For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ಕಿರುಕುಳ ನೀಡಿದ 14 ಜನರ ಹೆಸರು ಬಹಿರಂಗಪಡಿಸಿದ ನಟಿ ರೇವತಿ

  |

  ಮಲಯಾಳಂ ನಟಿ ರೇವತಿ ಸಂಪತ್, ತಮಗೆ ಲೈಂಗಿಕ ಕಿರುಕುಳ ನೀಡಿದ್ದ 14 ಜನರ ಹೆಸರನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದಾರೆ.

  ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಪೋಸ್ಟ್ ಬರೆದಿರುವ ನಟಿ ರೇವತಿ, ತನಗೆ ಲೈಂಗಿಕ ಕಿರುಕುಳ ನೀಡಿದವರ ಹೆಸರು ಮತ್ತು ಇತರೆ ಮಾಹಿತಿಗಳನ್ನು ಬರೆದಿದ್ದಾರೆ. ಪಟ್ಟಿಯಲ್ಲಿ ಸಿನಿಮಾ ಸೆಲೆಬ್ರಿಟಿಗಳು, ರಾಜಕಾರಣಿ ಮಾತ್ರವೇ ಅಲ್ಲದೆ ಸಬ್ ಇನ್‌ಸ್ಪೆಕ್ಟರ್‌ ಹಾಗೂ ಇನ್ನೂ ಹಲವು ರಂಗಗಳಿಗೆ ಸೇರಿದವರಿದ್ದಾರೆ.

  'ಈ ಪಟ್ಟಿಯು ನನಗೆ ಲೈಂಗಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಮಾತಿನಿಂದ ಕಿರುಕುಳ ನೀಡಿದ ಜನರ ಹೆಸರುಗಳನ್ನು ಒಳಗೊಂಡಿದೆ' ಎಂದು ನಟಿ ರೇವತಿ ಸಂಪತ್ ಹೇಳಿದ್ದಾರೆ.

  * ಸಿನಿಮಾದ ನಟ ಸಿದ್ಧಿಕಿ

  * ನಿರ್ದೇಶಕ ರಾಜೇಶ್ ತೋಚ್ರಿವರ್

  * ಫೋಟೊಗ್ರಾಫರ್ ಆಶಿಕ್ ಮಹಿ

  * ನಟ ಶಿಜು

  * ಕೇರಳ ಫ್ಯಾಷನ್ ಲೀಗ್ ಸಂಸ್ಥಾಪಕ ಅಭಿಲ್ ದೇವ್

  * ವೈದ್ಯ ಅಜಯ್ ಪ್ರಭಾಕರ್

  * ತಿರುವನಂತಪುರಂನ ಪೂನತ್ತೂರು ಪೊಲೀಸ್ ಠಾಣೆಯ ಸಬ್‌ ಇನ್‌ಸ್ಪೆಕ್ಟರ್ ಬಿನು

  * ಮ್ಯಾಕ್ಸ್‌ವೆಲ್ ಜೋಶ್ ಕಿರು ಚಿತ್ರ ನಿರ್ದೇಶಕ

  * ಡಿವೈಎಫ್‌ಐ ಮುಖಂಡ ನಂದು ಅಶೋಕನ್

  * ಜಾಹೀರಾತು ನಿರ್ದೇಶಕ ಶನೋಬ್ ಕರುವತ್

  * ಕಾಸ್ಟಿಂಗ್ ನಿರ್ದೇಶಕ ರಾಜೇಂದ್ ಪೈ

  * ಇಎಸ್‌ಎಎಫ್ ಬ್ಯಾಂಕ್ ಏಜೆಂಟ್ ಸರುನ್ ಲಿಯೊ

  * ಹೀಗಳೆದಿದ್ದ ಎಂಎಸ್ ಪದೂಶ್

  * ಸಾಮಾಜಿಕ ಜಾಲತಾಣ ಮೂಲಕ ಕಿರುಕುಳ ಕೊಟ್ಟಿದ್ದ ಸೌರಭ್ ಕೃಷ್ಣನ್ ಹೆಸರುಗಳು ಪಟ್ಟಿಯಲ್ಲಿವೆ.

  27 ವರ್ಷದ ನಟಿ ರೇವತಿ ಸಂಪತ್ ಕಿರುಚಿತ್ರ 'ವಫ್ತ್'ನಲ್ಲಿ ನಟಿಸುವ ಮೂಲಕ ಬೆಳಕಿಗೆ ಬಂದರು. ನಂತರ 2019 ರಲ್ಲಿ 'ಪಟ್ನಾಗರ್' ಸಿನಿಮಾದ ಮೂಲಕ ಸಿನಿಮಾಕ್ಕೆ ಪಾದಾರ್ಪಣೆ ಮಾಡಿದರು. ನಟಿಯ ಜೊತೆಗೆ ಹೋರಾಟಗಾರ್ತಿಯೂ ಆಗಿರುವ ರೇವತಿ, ಮನಃಶಾಸ್ತ್ರ ವಿಷಯದಲ್ಲಿ ಪದವಿಯನ್ನೂ ಗಳಿಸಿದ್ದಾರೆ.

  Sudeep ಅವರು Chess ಆಡುವಾಗ ಮೋಸ ಮಾಡಿದ ಆರೋಪ | Filmibeat Kannada

  ರೇವತಿಯ ಫೇಸ್‌ಬುಕ್‌ ಪೋಸ್ಟ್ ಕೇರಳದಲ್ಲಿ ಭಾರಿ ಸಂಚಲನ ಮೂಡಿಸಿದ್ದು, ರೇವತಿಯು ಪಟ್ಟಿಯಲ್ಲಿ ಹೆಸರಿಸಿರುವ ಎಲ್ಲರನ್ನೂ ಬಂಧಿಸಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.

  English summary
  Malayalam actress Revathy Sampath written 14 people name who abused her physically and mentaly.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X