ನಟ ದುಲ್ಕುರ್ ಸಲ್ಮಾನ್ ಹೊಸ ಚಿತ್ರದ ಶೀರ್ಷಿಕೆ ಫಿಕ್ಸ್
ಮಾಲಿವುಡ್ ಹ್ಯಾಂಡ್‌ಸಮ್ ನಟ ದುಲ್ಕರ್ ಸಲ್ಮಾನ್ ತಮ್ಮ ಮುಂದಿನ ಚಿತ್ರದಲ್ಲಿ ಪೂರ್ಣ ಪ್ರಮಾಣದಲ್ಲಿ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದುವರೆಗೂ ಈ ಚಿತ್ರಕ್ಕೆ ಟೈಟಲ್ ಏನು ಎಂದು ಅಂತಿಮವಾಗಿರಲಿಲ್ಲ.
ಈ ಚಿತ್ರವನ್ನು ರೋಷನ್ ಆಂಡ್ರೂಸ್ ನಿರ್ದೇಶನ ಮಾಡುತ್ತಿದ್ದು, ಇದೀಗ, ಈ ಚಿತ್ರಕ್ಕೆ 'ಸೆಲ್ಯೂಟ್' ಎಂದು ಶೀರ್ಷಿಕೆ ಅಂತಿಮವಾಗಿದೆ. ಆದ್ರೆ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಮೂಲಗಳ ಪ್ರಕಾರ, ಚಿತ್ರದ ಟೈಟಲ್ ಮತ್ತು ಫಸ್ಟ್ ಲುಕ್ ಪೋಸ್ಟರ್‌ನ್ನು ಸದ್ಯದಲ್ಲೇ ಬಿಡುಗಡೆ ಮಾಡಲಿದ್ದಾರಂತೆ. ರೋಷನ್ ಆಂಡ್ರೂಸ್ ಜೊತೆ ದುಲ್ಕರ್ ಸಲ್ಮಾನ್ ಮೊದಲ ಸಿನಿಮಾ ಮಾಡುತ್ತಿದ್ದು, ಪ್ರಿ-ಪ್ರೊಡಕ್ಷನ್ ಕೆಲಸ ಭರ್ಜರಿಯಾಗಿ ನಡೆಯುತ್ತಿದೆ.

ಬಹುನಿರೀಕ್ಷೆಯ ಚಿತ್ರಕ್ಕೆ ಕಲಾವಿದರು ಬೇಕಾಗಿದ್ದಾರೆ ಎಂದು ಸ್ವತಃ ದುಲ್ಕರ್ ಸಲ್ಮಾನ್ ತಮ್ಮ ಅಧಿಕೃತ ಫೇಸ್‌ಬುಕ್ ಹಾಗೂ ಇನ್ನಿತರ ಸಾಮಾಜಿಕ ಜಾಲತಾಣದ ಖಾತೆಗಳ ಮೂಲಕ ಪ್ರಕಟಣೆ ನೀಡಿದ್ದರು.
15 ರಿಂದ 17 ವಯಸ್ಸಿನ ಹಲವರಿಗೆ ಈ ಚಿತ್ರದಲ್ಲಿ ನಟಿಸುವ ಅವಕಾಶ ಸಿಗಲಿದೆ. ಆಡಿಷನ್‌ನಲ್ಲಿ ಆಯ್ಕೆಯಾದ ಕಲಾವಿದರಿಗೆ ಡಿಸೆಂಬರ್ 1 ರಿಂದ ಕ್ಲಾಸ್‌ಗಳು ನಡೆಯಲಿದೆ. ಈ ಪ್ರಾಜೆಕ್ಟ್ ಜನವರಿ 1 ರಿಂದ ಶುರುವಾಗಲಿದೆ ಎಂದು ತಿಳಿದು ಬಂದಿದೆ.
ಒಂದೇ ಶೆಡ್ಯೂಲ್‌ನಲ್ಲಿ ಈ ಸಿನಿಮಾದ ಚಿತ್ರೀಕರಣ ಮುಗಿಸಲು ಚಿತ್ರತಂಡ ಪ್ಲಾನ್ ಮಾಡಿದ್ದು, ಫೆಬ್ರವರಿ ತಿಂಗಳಲ್ಲಿ ಶೂಟಿಂಗ್ ಮುಕ್ತಾಯವಾಗಬಹುದು ಎಂದು ಹೇಳಲಾಗಿದೆ. ಇನ್ನುಳಿದಂತೆ ಈ ಚಿತ್ರದಲ್ಲಿ ಮತ್ಯಾರೆಲ್ಲಾ ನಟಿಸಲಿದ್ದಾರೆ ಎಂಬುದನ್ನು ಸದ್ಯದಲ್ಲೇ ಘೋಷಣೆ ಮಾಡಲಾಗುವುದು.


Click it and Unblock the Notifications











