twitter
    For Quick Alerts
    ALLOW NOTIFICATIONS  
    For Daily Alerts

    ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕನ ವಿರುದ್ಧ ಮಹಿಳಾ ಕಾರ್ಮಿಕರ ದಿಟ್ಟ ಹೋರಾಟ!

    By ಫಿಲ್ಮಿಬೀಟ್ ಡೆಸ್ಕ್
    |

    ಭಾರತದ ಕೆಲವೇ ಅತ್ಯುತ್ತಮ ಆರ್ಟ್‌ ಸಿನಿಮಾ ನಿರ್ದೇಶಕರಲ್ಲಿ ಮಲಯಾಳಂನ ಅಡೂರು ಗೋಪಾಲಕೃಷ್ಣನ್ ಸಹ ಒಬ್ಬರು. ಇತರೆ ಆರ್ಟ್‌ ಸಿನಿಮಾ ಮೇಕರ್‌ಗಳಿಗಿಂತಲೂ ಭಿನ್ನವಾಗಿ ಬಿಜ್ ಮಾದರಿಯ ಸಿನಿಮಾಗಳನ್ನು ನಿರ್ದೇಶಿಸಿರುವ ಅಡೂರು ಕಮರ್ಶಿಯಲ್ ಯಶಸ್ಸನ್ನೂ ಕಂಡವರು.

    ಸತ್ಯಜಿತ್ ರೇ ಹಾಗೂ ಮೃಣಾಲ್ ಸೇನ್ ಬಳಿಕ ಸಿನಿಮಾಕ್ಕಾಗಿ ಅತಿ ಹೆಚ್ಚು ರಾಷ್ಟ್ರಪ್ರಶಸ್ತಿ ಪಡೆದ ನಿರ್ದೇಶಕ ಎಂಬ ಖ್ಯಾತಿ ಅಡೂರು ಗೋಪಾಲಕೃಷ್ಣನ್ ಅವರದ್ದು. ಆದರೆ ಈಗ ಗೋಪಾಲಕೃಷ್ಣನ್ ಅವರು ವಿವಾದಕ್ಕೆ ಈಡಾಗಿದ್ದಾರೆ.

    ಅಡೂರು ಗೋಪಾಲಕೃಷ್ಣನ್ ಅವರು ಜಾತಿ ನಿಂದನೆ ಹಾಗೂ ಮಹಿಳಾ ನಿಂದನೆ ಆರೋಪಗಳನ್ನು ಎದುರಿಸುತ್ತಿದ್ದಾರೆ. ಅಡೂರು ವಿರುದ್ಧ ಸಿನಿಮಾ ವಿದ್ಯಾರ್ಥಿಗಳು ಹಾಗೂ ದಲಿತ ಸಂಘಟನೆಗಳು ಪ್ರತಿಭಟನೆಯನ್ನೂ ಸಹ ಕೇರಳದಲ್ಲಿ ಮಾಡುತ್ತಿವೆ.

    Cleaning Staff Women Allegations On National Award Movie Director Adoor Gopalakrishnan

    ಅಡೂರು ಗೋಪಾಲಕೃಷ್ಣನ್, ಕೆಆರ್ ನಾರಾಯಣ್ ನ್ಯಾಷ್‌ನಲ್ ಇನ್‌ಸ್ಟಿಟ್ಯೂಟ್ ಆಫ್ ವಿಶ್ಯುಲ್ ಸೈನ್ಸ್ ಆಂಡ್ ಆರ್ಟ್ಸ್‌ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶದ ಮೊದಲ ದಲಿತ ರಾಷ್ಟ್ರಪತಿಗಳ ಹೆಸರಲ್ಲಿ ಪ್ರಾರಂಭವಾಗಿರುವ ಸಂಸ್ಥೆಯ ಅಧ್ಯಕ್ಷರಾಗಿರುವ ಅಡೂರು ಗೋಲಾಕೃಷ್ಣನ್ ಈಗ ಜಾತಿ ನಿಂದನೆ ಆರೋಪಿಯಾಗಿದ್ದಾರೆ.

    ಕೆಆರ್ ನಾರಾಯಣ್ ನ್ಯಾಷ್‌ನಲ್ ಇನ್‌ಸ್ಟಿಟ್ಯೂಟ್ ಆಫ್ ವಿಶ್ಯುಲ್ ಸೈನ್ಸ್ ಆಂಡ್ ಆರ್ಟ್ಸ್‌ನಲ್ಲಿ ಕೆಲಸ ಮಾಡುವ ಸ್ವಚ್ಛತಾ ಕರ್ಮಿಗಳನ್ನು ಅಡೂರು ಗೋಪಾಲಕೃಷ್ಣನ್ ನಿಮಯಬಾಹಿರವಾಗಿ ಸಂಸ್ಥೆಯಿಂದ ಸುಮಾರು ಹನ್ನೆರಡು ಕಿ.ಮೀ ದೂರವಿರುವ ತಮ್ಮ ಮನೆಯಲ್ಲಿಯೂ ದುಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು.

    ಸಂಸ್ಥೆಯಲ್ಲಿ ಸ್ವಚ್ಛತಾ ಕೆಲಸ ಮಾಡುವ ಕೆಲವು ಮಹಿಳೆಯರು, ಅಡೂರು ಅವರು ತಮ್ಮ ಸ್ವಂತ ಮನೆಯ ಕೆಲಸ ಮಾಡುವಂತೆ ನಮ್ಮ ಮೇಲೆ ಒತ್ತಡ ಹೇರಿದ್ದಾರೆ. ನಾವು ಅಡೂರು ಅವರ ಮನೆಯ ಟಾಯ್‌ಲೆಟ್ ತೊಳೆಯಬೇಕಾಗಿದೆ. ಅದೂ ಗ್ಲೌಸ್‌ಗಳಿಲ್ಲದೆ ಸಣ್ಣ ಬ್ರಶ್‌ನಲ್ಲಿ ನಾವು ಅವರ ಮನೆಯ ಟಾಯ್ಲೆಟ್ ತೊಳೆಯಬೇಕಾಗಿದೆ ಎಂದು ಆರೋಪಿಸಿದ್ದರು.

    ಇದರ ಕುರಿತಾಗಿ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅಡೂರು, ಆ ಮಹಿಳೆಯರನ್ನು ತಮ್ಮ ವಿರುದ್ಧ ಎತ್ತಿಕಟ್ಟಲಾಗಿದೆಯೆಂದು ಹೇಳುವ ಜೊತೆಗೆ ಆ ಸ್ವಚ್ಛತಾ ಕಾರ್ಯ ಮಾಡುವ ಮಹಿಳೆಯರ ಬಗ್ಗೆ ತುಸು ಕನಿಷ್ಟವಾಗಿ ಮಾತನಾಡಿದ್ದರು. ಇದರ ವಿರುದ್ಧ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದು, ಅಡೂರು ವಿರುದ್ಧ ಪ್ರತಿಭಟನೆ ಸಹ ಮಾಡಿವೆ.

    ಸಂದರ್ಶನದಲ್ಲಿ ಮಾತನಾಡಿದ್ದ ಅಡೂರು ಗೋಪಾಕೃಷ್ಣನ್, ''ಅವರ ಸಂದರ್ಶನವನ್ನು ಪ್ರತಿದಿನ ಮಾಡಲಾಗುತ್ತಿದೆ. ಕ್ಯಾಮೆರಾ ಕಮಡಕೂಡಲೇ ಅವರು ತಮ್ಮನ್ನು ತಾವು ಸ್ಟಾರ್‌ಗಳು ಎಂದುಕೊಂಡು ಬಿಟ್ಟಿದ್ದಾರೆ. ಕ್ಯಾಮೆರಾ ಕಂಡ ಕೂಡಲೇ ಮೇಕಪ್ ಬಳಿದುಕೊಂಡು, ರೆಡಿ ಆಗಿ ನಿಂತುಬಿಡುತ್ತಾರೆ'' ಎಂದು ತುಚ್ಛದನಿಯಲ್ಲಿ ಹೇಳಿದ್ದಾರೆ.

    ಮುಂದುವರೆದು, ''ಇವರ್ಯಾರಿಗೂ ಸರಿಯಾಗಿ ಮಾತನಾಡುವುದು ಸಹ ಬರುತ್ತಿರಲಿಲ್ಲ. ಆದರೆ ಈಗ ಗಂಟೆಗಟ್ಟಲೆ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಇವರನ್ನೆಲ್ಲ ಯಾರೋ ಸರಿಯಾಗಿ ತರಬೇತುಗೊಳಿಸಿದ್ದಾರೆ. ಎಲ್ಲರೂ ವಿಧವೆಯವರು ಎಂದು ಅವರು ಹೇಳಿಕೊಂಡಿದ್ದಾರೆ. ಆದರೆ ಅವರಲ್ಲಿ ಇಬ್ಬರು ಮಾತ್ರ ವಿಧವೆಯವರು ಇನ್ನುಳಿದವರಿಗೆ ಪತಿ ಇದ್ದಾನೆ. ಇವರಿಗೆ ಇದೇ ರೀತಿ ಸುಳ್ಳು ಹೇಳಿ ಎಂದು ಯಾರೋ ಹೇಳಿಕೊಟ್ಟಿದ್ದಾರೆ'' ಎಂದಿದ್ದಾರೆ ಅಡೂರು ಗೋಪಾಲಕೃಷ್ಣನ್.

    English summary
    cleaning staff women of KRNNIVSA allegations against national awarded Malayalam movie director Adoor Gopalakrishnan.
    Wednesday, January 4, 2023, 17:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X