For Quick Alerts
  ALLOW NOTIFICATIONS  
  For Daily Alerts

  ಅಣ್ಣನ ಬಳಿಕ ತಮ್ಮನ ಸಿನಿಮಾಗೆ ನಾಯಕಿಯಾದ 'ಸೂರರೈ ಪೊಟ್ರು' ಸುಂದರಿ ಅಪರ್ಣಾ

  |

  ತಮಿಳು ಸಿನಿಮಾರಂಗದ ಖ್ಯಾತ ನಟ ಸೂರ್ಯ ಅಭಿನಯದ ಸೂರರೈ ಪೊಟ್ರು ಸಿನಿಮಾ ಮೂಲಕ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ನಟಿ ಅಪರ್ಣಾ ಬಾಲಮುರಳಿ. ರಾತ್ರೋರಾತ್ರಿ ಸ್ಟಾರ್ ಆದ ಅಪರ್ಣಾ ಇಂದು ದಕ್ಷಿಣ ಭಾರತದ ಬಹು ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ನೈಜ ಘಟನೆ ಆಧಾರಿತ ಸೂರರೈ ಪೊಟ್ರು ಚಿತ್ರದಲ್ಲಿ ಅಪರ್ಣಾ ಅದ್ಭುತ ನಟನೆ ಅಭಿಮಾನಿಗಳ ಹೃದಯ ಗೆದ್ದಿತ್ತು.

  ಸುಧಾ ಕೊಂಗಾರ ನಿರ್ದೇಶನದಲ್ಲಿ ಮೂಡಿಬಂದ ಸೂರರೈ ಪೊಟ್ರು ಸಿನಿಮಾ ಕನ್ನಡಿಗ ಕ್ಯಾಪ್ಟನ್ ಗೋಪಿನಾಥ್ ಅವರ ಜೀವನಾಧಾರಿತ ಸಿನಿಮಾ. ಕ್ಯಾಪ್ಟನ್ ಗೋಪಿನಾಥ್ ಪಾತ್ರದಲ್ಲಿ ನಟ ಸೂರ್ಯ ಕಾಣಿಸಿಕೊಂಡಿದ್ದರೆ, ಪತ್ನಿಯ ಪಾತ್ರದಲ್ಲಿ ಅಪರ್ಣ ಬಾಲಮುರಳಿ ಮಿಂಚಿದ್ದರು.

  ನಟ ಸೂರ್ಯ ಮತ್ತು ಕಾರ್ತಿ ಸಹೋದರರಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ ನಟ ಸೂರ್ಯ ಮತ್ತು ಕಾರ್ತಿ ಸಹೋದರರಿಂದ ಸಿಎಂ ಪರಿಹಾರ ನಿಧಿಗೆ 1 ಕೋಟಿ ರೂ. ದೇಣಿಗೆ

  ನಟ ಸೂರ್ಯ ಪತ್ನಿ ಬೊಮ್ಮಿ ಪಾತ್ರದಲ್ಲಿ ಅಪರ್ಣಾ ಅಭಿಮಾನಿಗಳ ಮನಸೆಳೆದಿದ್ದರು. ಈ ಸಿನಿಮಾ ಆಸ್ಕರ್ ರೇಸ್ ನಲ್ಲೂ ಭಾಗಿಯಾಗಿತ್ತು. ಇನ್ನು ವಿಶೇಷ ಎಂದರೆ ಉತ್ತಮ ನಟಿ ಮತ್ತು ನಟಿ ಅರ್ಹತಾ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿತ್ತು. ಅಪರ್ಣಾಗೆ ಸಿನಿ ಜೀವನಕ್ಕೆ ಈ ಸಿನಿಮಾ ದೊಡ್ಡ ಮಟ್ಟದ ಯಶಸ್ಸಿನ ಚಿತ್ರವಾಗಿದೆ.

  2016ರಲ್ಲಿ ಬಿಡುಗಡೆಯಾದ 8 ತೊಟ್ಟಕ್ಕಲ್ ಸಿನಿಮಾ ಮೂಲಕ ತಮಿಳು ಸಿನಿಮಾರಂಗಕ್ಕೆ ಕಾಲಿಟ್ಟಿದ್ದ ಮಲಯಾಳಂ ನಟಿ ಅಪರ್ಣಾ, ಬಳಿಕ 2019ರಲ್ಲಿ ಮತ್ತೆ ತಮಿಳು ಪ್ರೇಕ್ಷಕರ ಮುಂದೆ ಕಾಣಿಸಿಕೊಂಡಿದ್ದರು. ನಂತರ ಬಂದ ಸೂರರೈ ಪೊಟ್ರು ದೊಡ್ಡ ಮಟ್ಟದ ಯಶಸ್ಸು ಕಾಣುವ ಜೊತೆಗೆ ಅಪರ್ಣಾ ವೃತ್ತಿ ಜೀವನಕ್ಕೂ ಮೈಲೇಜ್ ತಂದು ಕೊಟ್ಟ ಸಿನಿಮಾವಾಗಿದೆ.

  ಈ ಸಿನಿಮಾ ಬಳಿಕ ಅಪರ್ಣಾ ಮುಂದಿನ ತಮಿಳು ಸಿನಿಮಾ ಯಾವುದು ಎನ್ನುವ ಕುತೂಹಲ ಮೂಡಿಸಿತ್ತು. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿರುವ ಅಪರ್ಣಾ ಮುಂದಿನ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸದ್ಯ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಸೂರ್ಯ ಜೊತೆ ರೊಮ್ಯಾನ್ಸ್ ಮಾಡಿದ್ದ ಈ ಸುಂದರಿ ಈಗ ತಮ್ಮ ಕಾರ್ತಿ ಜೊತೆ ನಟಿಸಲು ಸಜ್ಜಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.

  ಕಾರ್ತಿ ಸದ್ಯ ನಿರ್ದೇಶಕ ಮುತ್ತಯ್ಯ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾದಲ್ಲಿ ನಾಯಕನಾಗಿ ನಟಿಸಲು ಸಜ್ಜಾಗಿದ್ದಾರೆ. ಈ ಮೊದಲು ಕೊಂಬನ್ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದ್ದ ಈ ಜೋಡಿ ಇದೀಗ ಮತ್ತೆ ಒಂದಾಗುತ್ತಿದೆ. ಗ್ರಾಮೀಣ ಹಿನ್ನಲೆಯ ಸಿನಿಮಾ ಇದಾಗಿದೆ. ಹಳ್ಳಿ ಪಾತ್ರಕ್ಕೆ ಹೊಂದಾಣಿಕೆಯಾಗುವ ನಾಯಕಿಯನ್ನು ಹುಡುಕುತ್ತಿದ್ದ ಚಿತ್ರತಂಡಕ್ಕೆ ಅಪರ್ಣಾ ಸರಿಯಾದ ಆಯ್ಕೆ ಎನಿಸಿದೆ. ಈಗಾಗಲೇ ಅಪರ್ಣಾ ಜೊತೆ ಮಾತುಕತೆ ನಡೆಸಿರುವ ಸಿನಿಮಾ ತಂಡ ಸದ್ಯದಲ್ಲೇ ಅಧಿಕೃತ ಮಾಹಿತಿ ಬಹಿರಂಗ ಪಡಿಸುವ ಸಾಧ್ಯತೆ ಇದೆ.

  ಕಾರ್ತಿ ಜೊತೆೆ ಅಪರ್ಣಾನನ್ನು ತೆರೆಮೇಲೆ ನೋಡಲು ಅಭಿಮಾನಿಗಳು ಸಹ ಕಾತರರಾಗಿದ್ದಾರೆ. ಈ ನಡುವೆ ಅಪರ್ಣಾ ತಮಿಳು ನಿರ್ದೇಶಕ ಅಶೋಕ್ ಸೆಲ್ವನ್ ಅವರ ಮುಂದಿನ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎನ್ನುವ ಮಾತು ಸಹ ಕೇಳಿಬರುತ್ತಿದೆ. ಇನ್ನು ಹಿಂದಿಯ ಸೂಪರ್ ಹಿಟ್ 'ಬಧೈ ಹೋ' ಸಿನಿಮಾದ ತಮಿಳು ರಿಮೇಕ್ ನಲ್ಲಿ ಅಪರ್ಣಾ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತು ಕಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ. ಇದೆಲ್ಲದರ ಜೊತೆ ಅಪರ್ಣಾ ಮಲಯಾಳಂನ ಎರಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅಪರ್ಣಾ ಕಾರ್ತಿ ಜೊತೆ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡುತ್ತಾರಾ ಎಂದು ಕಾದು ನೋಡಬೇಕು.

  ಇನ್ನು ಕಾರ್ತಿ ಸದ್ಯ ಮಣಿರತ್ನಂ ನಿರ್ದೇಶನದ ಬಹುನಿರೀಕ್ಷೆಯ ಪೊನ್ನಿಯಮ್ ಸೆಲ್ವನ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸರ್ದಾರ್ ಸಿನಿಮಾ ಕೂಡ ಕಾರ್ತಿ ಕೈಯಲ್ಲಿದೆ. ಮುತ್ತಯ್ಯ ಜೊತೆ ಹೊಸ ಸಿನಿಮಾಗಾಗಿ ಸರ್ದಾರ್ ಸಿನಿಮಾದ ಕೆಲಸವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

  English summary
  Soorarai Pottru Actress Aparna Balamurali to act opposite Karthi in her next movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X