For Quick Alerts
  ALLOW NOTIFICATIONS  
  For Daily Alerts

  ಆನೆ ದಂತ ಅಕ್ರಮ ದಾಸ್ತಾನು: ಮೋಹನ್‌ಲಾಲ್ ವಿರುದ್ಧ ವಿಚಾರಣೆ

  |

  ಮಲಯಾಳಂ ಸ್ಟಾರ್ ನಟ ಮೋಹನ್‌ಲಾಲ್ ಇಕ್ಕಟ್ಟಿಗೆ ಸಿಲುಕಿದ್ದಾರೆ. ಮೋಹನ್‌ಲಾಲ್ ಅಕ್ರಮವಾಗಿ ಆನೆ ದಂತ ಇರಿಸಿಕೊಂಡಿದ್ದಾರೆಂಬ ಆರೋಪದಲ್ಲಿ ಅವರ ವಿರುದ್ಧ ವಿಚಾರಣೆ ನಡೆಸಲಾಗುತ್ತಿದೆ.

  ಮೋಹನ್‌ಲಾಲ್ ಬಳಿ ಎರಡು ಜೊತೆ ಆನೆ ದಂತ ದೊರೆತಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಆದರೆ ಅವರ ವಿರುದ್ಧ ವಿಚಾರಣೆಯನ್ನು ಕೈಬಿಡುವಂತೆ ನ್ಯಯಾಲಯಕ್ಕೆ ರಾಜ್ಯ ಸರ್ಕಾರ ಮನವಿ ಮಾಡಿತ್ತು, ಆದರೆ ಮನವಿಯನ್ನು ತಳ್ಳಿಹಾಕಿರುವ ಮೆರಂಬವೂರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಮೋಹನ್‌ಲಾಲ್ ವಿರುದ್ಧ ವಿಚಾರಣೆಗೆ ಸೂಚಿಸಿದೆ.

  ವಂಚಕನೊಂದಿಗೆ ವ್ಯವಹಾರ ಸ್ಟಾರ್ ನಟ ಮೋಹನ್‌ಲಾಲ್‌ಗೆ ಇಡಿ ನೋಟಿಸ್ವಂಚಕನೊಂದಿಗೆ ವ್ಯವಹಾರ ಸ್ಟಾರ್ ನಟ ಮೋಹನ್‌ಲಾಲ್‌ಗೆ ಇಡಿ ನೋಟಿಸ್

  ಮೋಹನ್‌ಲಾಲ್ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದಾಗ ಅವರ ನಿವಾಸದಲ್ಲಿ ಎರಡು ಜೊತೆ ಆನೆ ದಂತ ಪತ್ತೆಯಾಗಿದ್ದವು. ಆಗ ಅರಣ್ಯ ಇಲಾಖೆಯು ಮೋಹನ್‌ಲಾಲ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಆದರೆ ಇಲಾಖೆಯು ಆ ಎರಡು ಜೋಡಿ ದಂತಗಳ ಮಾಲೀಕತ್ವದ ದಾಖಲೆಗಳನ್ನು ಮೋಹನ್‌ಲಾಲ್‌ಗೆ ನೀಡಿತ್ತಾದ್ದರಿಂದ ಮೋಹನ್‌ಲಾಲ್ ವಿರುದ್ಧ ಪ್ರಕರಣ ಕೈಬಿಡುವಂತೆ ರಾಜ್ಯ ಸರ್ಕಾರವು ನ್ಯಯಾಲಯಕ್ಕೆ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.

  ಆನೆ ದಂತದಿಂದ ಮಾಡಿದ ಕಲಾಕೃತಿಗಳು ಇವೆ!

  ಆನೆ ದಂತದಿಂದ ಮಾಡಿದ ಕಲಾಕೃತಿಗಳು ಇವೆ!

  ಆದರೆ ಅರ್ಜಿಯ ವಿರುದ್ಧ ವಾದಿಸಿದ ವಕೀಲರು, ಆನೆ ದಂತಗಳಿಗೆ ನೀಡಿರುವ ಮಾಲೀಕತ್ವ ಪ್ರಮಾಣ ಪತ್ರ ಅರ್ಥಹೀನವಾದುದು. ಅದಕ್ಕೆ ಯಾವುದೇ ಮಾನ್ಯತೆ ಇಲ್ಲ ಎಂದಿದ್ದಾರೆ. ಅಲ್ಲದೆ, ಮೋಹನ್‌ಲಾಲ್ ನಿವಾಸದಲ್ಲಿ ಎರಡು ಜೊತೆ ಆನೆ ದಂತದ ಜೊತೆಗೆ ಆನೆದಂತದಿಂದ ಮಾಡಿದ 13 ಕಲಾಕೃತಿಗಳು ದೊರೆತಿದ್ದವು ಅವುಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ವಾದಿಸಿದ್ದಾರೆ.

  ಆರೋಪ ಸಾಬೀತಾದರೆ ಶಿಕ್ಷೆ ಎಷ್ಟು?

  ಆರೋಪ ಸಾಬೀತಾದರೆ ಶಿಕ್ಷೆ ಎಷ್ಟು?

  ನ್ಯಾಯಾಲವು ಇದೀಗ ರಾಜ್ಯ ಸರ್ಕಾರದ ಅರ್ಜಿಯನ್ನು ವಜಾ ಮಾಡಿದ್ದು, ಮೋಹನ್‌ಲಾಲ್ ವಿರುದ್ಧ ಪ್ರಕರಣ ಮುಂದುವರೆದಿದೆ. ಮೋಹನ್‌ಲಾಲ್ ವಿಚಾರಣೆ ಸಹ ನಡೆಯಲಿದೆ. ಒಂದೊಮ್ಮೆ ಆರೋಪ ಸಾಬೀತಾದರೆ, ವನ್ಯಜೀವಿ ಸಂರಕ್ಷಣೆ ಕಾಯ್ದೆಯಡಿ ಮೋಹನ್‌ಲಾಲ್‌ಗೆ ಮೂರು ವರ್ಷಗಳಿಗೆ ಕಡಿಮೆ ಇಲ್ಲದಂತೆ, ಏಳು ವರ್ಷಗಳನ್ನು ಮೀರದಂತೆ ಜೈಲು ಶಿಕ್ಷೆ ಆಗಲಿದೆ. ಜೊತೆಗೆ ದಂಡ ಸಹ ಬೀಳಲಿದೆ.

  ವಂಚಕ ಮುನ್ಸುನ್ ಮವುಂಕಲ್ ಜೊತೆ ವ್ಯವಹಾರ

  ವಂಚಕ ಮುನ್ಸುನ್ ಮವುಂಕಲ್ ಜೊತೆ ವ್ಯವಹಾರ

  ಇದು ಮಾತ್ರವೇ ಅಲ್ಲದೆ, ಕೆಲವು ದಿನಗಳ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಸಹ ಮೋಹನ್‌ಲಾಲ್‌ಗೆ ನೊಟೀಸ್ ಕಳಿಸಿತ್ತು. ಕೇರಳದ ಮಹಾನ್ ವಂಚಕ ಎನ್ನಲಾಗುವ ಮುನ್ಸುನ್ ಮವುಂಕಲ್ ಎಂಬಾತನೊಂದಿಗೆ ಮೋಹನ್‌ಲಾಲ್‌ ವ್ಯವಹಾರವನ್ನು ಹೊಂದಿದ್ದಾರೆ ಎಂಬ ಕಾರಣಕ್ಕೆ ಮೋಹನ್‌ಲಾಲ್‌ಗೆ ನೊಟೀಸ್ ನೀಡಲಾಗಿದ್ದು, ಕೊಚ್ಚಿಯ ಇಡಿ ಕಚೇರಿಗೆ ಬಂದು ವಿಚಾರಣೆ ಎದುರಿಸುವಂತೆ ಸೂಚಿಸಲಾಗಿದೆ. ಮುನ್ಸುನ್ ಮವುಂಕಲ್ ಮೋಸಗಾರನಾಗಿದ್ದು, ಬೈಬಲ್‌ನ ಮೊಟ್ಟ ಮೊದಲ ಪ್ರತಿ, ಟಿಪ್ಪು ಸುಲ್ತಾನನ ಖಡ್ಗ ಇನ್ನಿತರೆ ಪುರಾತನ ಐತಿಹಾಸಿಕ ವಸ್ತುಗಳು ತನ್ನ ಬಳಿ ಇವೆ ಎಂದು ಹೇಳಿ ಅದನ್ನು ಮಾರಾಟ ಮಾಡುವುದಾಗಿ ಹೇಳಿ ಹಲವರಿಗೆ ಈತ ಮೋಸ ಮಾಡಿದ್ದಾನೆ.

  ನಟ ಮಾತ್ರವಲ್ಲ, ಉದ್ಯಮಿ ಸಹ ಹೌದು

  ನಟ ಮಾತ್ರವಲ್ಲ, ಉದ್ಯಮಿ ಸಹ ಹೌದು

  ಮಲಯಾಳಂನ ಮೋಹನ್‌ಲಾಲ್ ಖ್ಯಾತ ನಟರಾಗಿರುವ ಜೊತೆಗೆ ಕೇರಳದ ಟಾಪ್ ಬ್ಯುನಿನೆಸ್‌ಮೆನ್‌ಗಳಲ್ಲಿ ಒಬ್ಬರು. ಕೇರಳದಾದ್ಯಂತ ಹಲವು ಉದ್ಯಮಗಳನ್ನು ಹೊಂದಿರುವ ಮೋಹನ್‌ಲಾಲ್, ದುಬೈ ಸೇರಿದಂತೆ ಇತರ ಅರಬ್ ದೇಶಗಳಲ್ಲಿಯೂ ವ್ಯವಹಾರ ಹೊಂದಿದ್ದಾರೆ. ಹಲವು ಬಾರಿ ಮೋಹನ್‌ಲಾಲ್ ನಿವಾಸದ ಮೇಲೆ ಐಟಿ ರೇಡ್‌ಗಳು ಸಹ ಆಗಿವೆ.

  English summary
  Malayalam super star Mohanlal to face trail regarding illegal possession of 2 pair of ivory. Case is in magistrate court.
  IIFA Banner

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X