For Quick Alerts
  ALLOW NOTIFICATIONS  
  For Daily Alerts

  ವಿಲನ್ ಪಾತ್ರ ಮಾಡಿ ಎಂದಿದ್ದಕ್ಕೆ ಅಚ್ಚರಿ ಪ್ರತಿಕ್ರಿಯೆ ನೀಡಿದ ಮಮ್ಮುಟ್ಟಿ!

  |

  ಮಲಯಾಳಂ ಸೂಪರ್ ಸ್ಟಾರ್ ಮಮ್ಮುಟ್ಟಿ ನಟಿಸಿರುವ 'ಮಾಮಂಗಂ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಡಿಸೆಂಬರ್ 12 ರಂದು ಮಲಯಾಳಂ, ತಮಿಳು, ತೆಲುಗು ಹಾಗು ಹಿಂದಿಯಲ್ಲಿ ಸಿನಿಮಾ ರಿಲೀಸ್ ಆಗುತ್ತಿದ್ದು, ಇತ್ತೀಚಿಗಷ್ಟೆ ಟಾಲಿವುಡ್ ಪ್ರಚಾರದಲ್ಲಿ ಭಾಗವಹಿಸಿದ್ದರು.

  ಈ ವೇಳೆ ಅಚ್ಚರಿ ವಿಷಯವೊಂದನ್ನು ನಿರ್ಮಾಪಕ ಅಲ್ಲು ಅರವಿಂದ್ ಬಹಿರಂಗ ಪಡಿಸಿದ್ದಾರೆ. ಈ ಹಿಂದೆ ಮಮ್ಮುಟ್ಟಿ ಅವರಿಗೆ ನೆಗಿಟೀವ್ ಪಾತ್ರವೊಂದಕ್ಕೆ ಆಫರ್ ಮಾಡಿದ್ದರಂತೆ. ಆದರೆ, ಆ ಆಫರ್ ಗೆ ಮಮ್ಮುಟ್ಟಿ ಅಚ್ಚರಿಯಾದ ಪ್ರತಿಕ್ರಿಯೆ ನೀಡಿದ್ದರು ಎಂದು ಅರವಿಂದ್ ತಿಳಿಸಿದ್ದಾರೆ.

  ಮಮ್ಮುಟ್ಟಿ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಮಂಜು ವಾರಿಯರ್ ಮಮ್ಮುಟ್ಟಿ ಚಿತ್ರದಲ್ಲಿ ಚೊಚ್ಚಲ ಬಾರಿಗೆ ಮಂಜು ವಾರಿಯರ್

  ಮಮ್ಮುಟ್ಟಿ ಅವರು 1992ರಲ್ಲಿ 'ಸ್ವಾತಿ ಕಿರಣಂ' ಚಿತ್ರದ ಮೂಲಕ ಟಾಲಿವುಡ್ ಗೆ ಎಂಟ್ರಿಯಾಗಿದ್ದರು. ಅದಾದ ಬಳಿಕ ಸೂರ್ಯ ಪುತ್ರುಲು, ರೈಲ್ವೇ ಕೂಲಿ, ಯಾತ್ರ ಅಂತಹ ಸಿನಿಮಾಗಳನ್ನು ತೆಲುಗಿನಲ್ಲಿ ಮಾಡಿದ್ದಾರೆ. ಇದೀಗ, 'ಮಾಮಂಗಂ' ಸಿನಿಮಾ ತೆಲುಗಿನಲ್ಲಿ ಡಬ್ ಆಗಿದ್ದು, ಆಂಧ್ರ ಮತ್ತು ತೆಲಂಗಾಣದಲ್ಲಿ ಅಲ್ಲು ಅರವಿಂದ್ ವಿತರಿಸುತ್ತಿದ್ದಾರೆ.

  ಸೌತ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದ ಮಮ್ಮುಟ್ಟಿ ಸೌತ್ ಇಂಡಸ್ಟ್ರಿಯಲ್ಲಿ ಹೊಸ ದಾಖಲೆ ಬರೆದ ಮಮ್ಮುಟ್ಟಿ

  ಈ ಮಧ್ಯೆ 10 ವರ್ಷದ ಹಿಂದಿನ ಸಂಭಾಷಣೆಯೊಂದನ್ನು ಅಲ್ಲು ಅರವಿಂದ್ ಬಹಿರಂಗಪಡಿಸಿದ್ದಾರೆ. 'ಸ್ವಾತಿ ಕಿರಣಂ ಚಿತ್ರಕ್ಕೆ ಮಮ್ಮುಟ್ಟಿ ಅವರನ್ನು ನಾಯಕನನ್ನಾಗಿ ಆಯ್ಕೆ ನಿರ್ದೇಶಕ ವಿಶ್ವನಾಥ್ ಅವರು ಮಾಡಿಕೊಂಡಿರುವ ಬಗ್ಗೆ ತಿಳಿಯಿತು. ಯಾಕೆ ಇವರು ಮಮ್ಮುಟ್ಟಿ ಅವರನ್ನ ಸೆಲೆಕ್ಟ್ ಮಾಡಿಕೊಂಡ್ರು? ಏನಾಗುತ್ತೆ ಈ ಸಿನಿಮಾ ಎಂಬ ಕುತೂಹಲ ಇತ್ತು. ಆದರೆ, ಸಿನಿಮಾ ರಿಲೀಸ್ ಆದ್ಮೇಲೆ ನೋಡಿದೆ, ನಿಜಕ್ಕೂ ಅದ್ಭುತ. ಮಮ್ಮುಟ್ಟಿ ಅವರ ನಟನೆ ಅಷ್ಟೇ ಇಷ್ಟ ಆಯ್ತು'' ಎಂದು ಅಲ್ಲು ಅರವಿಂದ್ ಹೇಳಿಕೊಂಡಿದ್ದಾರೆ.

  ''ಬಳಿಕ ಮಮ್ಮುಟ್ಟಿ ಅವರಿಗೆ ಫೋನ್ ಮಾಡಿ ಶುಭಾಶಯ ತಿಳಿಸಬೇಕೆಂದುಕೊಂಡೆ. ಅಂದುಕೊಂಡಂತೆ ಫೋನ್ ಮಾಡಿ, ನನ್ನ ಮುಂದಿನ ಚಿತ್ರದಲ್ಲಿ ನಿಮಗೊಂದು ಅದ್ಭುತ ಪಾತ್ರ ಇದೆ. ಅದು ವಿಲನ್ ಪಾತ್ರ ಮಾಡಿ ಎಂದೆ. ಅದಕ್ಕೆ ಅವರು 'ನೀವು ಇದನ್ನು ಚಿರಂಜೀವಿ ಅವರ ಬಳಿ ಕೇಳಲು ಸಾಧ್ಯವಾ?' ಎಂದರು. ಅಷ್ಟೇ ನಾನು ಫೋನ್ ಇಟ್ಟೆ'' ಎಂದು ಹಳೆಯ ನೆನಪನ್ನು ಮೆಲುಕು ಹಾಕಿದ್ದಾರೆ.

  English summary
  Tollywood Producer Allu aravind offered negative role to malayalam Superstar mammootty. but, mammootty gave shocking reply to aravind.
  Saturday, December 7, 2019, 18:23
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X