For Quick Alerts
  ALLOW NOTIFICATIONS  
  For Daily Alerts

  ದೇಹಾಕಾರದ ಬಗ್ಗೆ ಕಾಮೆಂಟ್ ಮಾಡಿದವನಿಗೆ ತಿರುಗೇಟು ನೀಡಿದ ನಟಿ

  |

  ಟಿವಿ ನಿರೂಪಕಿ ಹಾಗೂ ನಟಿ ಅಶ್ವತಿ ಶ್ರೀಕಾಂತ್ ಗರ್ಭಿಣಿಯಾಗಿರುವ ಸಂತಸವನ್ನು ಹಂಚಿಕೊಂಡಿದ್ದರು. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ನಟಿ ಹಲವು ಫೋಟೋಗಳನ್ನು ಇನ್ಸ್ಟಾಗ್ರಾಂ,ಫೇಸ್‌ಬುಕ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

  ಅಶ್ವತಿ ಪೋಸ್ಟ್ ಮಾಡಿರುವ ಫೋಟೋವೊಂದನ್ನು ನೆಟ್ಟಿಗನೊಬ್ಬ ಕಾಮೆಂಟ್ ಮಾಡಿದ್ದು, ಇದು ಚರ್ಚೆಗೆ ಕಾರಣವಾಗಿದೆ. ನಟಿಯ ಖಾಸಗಿ ಅಂಗದ ಬಗ್ಗೆ ಕಾಮೆಂಟ್ ಮಾಡುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ವಿರೋಧಕ್ಕೆ ಗುರಿಯಾಗಿದ್ದಾನೆ.

  ಪೀಡಿಸಿದ ನಿರ್ದೇಶಕನಿಂದ ಬಚಾವಾದ ಕತೆ ಹೇಳಿದ ನಟಿಪೀಡಿಸಿದ ನಿರ್ದೇಶಕನಿಂದ ಬಚಾವಾದ ಕತೆ ಹೇಳಿದ ನಟಿ

  ಮಲಯಾಳಂನಲ್ಲಿ ಕಾಮೆಂಟ್ ಮಾಡಿರುವ ವ್ಯಕ್ತಿ ''ನಿನ್ನ ಸ್ತ...... ಸೂಪರ್ ಎಂದಿದ್ದಾನೆ. ಅದಕ್ಕೆ ತಿರುಗೇಟು ನೀಡಿರುವ ನಟಿ ''ನಿನ್ನ ತಾಯಿಯದ್ದು ಸೂಪರ್ ಅಲ್ವಾ?'' ಎಂದು ಪ್ರತಿಕ್ರಿಯಿಸಿದ್ದಾರೆ.

  ''ಹೌದು ಅದು (ಸ್ತನ) ಚೆನ್ನಾಗಿಯೇ ಇರಬೇಕು. ನಾನು ಎರಡು ವರ್ಷ ಮಗುವನ್ನು ಆರೈಕೆ ಮಾಡಬೇಕಿದೆ. ನಾವು (ಮಹಿಳೆಯರು) ಜೀವ, ಆತ್ಮವನ್ನು ಸೃಷ್ಟಿಸುತ್ತೇವೆ ಆದ್ದರಿಂದ ಎಲ್ಲ ಮಹಿಳೆಯರಿಗೂ ಅದು (ಸ್ತನ) ಚೆನ್ನಾಗಿಯೇ ಇರಬೇಕಾಗಿರುತ್ತದೆ. ನಿನ್ನ ತಾಯಿಗೂ ಕೂಡ.''ಎಂದು ಖಾರವಾಗಿ ತಿರುಗೇಟು ನೀಡಿದ್ದಾರೆ.

  ನಟಿಗೆ ಬಾಡಿ ಶೇಮಿಂಗ್ ಮಾಡಿದ್ದಕ್ಕಾಗಿ ಆ ವ್ಯಕ್ತಿಯ ವಿರುದ್ಧ ನೆಟ್ಟಿಗರು ತಿರುಗಿಬಿದ್ದರು. ಕೊನೆಗೆ ಅವನ ಫೇಸ್‌ಬುಕ್ ಖಾತೆ ಡಿಲೀಟ್ ಆಗಿದೆ ಎಂದು ವರದಿಯಾಗಿದೆ.

  Prashanth Neel ಮತ್ತೊಂದು ಸಿನಿಮಾ ಪೋಷಣೆ | Oneindia Kannada

  ಹಾಗೆ, ಆ ವ್ಯಕ್ತಿಯ ಕಾಮೆಂಟ್‌ಗೆ ಅಷ್ಟೇ ಧೈರ್ಯವಾಗಿ ಪ್ರತಿಕ್ರಿಯಿಸಿದ ಅಶ್ವತಿ ಶ್ರೀಕಾಂತ್‌ಗೆ ಮೆಚ್ಚುಗೆ ವ್ಯಕ್ತವಾಗಿದೆ. ಸೂಕ್ತ ರೀತಿಯಲ್ಲಿ ತಿರುಗೇಟು ಕೊಟ್ಟಿದ್ದೀರಾ, ಇಂತಹ ಘಟನೆಗಳು ಮರುಕಳಿಸಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

  English summary
  Malayalam Actress Aswathy Sreekanth Gives Strong Reply to who Body Shamed Her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X