For Quick Alerts
  ALLOW NOTIFICATIONS  
  For Daily Alerts

  ಮಲೆಯಾಳಂಗೂ ಹಬ್ಬಿದ ಪುನೀತ್-ಲಾಲ್ ಮೈತ್ರಿ

  By Mahesh
  |

  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹಾಗೂ ಮಲೆಯಾಳಂ ಸ್ಟಾರ್ ಮೋಹನ್ ಲಾಲ್ ಅಭಿನಯ 'ಮೈತ್ರಿ' ಚಿತ್ರ ಮಲೆಯಾಳಂ ಭಾಷೆಗೂ ಡಬ್ ಆಗಲಿದೆಯಂತೆ.

  ಕನ್ನಡ ಚಿತ್ರಗಳು ಹಿಟ್ ಆದ ಮೇಲೆ ಮಲೆಯಾಳಂ, ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗೆ ಡಬ್ ಆಗುವುದು ಸಾಮಾನ್ಯ ಸಂಗತಿ. ಈ ಹಿಂದೆ ಪುನೀತ್ ರಾಜ್ ಕುಮಾರ್ ಹಾಗೂ ಪಾರ್ವತಿ ಮೆನನ್ ಅಭಿನಯದ 'ಮಿಲನ' ಚಿತ್ರ ಕೂಡಾ ಯಶಸ್ವಿಯಾದ ಮೇಲೆ ಮಲೆಯಾಳಂಗೆ ಡಬ್ ಆಗಿತ್ತು.

  ಆದರೆ, ಮೈತ್ರಿ ಚಿತ್ರ ಇನ್ನೂ ಚಿತ್ರೀಕರಣದ ಹಂತದಲ್ಲಿದೆ ಒಂದೇ ಬಾರಿಗೆ ಎರಡು ಭಾಷೆಯಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರ ನಿರ್ಮಾಪಕರು ಚಿಂತಿಸಿದ್ದಾರಂತೆ. ಈ ಹಿಂದೆ ವೀರ ಕನ್ನಡಿಗ ಕೂಡಾ ಇದೇ ರೀತಿ ಆಗಿತ್ತು ಆದರೆ, ತೆಲುಗಿಗೆ ಚಿತ್ರ ಡಬ್ ಆದರೂ ಅಲ್ಲಿ ಜ್ಯೂ. ಎನ್ ಟಿಆರ್ ನಟಿಸಿದ್ದರು. ಈಗ ಮೈತ್ರಿ ಚಿತ್ರ ಡಬ್ ಮಾಡಲು ಮೋಹನ್ ಲಾಲ್ ನಟನೆ ಕಾರಣವೂ ಇರಬಹುದು.

  ಆಸ್ಕರ್ ವಿಜೇತ ಚಿತ್ರ ಸ್ಲಮ್ ಡಾಗ್ ಮಿಲೇನರ್ ನ ಕಥಾವಸ್ತುವಿನ ಸಣ್ಣ ಎಳೆಯಿಂದ ಸ್ಪೂರ್ತಿ ಪಡೆದು ಈ ಚಿತ್ರದ ಕಥೆ ಹೆಣೆಯಲಾಗಿದೆ ಎಂಬ ಸುದ್ದಿಯಿದೆ. ಸ್ಲಮ್ ಡಾಗ್ ಮಿಲೇನರ್ ನಲ್ಲಿ ಅನಿಲ್ ಕಪೂರ್ ನಿರ್ವಹಿಸಿದ್ದ ಪಾತವನ್ನು ಇಲ್ಲಿ ಪುನೀತ್ ರಾಜ್ ಕುಮಾರ್ ಮಾಡುತ್ತಿದ್ದಾರೆ.

  ಸುವರ್ಣ ಟಿವಿಯಲ್ಲಿ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ನಿರೂಪಕರಾಗಿ ಯಶಸ್ಸು ಗಳಿಸಿರುವ ಪುನೀತ್ ಗೆ ಈ ಚಿತ್ರದಲ್ಲಿ ನಟನೆ ಸಹಜವಾಗಿ ಸುಲಭವಾಗಿದೆ.ಮೋಹನ್ ಲಾಲ್ ಅವರು ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಪುನೀತ್ ಅವರ' ಜಾಕಿ' ಚಿತ್ರದ ನಾಯಕಿಯಾಗಿದ್ದ ಮಲೆಯಾಳಂ ಬೆಡಗಿ ಭಾವನಾ ಅವರು ಮತ್ತೊಮ್ಮೆ ಪುನೀತ್ ಗೆ ಜೋಡಿಯಾಗಿದ್ದಾರೆ.

  ಬಹುಭಾಷಾ ನಟಿ ಅರ್ಚನಾ, ಅತುಲ್ ಕುಲಕರ್ಣಿ, ರವಿ ಕಾಳೆ ಹಾಗೂ ಇತರರು ಪಾತ್ರವರ್ಗದಲ್ಲಿದ್ದಾರೆ. ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯವಾಗಿದ್ದು, ಪೋಸ್ಟ್ ಪ್ರೊಡೆಕ್ಷನ್ ಹಂತದಲ್ಲಿದೆ. 'ನವಿಲಾದವರು' ಎಂಬ ಉತ್ತಮ ಸಂದೇಶ ಸಾರುವ ಚಿತ್ರವನ್ನು ಕೆನಾನ್ ಕೆಮರಾ ಮೂಲಕ ಚಿತ್ರಿಸಿ 35 ಸಾವಿರ ರು ವೆಚ್ಚದಲ್ಲೇ ಚಿತ್ರ ತೆರೆಗೆ ತಂದಿದ್ದ ಗಿರಿರಾಜ್ ಅವರು ಮೊದಲ ಬಾರಿಗೆ ತಮ್ಮ ಚಿತ್ರವೊಂದು ಬಿಡುಗಡೆಗೊಳ್ಳುವ ಹಂತಕ್ಕೆ ಬರುತ್ತಿರುವುದಕ್ಕೆ ಖುಷಿಯಾಗಿದ್ದಾರೆ. ಜಟ್ಟಾ ಎಂಬ ಇನ್ನೊಂದು ಚಿತ್ರ ಮುಗಿಸಿ ಬಿಡುಗಡೆ ಮಾಡಲು ಕಾದಿದ್ದಾರೆ.

  ಮೈತ್ರಿ ಚಿತ್ರಕ್ಕೆ ಪ್ರೊ ಬರಗೂರು ರಾಮಚಂದ್ರಪ್ಪ, ಡಾ. ಎಚ್ ಎಸ್ ವೆಂಕಟೇಶ್ ಮೂರ್ತಿ ಸಾಹಿತ್ಯ, ಇಳಯರಾಜ ಸಂಗೀತವಿದೆ. ವರ್ಷಾಂತ್ಯಕ್ಕೆ ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

  English summary
  Puneet Rajkumar is all set to woo Malayalam audience. Probably for the first time, his movie is planned to be dubbed in the Mollywood.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X