For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಸಿನಿಮಾ ನಿರ್ಮಾಪಕರಿಗೆ ಐಟಿ ಶಾಕ್

  |

  ಮಲಯಾಳಂ ಸಿನಿಮಾ ನಿರ್ಮಾಪಕರಿಗೆ ಇಂದು ಶುಕ್ರವಾರ ಶುಭವಾಗಿರಲಿಲ್ಲ. ಮಲಯಾಳಂ ಸಿನಿಮಾ ರಂಗದ ಮೂವರು ನಿರ್ಮಾಪಕರ ಮೇಲೆ ಇಂದು ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ಮಾಡಿದರು.

  ಜನಪ್ರಿಯ ನಟ ಮೋಹನ್‌ಲಾಲ್‌ರ ಪರಮಾಪ್ತ ನಿರ್ಮಾಪಕ ಆಂಟೊನಿ ಪೆರಂಬವೂರ್ ನಿರ್ಮಾಪಕ ಆಂಟೊ ಜೋಸೆಫ್ ಮತ್ತು ಲಿಸ್ಟಿನ್ ಸ್ಟಿಫನ್ ಅವರುಗಳ ಮನೆ ಹಾಗೂ ಕಚೇರಿಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದರು.

  ಬ್ಯಾಂಕ್ ವ್ಯವಹಾರ, ಆಯ-ವ್ಯಯ, ಸಿನಿಮಾದಿಂದ ಬರುವ ಲಾಭ, ಲಾಭದ ಹಣ ವರ್ಗಾವಣೆ ಆಗಿರುವ ಹಾದಿ. ಒಟಿಟಿಗಳೊಟ್ಟಿಗೆ ವ್ಯವಹಾರ ಇನ್ನಿತರೆ ವಿಷಯಗಳ ಪರಿಶೀಲನೆಯನ್ನು ಐಟಿ ಅಧಿಕಾರಿಗಳು ಮಾಡಿದ್ದಾರೆ. ಇದರ ಜೊತೆಗೆ ತೆರಿಗೆ ವಂಚನೆ ಮಾಡಲಾಗಿದೆಯೇ ಎಂಬ ಅಂಶವನ್ನು ಸಹ ಪರಿಶೀಲನೆ ಮಾಡಿದ್ದಾರೆ ಅಧಿಕಾರಿಗಳು.

  ಮೋಹನ್‌ಲಾಲ್‌ ಅವರ ಪರಮಾಪ್ತನಾಗಿರುವ ಆಂಟೊನಿ ಪೆರಂಬವೂರ್ ನಿರ್ಮಾಣದ 'ಮರಕ್ಕರ್; ಅರಬ್ಬಿ ಕಡಲಿಂಟೆ ಸಿಂಹಂ' ಸಿನಿಮಾ ಡಿಸೆಂಬರ್ 02 ರಂದು ಬಿಡುಗಡೆ ಆಗಲಿದೆ. ಮಲಯಾಳಂನ ಅತಿ ದೊಡ್ಡ ಬಜೆಟ್ ಸಿನಿಮಾ ಇದಾಗಿದೆ. ರಾಷ್ಟ್ರಪ್ರಶಸ್ತಿ ಗಳಿಸಿರುವ ಈ ಸಿನಿಮಾ ಒಟಿಟಿ ಜೊತೆ ಬಹಳ ದೊಡ್ಡ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದೆ. ಅದು ಮಾತ್ರವೇ ಅಲ್ಲದೆ, ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುತ್ತಿದ್ದು, ಚಿತ್ರಮಂದಿರಗಳಿಂದ ಭಾರಿ ಮೊತ್ತದ ಅಡ್ವಾನ್ಸ್‌ ಅನ್ನು ಸಹ ಪಡೆಯಲಾಗಿದೆ.

  ಆಂಟೊನಿ ಪೆರಂಬವೂರ್ ಮಲಯಾಳಂನ ಸೂಪರ್ ಹಿಟ್ ನಿರ್ಮಾಪಕರಾಗಿದ್ದು, 'ದೃಶ್ಯಂ', 'ದೃಶ್ಯಂ 2' ಸಿನಿಮಾಗಳನ್ನು ಸಹ ಇವರೇ ನಿರ್ಮಾಣ ಮಾಡಿದ್ದಾರೆ. ಐಟಿ ರೇಡ್‌ಗೆ ಒಳಗಾಗಿರುವ ಮತ್ತೊಬ್ಬ ನಿರ್ಮಾಪಕ ಆಂಟೊ ಜೋಸೆಫ್ ಹಿರಿಯ ನಿರ್ಮಾಪಕರಾಗಿದ್ದು, ರಾಷ್ಟ್ರಪ್ರಶಸ್ತಿ ವಿಜೇತ ಸಿನಿಮಾ 'ಟೇಕ್‌ ಆಫ್' ಸೇರಿದಂತೆ ಇತ್ತೀಚೆಗೆ ಬಿಡುಗಡೆ ಆದ 'ಮಲಿಕ್' ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

  ಇನ್ನು ಲಿಸ್ಟಿನ್ ಸ್ಟೀಫನ್ ತಮಿಳು ಹಾಗೂ ಮಲಯಾಳಂನಲ್ಲಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ. ಧನುಶ್ ನಟನೆಯ 'ಮಾರಿ', ದುಲ್ಕರ್ ಸಲ್ಮಾನ್ ನಟನೆಯ 'ಉಸ್ತಾದ್ ಹೋಟೆಲ್' ಸೇರಿ ಹಲವು ಮಲಯಾಳಂ ಹಾಗೂ ತಮಿಳು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.

  ನಿರ್ಮಾಪಕರ ಮನೆ ಮತ್ತು ಕಚೇರಿಗಳನ್ನಷ್ಟೆ ರೇಡ್ ಮಾಡಲಾಗಿದೆ, ಯಾವ ನಟರ ಮನೆಗಳನ್ನು ರೇಡ್ ಮಾಡಿಲ್ಲ. ಹಿಂದೊಮ್ಮೆ ಮೋಹನ್‌ಲಾಲ್ ಮನೆಯನ್ನು ರೇಡ್ ಮಾಡಲಾಗಿತ್ತು.

  English summary
  Income tax officers raid Malayalam movie producers Antony Perumbavoor, Anto Joseph and Listin Stephen.
  Saturday, November 27, 2021, 10:30
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X