For Quick Alerts
  ALLOW NOTIFICATIONS  
  For Daily Alerts

  ರಾಂಗ್ ಸೈಡ್ ನಲ್ಲಿ ಕಾರ್ ಓಡಿಸಿ ಪೊಲೀಸರ ಬಳಿ ತಗಲಾಕಿಕೊಂಡ ನಟ ದುಲ್ಕರ್ ಸಲ್ಮಾನ್

  |

  ಮಲಯಾಳಂನ ಖ್ಯಾತ ನಟ ದುಲ್ಕರ್ ಸಲ್ಮಾನ್ ಸದಾ ಸಿನಿಮಾಗಳ ವಿಚಾರವಾಗಿ ಸದ್ದು ಮಾಡುತ್ತಿರುತ್ತಾರೆ. ಆದರೆ ಈ ಬಾರಿ ದುಲ್ಕರ್ ಸಂಚಾರ ನಿಯಮ ಉಲ್ಲಂಘನೆ ಮಾಡಿ ಸುದ್ದಿಯಾಗಿದ್ದಾರೆ. ಮಲಯಾಳಂ ಖ್ಯಾತ ನಟ ದುಲ್ಕರ್ ತನ್ನ ಐಷಾರಾಮಿ ಕಾರ್ ಏರಿ ಒನ್ ವೇ ಯಲ್ಲಿ ಹೋಗಿ ಪೊಲೀಸರ ಬಳಿ ತಗಲಾಕಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ದುಲ್ಕರ್ ತನ್ನ ನೀಲಿ ಬಣ್ಣದ ಐಷಾರಾಮಿ ಪೋರ್ಷೆ ಕಾರಿನಲ್ಲಿ ರಾಂಗ್ ಸೈಡ್ ನಲ್ಲಿ ಪ್ರಯಣಿಸುತ್ತಿದ್ದರು. ಅದೆ ಸಮಯದಲ್ಲಿ ಪೊಲೀಸರ ದುಲ್ಕರ್ ಕಾರನ್ನು ನೋಡಿದ್ದಾರೆ. ಒನ್ ವೇ ಯಲ್ಲಿ ಬರ್ತಿದ್ದ ಕಾರನ್ನು ಪೊಲೀಸರು ತಡೆದು ನಿಲ್ಲಿಸಿ ಬಂದ ರಸ್ತೆಯಲ್ಲೇ ರಿವರ್ಸ್ ಹೋಗುವಂತೆ ಹೇಳಿದ್ದಾರೆ.

  ಚಿತ್ರೀಕರಣ ವೇಳೆ ನಟ ಫಹಾದ್ ಫಾಸಿಲ್‌ ಗೆ ಗಾಯ, ಶಸ್ತ್ರಚಿಕಿತ್ಸೆ

  ಬಂದ ಹಾದಿಯಲ್ಲೇ ದುಲ್ಕರ್ ರಿವರ್ಸ್ ಹೋಗಿ ಬಳಿಕ ಸರಿಯಾದ ದಾರಿಯಲ್ಲಿ ಚಲಾಯಿಸಿದ್ದಾರೆ. ಅಂದಹಾಗೆ ಇದು ದುಲ್ಕರ್ ಸಲ್ಮಾನ್ ಕಾರು ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು ವಿಡಿಯೋ ಮಾಡಲು ಪ್ರಾರಂಭಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆರೋಪ ದುಲ್ಕರ್ ವಿರುದ್ಧ ಕೇಳಿಬರುತ್ತಿರುವುದು ಇದೇ ಮೊದಲಲ್ಲ, ಈ ಹಿಂದೆಯೂ ಕೇಳಿಬಂದಿತ್ತು. ಅತಿ ವೇಗದ ಚಲನೆ ವಿಚಾರವಾಗಿ ದುಲ್ಕರ್ ಮತ್ತು ನಟ ಸುಕುಮಾರನ್ ವಿರುದ್ಧ ತನಿಖೆ ಸಹ ನಡೆಸಲಾಗಿತ್ತು.

  ಡಿ ಬಾಸ್ ಗೆ ಧನ್ಯವಾದ ಖುಷಿಯಿಂದ ಧನ್ಯವಾದ ಹೇಳಿದ ಯಡಿಯೂರಪ್ಪ | CM Yediyurappa | Darshan | Filmibeat Kannada

  ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ನಟ ದುಲ್ಕರ್ ಮುಂದಿನ ಸಿನಿಮಾದಲ್ಲಿ ಗ್ಯಾಂಗ್ ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಬಹುನಿರೀಕ್ಷೆಯ ಕುರುಪ್ ಸಿನಿಮಾಗಾಗಿ ದುಲ್ಕರ್ ಗ್ಯಾಂಗ್ ಸ್ಟರ್ ಆಗಿದ್ದಾರೆ. ಕೇರಳದ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಸುಕುಮಾರ್ ಕುರುಪ್ ಅವರ ಜೀವನಾಧಾರಿತ ಸಿನಿಮಾ ಇದಾಗಿದೆ. ಇನ್ನು ದುಲ್ಕರ್ ಬಳಿ ಮತ್ತೊಂದು ಸಿನಿಮಾವಿದ್ದು ಚಿತ್ರಕ್ಕೆ ಸದ್ಯ ಪ್ರೊಡಕ್ಷನ್ ನಂಬರ್ 6 ಎಂದು ಹೆಸರಿಡಲಾಗಿದೆ. ಸದ್ಯದಲ್ಲೇ ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿದೆ.

  English summary
  Police stopped Actor Dulquer Salmaan car for driving on wrong side of road.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X