, ಹಿಂದಿ, ಕನ್ನಡ ಭಾಷೆಗಳಲ್ಲಿ ನಟಿಸಿದ್ದಾರೆ. ಜೊತೆಗೆ 'Women In Cinema Collective'' (WCC) ಸಂಸ್ಥೆಯ ಸದಸ್ಯ ಸಹ ಆಗಿದ್ದಾರೆ.

  English summary
  Actress revathi unhappy with Mohanlal comment on Metoo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X