For Quick Alerts
  ALLOW NOTIFICATIONS  
  For Daily Alerts

  ಕೇರಳದಲ್ಲಿ ಕೆಜಿಎಫ್ 2, 777 ಚಾರ್ಲಿ ಗೆಲ್ಲಿಸಿದ್ದ ನಟನಿಗೆ ಕರ್ನಾಟಕದಲ್ಲೂ ಅದೇ ಪ್ರತಿಕ್ರಿಯೆ ಸಿಗುತ್ತಾ?

  |

  ಕನ್ನಡದ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಕೇರಳದಲ್ಲಿ ಸದ್ದು ಮಾಡಿವೆ. ಅದರಲ್ಲಿ ಮೊದಲನೆಯದ್ದು ಯಶ್ ಹಾಗೂ ಪ್ರಶಾಂತ್ ನೀಲ್ ಕಾಂಬಿನೇಷನ್ ಸಿನಿಮಾ 'ಕೆಜಿಎಫ್' ಇನ್ನೊಂದು ರಕ್ಷಿತ್ ಶೆಟ್ಟಿ ಹಾಗೂ ಕಿರಣ್ ರಾಜ್ ಕಾಂಬಿನೇಷನ್ ಸಿನಿಮಾ '777 ಚಾರ್ಲಿ'.

  ಈ ಎರಡೂ ಸಿನಿಮಾಗಳನ್ನು ಕೇರಳದಲ್ಲಿ ರಿಲೀಸ್ ಮಾಡಿದ್ದು ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್. ಮಲಯಾಳಂನಲ್ಲಿ ವಿಭಿನ್ನ ಸಿನಿಮಾಗಳಲ್ಲಿ ನಟಿಸಿ, ನಿರ್ದೇಶಿಸುತ್ತಿರುವ ಪೃಥ್ವಿರಾಜ್ ಈ ಬಾರಿ ತಮ್ಮ ಸಿನಿಮಾವನ್ನು ಹೊತ್ತು ಕರ್ನಾಟಕಕ್ಕೆ ಬಂದಿದ್ದಾರೆ. ಅದುವೇ 'ಕಡುವ'.

  ಕಡುವ ಜೂನ್ 30ಕ್ಕೆ ರಿಲೀಸ್

  ಕಡುವ ಜೂನ್ 30ಕ್ಕೆ ರಿಲೀಸ್

  ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಬಹು ನಿರೀಕ್ಷಿತ ಸಿನಿಮಾ 'ಕಡುವ'. ಜೂನ್ 30ರಂದು ಈ ಸಿನಿಮಾ ದೇಶದಾದ್ಯಂತ ರಿಲೀಸ್ ಆಗುತ್ತಿದೆ. ಹಾಗಂತ ಮಲಯಾಳಂ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುತ್ತಿಲ್ಲ. ಕನ್ನಡ, ತೆಲುಗು, ತಮಿಳು, ಹಿಂದಿ ಭಾಷೆಯಲ್ಲೂ ಏಕಕಾಲಕ್ಕೆ ಈ ಸಿನಿಮಾ ರಿಲೀಸ್ ಆಗುತ್ತಿದೆ. ಮಲಯಾಳಂನ ಪ್ಯಾನ್ ಇಂಡಿಯಾ ಸಿನಿಮಾ ಕರ್ನಾಟಕದಲ್ಲಿ ಕನ್ನಡದಲ್ಲಿಯೇ ರಿಲೀಸ್ ಆಗುತ್ತಿದೆ.

  ಪೃಥ್ವಿರಾಜ್ ಕನ್ನಡದಲ್ಲಿ ಟ್ವೀಟ್

  ಪೃಥ್ವಿರಾಜ್ ಕನ್ನಡದಲ್ಲಿ ಟ್ವೀಟ್

  'ಕಡುವ' ಸಿನಿಮಾ ಕನ್ನಡದಲ್ಲೂ ಬಿಡುಗಡೆಯಾಗುತ್ತಿರುವುದರಿಂದ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಬೆಂಗಳೂರಿಗೆ ಬರುವುದಕ್ಕೂ ಮುನ್ನ ನಮ್ಮ ಬೆಂಗಳೂರು.. ನಾನು ನಮ್ಮ ಬೆಂಗಳೂರಿಗೆ ಬರುತ್ತಿದ್ದೇವೆ." ಎಂದು ಟ್ವೀಟ್ ಮಾಡಿದ ಬಳಿಕ ಬೆಂಗಳೂರಿಗೆ ಬಂದಿದ್ದರು. ಕಡುವ ಸಿನಿಮಾದ ಬಗ್ಗೆ ಮಾಹಿತಿ ನೀಡಿ ತೆರಳಿದಿದ್ದಾರೆ. ಅಂದ್ಹಾಗೆ ಈ ಸಿನಿಮಾದಲ್ಲಿ ವಿವೇಕ್ ಓಬೆರಾಯ್, ಸಂಯುಕ್ತ ಮೆನನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

  'ಕೆಜಿಎಫ್ 2', 'ಚಾರ್ಲಿ' ಲಾಭ ಬಂತಂತೆ

  'ಕೆಜಿಎಫ್ 2', 'ಚಾರ್ಲಿ' ಲಾಭ ಬಂತಂತೆ

  ಕನ್ನಡದ ಎರಡು ಪ್ಯಾನ್ ಇಂಡಿಯಾ ಸಿನಿಮಾ 'ಕೆಜಿಎಫ್ 2' ಹಾಗೂ '777 ಚಾರ್ಲಿ'ಯನ್ನು ಪೃಥ್ವಿರಾಜ್ ಸುಕುಮಾರನ್ ರಿಲೀಸ್ ಮಾಡಿದ್ದರು. ಈ ಎರಡೂ ಸಿನಿಮಾಗಳಿಂದ ಭರ್ಜರಿ ಲಾಭ ಬಂದಿದೆ ಎಂದು ಪೃಥ್ವಿರಾಜ್ ಸುಕುಮಾರನ್ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ್ದಾರೆ. ಹೀಗಾಗಿ 'ಕಡುವ'ಗೆ ಕರ್ನಾಟಕದಲ್ಲಿ ಯಾವ ರೀತಿ ಪ್ರತಿಕ್ರಿಯೆ ಸಿಗುತ್ತೆ ಎನ್ನುವುದು ಕುತೂಹಲ ಕೆರಳಿಸಿದೆ.

  ರಿಯಲ್ ಲೈಫ್ ಸ್ಟೋರಿ

  ರಿಯಲ್ ಲೈಫ್ ಸ್ಟೋರಿ

  ಶಾಜಿ ಕೈಲಾಸ್ ನಿರ್ದೇಶನದ ಈ ಸಿನಿಮಾ ಕಡುವಕುನ್ನೇಲ್ ಕುರುವಚನ್ ಎಂಬ ವ್ಯಕ್ತಿಯ ಕಥೆಯಾಗಿದೆ. ನೈಜ ಘಟನೆಯನ್ನು ಆಧರಿಸಿದ ಈ ಸಿನಿಮಾದಲ್ಲಿ ಪೃಥ್ವಿರಾಜ್ ರಿಯಲ್ ಲೈಫ್ ವ್ಯಕ್ತಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಬಾಕ್ಸಾಫೀಸ್‌ನಲ್ಲಿ ಅದ್ಯಾವ ಮಟ್ಟಿಗೆ ಸದ್ದು ಮಾಡುತ್ತೆ ಎಂದು ನೋಡಲು ಮಾಲಿವುಡ್ ಕಾಯುತ್ತಿದೆ.

  English summary
  Malayalam Movie Kaduva Releasing In Kannada Actor Prithviraj Sukumaran talks about KGF 2, 777 Charlie, Know More.
  Saturday, June 25, 2022, 10:43
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X