For Quick Alerts
  ALLOW NOTIFICATIONS  
  For Daily Alerts

  ದೃಶ್ಯಂ-2 ಸಕ್ಸಸ್: ಪಾರ್ಟ್-3ಗೆ ಸಜ್ಜಾದ ನಟ ಮೋಹನ್ ಲಾಲ್ ಮತ್ತು ನಿರ್ದೇಶಕ ಜೀತು ಜೋಸೆಫ್

  |

  ಮಲಯಾಳಂ ಖ್ಯಾತ ನಟ ಮೋಹನ್ ಲಾಲ್ ಅಭಿನಯದ ದೃಶ್ಯಂ-2 ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. 2013ರಲ್ಲಿ ರಿಲೀಸ್ ಆಗಿದ್ದ ದೃಶ್ಯಂ ಸಿನಿಮಾದ ಮುಂದುವರೆದ ಭಾಗ ಇದಾಗಿದ್ದು, ಜಾರ್ಜ್ ಕುಟ್ಟಿಯ ಚಾಕಚಕ್ಯತೆಗೆ ಅಭಿಮಾನಿಗಳು ಮನಸೋತಿದ್ದಾರೆ.

  ಫೆಬ್ರವರಿ 19 ಒಟಿಟಿಯಲ್ಲಿ ರಿಲೀಸ್ ಆಗಿರುವ ದೃಶ್ಯಂಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಾರ್ಟ್ -1 ಮತ್ತು ಪಾರ್ಟ್-2 ಯಶಸ್ಸಿನ ಬಳಿಕ ಸಿನಿಮಾತಂಡ ದೃಶ್ಯಂ ಪ್ರಾಂಚೈಸಿಯನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಹೌದು, ಮೋಹನ್ ಲಾಲ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿರುವ ಚಿತ್ರದ ನಿರ್ಮಾಪಕ ಆಂಟೋನಿ ಪೆರುಂಬವೂರ್ ಪಾರ್ಟ್-3 ಮಾಡುವ ಸುಳಿವು ನೀಡಿದ್ದಾರೆ.

  Drishyam 2 movie review: ಮತ್ತೆ ಗೆದ್ದ ಜಾರ್ಜ್ ಕುಟ್ಟಿ, ಪೆಚ್ಚಾದ ಪೊಲೀಸರು

  ಚಿತ್ರದ ನಿರ್ದೇಶಕ ಜೀತು ಜೋಸೆಫ್ ಪಾರ್ಟ್-3 ಮಾಡುವ ಬಗ್ಗೆ ಯೋಚಿಸುತ್ತಿದ್ದಾರೆ, ಕಾರ್ಯರೂಪಕ್ಕೆ ಬಂದರೆ ತುಂಬಾ ಸಂತೋಷವಾಗುತ್ತೆ ಎಂದು ದೃಶ್ಯಂ-2 ನಿರ್ಮಾಪಕರು ಹೇಳಿದ್ದಾರೆ. ಈ ಬಗ್ಗೆ ವೆಬ್ ಪೋರ್ಟಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಿರ್ಮಾಪಕ ಆಂಟನಿ ಪೆರುಂಬವೂರ್, 'ದೃಶ್ಯಂ -3 ನಿರ್ದೇಶಕ ಜೀತು ಜೋಸೆಫ್ ಮನದಲ್ಲಿದೆ. ಪಾರ್ಟ್-3 ಬಗ್ಗೆ ಆಲೋಚಿಸುತ್ತಿದ್ದಾರೆ. ದೃಶ್ಯಂ-3 ಬರಲಿದೆ ಎಂದು ಭಾವಿಸುತ್ತೇನೆ. ಮೋಹನ್ ಲಾಲ್ ಮತ್ತು ಜೀತು ಇಬ್ಬರು ಈ ಬಗ್ಗೆ ಮಾತನಾಡುತ್ತಿದ್ದಾರೆ. ದೃಶ್ಯಂ-3 ಬರಲಿ ಎಂದು ಹಾರೈಸುತ್ತೇನೆ' ಎಂದು ಹೇಳಿದ್ದಾರೆ.

  ದೃಶ್ಯಂ-2 ಸಿನಿಮಾ ತೆಲುಗು ಭಾಷೆಗೆ ರಿಮೇಕ್ ಆಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ. ಈಗಾಗಲೇ ದೃಶ್ಯಂ ಸಿನಿಮಾ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ರಿಮೇಕ್ ಆಗಿ ಸೂಪರ್ ಹಿಟ್ ಆಗಿತ್ತು. ಇದೀಗ ದೃಶ್ಯಂ-2 ಕೂಡ ಬೇರೆ ಬೇರೆ ಭಾಷೆಯಗಳಿಗೆ ರಿಮೇಕ್ ಆಗುವ ಸಾಧ್ಯತೆ ಇದೆ.

  D BOSS ಲುಕ್ ನೋಡಿ ಹುಚ್ಚರಾದ ಅಭಿಮಾನಿಗಳು | Roberrt | Filmibeat Kannada

  ತೆಲುಗಿನಲ್ಲಿ ನಟ ವೆಂಕಟೇಶ್ ದಗ್ಗುಬಾಟಿ ದೃಶ್ಯಂ-2 ಮಾಡಲಿದ್ದಾರೆ ಎನ್ನಲಾಗುತ್ತಿದೆ. ದೃಶ್ಯಂನಲ್ಲೂ ವೆಂಕಟೇಶ್ ಅವರೇ ಮಿಂಚಿದ್ದರು. ಸದ್ಯ ತೆಲುಗಿಗೆ ರಿಮೇಕ್ ಆಗುವ ಮಾತುಗಳು ಕೇಳಿಬರುತ್ತಿದೆ. ಉಳಿದಂತೆ ಬೇರೆ ಬೇರೆ ಭಾಷೆಯಲ್ಲೂ ದೃಶ್ಯಂ-2 ರಿಮೇಕ್ ಆಗಲಿದೆಯಾ ಎನ್ನುವುದನ್ನು ಕಾದುನೋಡ ಬೇಕು.

  English summary
  Malayalam Actor Mohanlal and Director Jeethu Joseph planning for drishyam-3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X