twitter
    For Quick Alerts
    ALLOW NOTIFICATIONS  
    For Daily Alerts

    'ಮಿಲನ' ನಟಿ ಪಾರ್ವತಿ ಸಿನಿಮಾಕ್ಕೆ ಸಂಕಷ್ಟ: 'ದೇಶದ್ರೋಹಿ' ಸಿನಿಮಾ ಎಂದ ಸೆನ್ಸಾರ್ ಸದಸ್ಯ

    |

    ಕನ್ನಡದಲ್ಲಿ ಮಿಲನ, ಪೃಥ್ವಿ, ಮಳೆ ಬರಲಿ ಮಂಜು ಇರಲಿ ಸಿನಿಮಾಗಳಲ್ಲಿ ನಟಿಸಿರುವ ಪಾರ್ವತಿ ಮೆನನ್ ನಟನೆಯ ಮಲಯಾಳಂ ಸಿನಿಮಾಕ್ಕೆ ಸೆನ್ಸಾರ್ ಬೋರ್ಡ್‌ನಿಂದ ಸಂಕಷ್ಟ ಎದುರಾಗಿದೆ.

    ಪಾರ್ವತಿ ನಟಿಸಿರುವ 'ವರ್ತಮಾನಂ' ಸಿನಿಮಾವು ಚಿತ್ರೀಕರಣ ಮುಗಿಸಿ ಸೆನ್ಸಾರ್ ಮಂಡಳಿ ಮುಂದೆ ಸರ್ಟಿಫಿಕೇಟ್‌ಗಾಗಿ ಅರ್ಜಿ ಸಲ್ಲಿಸಿತ್ತು, ಸಿನಿಮಾ ವೀಕ್ಷಿಸಿದ ಸಿಬಿಎಫ್‌ಸಿ ಯು ಸಿನಿಮಾವನ್ನು ಪ್ರದರ್ಶನ ಮಾಡುವಂತಿಲ್ಲ ಎಂದಿದೆ.

    'ವರ್ತಮಾನಂ' ಸಿನಿಮಾದ ಕತೆಯು ದೆಹಲಿಯ ಜವಾಹರ್‌ಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕುರಿತಾಗಿ ಇದೆ. ಪಾರ್ವತಿ ಮೆನನ್ ನಿರ್ವಹಿಸಿರುವ ಪಾತ್ರವು ಜೆಎನ್‌ಯುಗೆ ವಿಷಯವೊಂದರ ಬಗ್ಗೆ ಅಧ್ಯಯನ ನಡೆಸಲು ಹೋಗುತ್ತದೆ ಆಕೆಯ ಸುತ್ತ ನಡೆಯುವ ಕತೆಯೇ ಸಿನಿಮಾ ಆಗಿದೆ.

    ಸಿನಿಮಾದ ಕತೆಯನ್ನು ಕೇರಳದ ಕಾಂಗ್ರೆಸ್ ಮುಖಂಡರೂ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ನಿರ್ಮಾಪಕರೂ ಆಗಿರುವ ಆರ್ಯಧನ್ ಶೌಖತ್ ಬರೆದಿದ್ದಾರೆ. ಎರಡು ರಾಷ್ಟ್ರಪ್ರಶಸ್ತಿಗಳನ್ನು ಪಡೆದಿರುವ ನಿರ್ದೇಶಕ ಸಿದ್ಧಾರ್ಥ ಶಿವ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

    ಕಾರಣ ನೀಡಿಲ್ಲ ಸಿಬಿಎಫ್‌ಸಿ: ಆರ್ಯಧನ್ ಶೌಖತ್

    ಕಾರಣ ನೀಡಿಲ್ಲ ಸಿಬಿಎಫ್‌ಸಿ: ಆರ್ಯಧನ್ ಶೌಖತ್

    ಆರ್ಯಧನ್ ಶೌಖತ್ ಹೇಳಿರುವಂತೆ, ತಮ್ಮ ನಿರ್ಮಾಣದ 'ವರ್ತಮಾನಂ' ಸಿನಿಮಾವನ್ನು ಸಿಬಿಎಫ್‌ಸಿಯು ಪರಿಶೀಲನಾ ಸಮಿತಿಗೆ ಕಳಿಸಿದೆಯಂತೆ. ಆದರೆ ಏಕೆ ಸಿನಿಮಾಕ್ಕೆ ಸರ್ಟಿಫಿಕೇಟ್ ನೀಡಲಾಗಿಲ್ಲ ಎಂಬ ಬಗ್ಗೆ ಸಿಬಿಎಫ್‌ಸಿ ಮಾಹಿತಿ ನೀಡಿಲ್ಲ ಎಂದಿದ್ದಾರೆ ಅವರು.

    ಟ್ವೀಟ್ ಡಿಲೀಟ್ ಮಾಡಿದ ಸೆನ್ಸಾರ್ ಸದಸ್ಯ, ಬಿಜೆಪಿ ಮುಖಂಡ

    ಟ್ವೀಟ್ ಡಿಲೀಟ್ ಮಾಡಿದ ಸೆನ್ಸಾರ್ ಸದಸ್ಯ, ಬಿಜೆಪಿ ಮುಖಂಡ

    ಕೇರಳ ಬಿಜೆಪಿ ಮುಖಂಡ, ಸೆನ್ಸಾರ್ ಬೋರ್ಡ್‌ನ ಸದಸ್ಯರೂ ಆಗಿರುವ ವಿ.ಸಂದೀಪ್ ಕುಮಾರ್, ವರ್ತಮಾನಂ ಸಿನಿಮಾದ ಬಗ್ಗೆ ಟ್ವೀಟ್ ಒಂದನ್ನು ಮಾಡಿ ನಂತರ ಡಿಲೀಟ್ ಮಾಡಿದರು. ಆದರೆ ಅವರ ಟ್ವೀಟ್ ನ ಸ್ಕ್ರೀನ್ ಶಾಟ್‌ ಸಖತ್ ವೈರಲ್ ಆಗಿದೆ.

    ಟ್ವೀಟ್‌ನಲ್ಲಿ ಹೇಳಿದ್ದು ಹೀಗೆ

    ಟ್ವೀಟ್‌ನಲ್ಲಿ ಹೇಳಿದ್ದು ಹೀಗೆ

    'ಸೆನ್ಸಾರ್ ಮಂಡಳಿ ಸದಸ್ಯನಾಗಿ ನಾನು ಸಿನಿಮಾ ನೋಡಿದೆ, ನನಗೆ ಸಿನಿಮಾ ಹಿಡಿಸಲಿಲ್ಲ. ಸಿನಿಮಾದಲ್ಲಿ ದಲಿತ, ಮುಸ್ಲಿಂ ರ ಮೇಲಿನ ದೌರ್ಜನ್ಯದ ಬಗ್ಗೆ ಜೆಎನ್‌ಯು ನಲ್ಲಿ ನಡೆದ ಆಂದೋಲನದ ವಿಷಯವಿದೆ. ನಾನು ಸಿನಿಮಾಕ್ಕೆ ವಿರೋಧ ವ್ಯಕ್ತಪಡಿಸಿದೆ ಏಕೆಂದರೆ ಆರ್ಯವರ್ಧನ್ ಶೌಖತ್ ಸಿನಿಮಾಕ್ಕೆ ಕತೆ ಬರೆದು ನಿರ್ಮಾಣ ಮಾಡಿದ್ದಾರೆ ಹಾಗಾಗಿ ಇದು ದೇಶದ್ರೋಹಿ ಸಿನಿಮಾ ಆಗಿದೆ' ಎಂದು ಸಂದೀಪ್ ಕುಮಾರ್ ಟ್ವೀಟ್ ಮಾಡಿ ನಂತರ ಡಿಲೀಟ್ ಮಾಡಿದ್ದಾರೆ.

    Recommended Video

    Shivaraj Kumar and Rakshith Shetty awarded Dadasaheb Phalke Award south 2020 | Filmibeat kannada
    'ವಿದ್ಯಾರ್ಥಿ ಆಂದೋಲನದ ಬಗ್ಗೆ ಸಿನಿಮಾ ಮಾಡುವುದು ತಪ್ಪಾ?'

    'ವಿದ್ಯಾರ್ಥಿ ಆಂದೋಲನದ ಬಗ್ಗೆ ಸಿನಿಮಾ ಮಾಡುವುದು ತಪ್ಪಾ?'

    'ವಿದ್ಯಾರ್ಥಿಗಳು ಮಾಡಿದ ಆಂದೋಲನದ ಬಗ್ಗೆ ಸಿನಿಮಾ ಮಾಡಿದರೆ ಅದು ಹೇಗೆ ದೇಶದ್ರೋಹ ಆಗುತ್ತದೆ' ಎಂದು ಹಲವರು ಪ್ರಶ್ನೆ ಮಾಡಿದ್ದಾರೆ. ಕೇರಳದಲ್ಲಿ ಈ ಬಗ್ಗೆ ದೊಡ್ಡ ಚರ್ಚೆ ಏರ್ಪಟ್ಟಿದೆ. ಸಿನಿಮಾದ ಪೋಸ್ಟರ್ ಅನ್ನು ಇದೇ ಮಾರ್ಚ್‌ನಲ್ಲಿ ಮಮ್ಮುಟಿ ಬಿಡುಗಡೆ ಮಾಡಿದ್ದರು. ಸಿನಿಮಾದಲ್ಲಿ ಪಾರ್ವತಿ ಮುಸ್ಲಿಂ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ.

    English summary
    Parvathy's Varthamanam movie which is about JNU is in trouble. Censor board member called it an Anti National movie.
    Tuesday, December 29, 2020, 9:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X