For Quick Alerts
  ALLOW NOTIFICATIONS  
  For Daily Alerts

  ಲೈಂಗಿಕ ದೌರ್ಜನ್ಯ: ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಪ್ರಕರಣ ದಾಖಲು

  |

  ಮಲಯಾಳಂ ಚಿತ್ರರಂಗದ ಜನಪ್ರಿಯ ನಟ, ನಿರ್ಮಾಪಕ ವಿಜಯ್ ಬಾಬು ವಿರುದ್ಧ ಎರ್ನಾಕುಲಂನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ.

  ಏಪ್ರಿಲ್ 22 ರಂದು ಯುವತಿಯೊಬ್ಬರು ವಿಜಯ್ ಬಾಬು ವಿರುದ್ಧ ಎರ್ನಾಕುಲಂ ದಕ್ಷಿಣ ಪೊಲೀಸ್ ಠಾಣೆಯಲ್ಲಿ ವಿಜಯ್ ಬಾಬು ವಿರುದ್ಧ ದೂರು ದಾಖಲಿಸಿದ್ದಾರೆ. ವಿಜಯ್ ಬಾಬು ತಮ್ಮ ಮೇಲೆ ಕೊಚ್ಚಿಯ ಅಪಾರ್ಟ್‌ಮೆಂಟ್ ಒಂದರಲ್ಲಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

  ಆದರೆ ಯುವತಿಯ ಆರೋಪವನ್ನು ಅಲ್ಲಗಳೆದಿದ್ದ ವಿಜಯ್ ಬಾಬು, ಫೇಸ್‌ಬುಕ್ ಲೈವ್‌ ಬಂದು ಆರೋಪದ ಬಗ್ಗೆ ಮಾತನಾಡಿದ್ದರು, ಸುಳ್ಳು ಪ್ರಕರಣದಲ್ಲಿ ನನ್ನ ಹೆಸರು, ಗುರುತು ಬಹಿರಂಗಗೊಳಿಸಿ ನನ್ನ ಗೌರವಕ್ಕೆ ಕುಂದುತರಲಾಗಿದೆ. ಹಾಗಿದ್ದರೆ ಸುಳ್ಳು ಪ್ರಕರಣ ಹಾಕಿದ ಮಹಿಳೆಯ ಹೆಸರನ್ನೇಕೆ ಗೌಪ್ಯವಾಗಿ ಇಡಲಾಗಿದೆ ಎಂದು ಪ್ರಶ್ನಿಸಿ ಯುವತಿಯ ಹೆಸರನ್ನು ಸಹ ಹೇಳಿದ್ದರು.

  ಈ ಪ್ರಕರಣದಲ್ಲಿ ನಾನು ಸಂತ್ರಸ್ತ ಆದರೆ ನನ್ನ ಹೆಸರು, ಗುರುತನ್ನು ಬಹಿರಂಗಪಡಿಸಲಾಗಿದೆ. ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ಕೆಲವು ಪ್ರಕರಣಗಳಲ್ಲಿ ಮಹಿಳೆಯರ ಹೆಸರನ್ನು ಮಾತ್ರವೇ ಏಕೆ ಗೌಪ್ಯವಾಗಿ ಇಡಲಾಗುತ್ತದೆ ಎಂದು ಸಹ ವಿಜಯ್ ಬಾಬು ತಮ್ಮ ಲೈವ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

  ವಿಜಯ್ ಬಾಬು ಮಲಯಾಳಂ ಚಿತ್ರರಂಗದ ಜನಪ್ರಿಯ ನಟ ಹಾಗೂ ನಿರ್ಮಾಪಕ. ಫ್ರೈಡೇ ಫಿಲ್ಮ್ ಹೌಸ್ ಹೆಸರಿನ ನಿರ್ಮಾಣ ಸಂಸ್ಥೆಯನ್ನು ವಿಜಯ್ ಬಾಬು ಹೊಂದಿದ್ದಾರೆ. ಕಳೆದ ಒಂದು ದಶಕಕ್ಕೂ ಹೆಚ್ಚು ಸಮಯದಿಂದ ಮಲಯಾಳಂ ಚಿತ್ರರಂಗದಲ್ಲಿ ವಿಜಯ್ ಬಾಬು ಕೆಲಸ ಮಾಡುತ್ತಿದ್ದಾರೆ. ಅವರ ನಿರ್ಮಾಣ ಸಂಸ್ಥೆ ಸಹ ಕೆಲವು ಅತ್ಯುತ್ತಮ ಸಿನಿಮಾಗಳನ್ನು ನೀಡಿದೆ. ವಿಜಯ್ ಬಾಬು ನಿರ್ಮಾಣ ಸಂಸ್ಥೆಯಿಂದ ತಯಾರಾದ ಸಿನಿಮಾಗಳು ಹಲವು ಪ್ರಶಸ್ತಿಗಳನ್ನು ಗಳಿಸಿಕೊಂಡಿವೆ.

  ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ದೌರ್ಜನ್ಯ, ಕಿರುಕುಳ ಪ್ರಕರಣಗಳು ಹೆಚ್ಚು ವರದಿಯಾಗುತ್ತಿವೆ. ನಟ ದಿಲೀಪ್ ಪ್ರಕರಣವಂತೂ ಇಡೀ ದೇಶವನ್ನೇ ಸೆಳೆದಿದೆ. ದಿಲೀಪ್ ಆದೇಶದ ಮೇರೆಗೆ ಮಲಯಾಳಂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಸ್ಟಾರ್ ನಟಿಯೊಬ್ಬರಿಗೆ ಕೆಲವು ದುರುಳರು ಲೈಂಗಿಕ ದೌರ್ಜನ್ಯ ನೀಡಿದ್ದರು. ಈ ಪ್ರಕರಣದ ವಿಚಾರಣೆ ಈಗಲೂ ನಡೆಯುತ್ತಿದೆ.

  ಕೆಲವು ದಿನಗಳ ಹಿಂದಷ್ಟೆ ಮಲಯಾಳಂ ಸಿನಿಮಾ ನಿರ್ದೇಶಕ ಲಿಜು ಕೃಷ್ಣ ಎಂಬಾತನ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಕೊಚ್ಚಿ ಬಳಿ ಸಿನಿಮಾದ ಚಿತ್ರೀಕರಣದಲ್ಲಿ ನಿರತನಾಗಿದ್ದ ಆತನನ್ನು ಚಿತ್ರೀಕರಣದ ಸ್ಥಳದಿಂದಲೇ ಬಂಧಿಸಿ ಪೊಲೀಸರು ಕರೆದೊಯ್ದರು. ಆತನನ್ನು ನಿರ್ದೇಶಕ ಸಂಘದಿಂದ ಸಹ ಕಿತ್ತೊಗೆಯಲಾಯ್ತು.

  ಮಲಯಾಳಂ ನ ಜನಪ್ರಿಯ ನಟ ವಿನಾಯಕನ್ ಮೀ ಟೂ ಆರೋಪದ ಬಗ್ಗೆ ಮಾತನಾಡಿ ವಿವಾದ ಎಬ್ಬಿಸಿದ್ದರು. ''ನನಗೆ ಮೀಟೂ ಅಭಿಯಾನ ಅರ್ಥವೇ ಆಗುವುದಿಲ್ಲ. ಮಲಯಾಳಂ ನಟಿ ನವ್ಯಾ ನಾಯರ್ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡುತ್ತಿರುವ 'ಒರುತಿ' ಸಿನಿಮಾದ ಪ್ರಚಾರದ ವೇಳೆ ಮಾತನಾಡುತ್ತಿದ್ದ ವಿನಾಯಕನ್, ನಾನು ಹತ್ತು ಜನ ಮಹಿಳೆಯರೊಂದಿಗೆ ಲೈಂಗಿಕ ಸಂಬಂಧವನ್ನು ಹೊಂದಿದ್ದೇನೆ. ನನ್ನೊಂದಿಗೆ ಮಲಗುವಿರಾ ಎಂದು ಮಹಿಳೆಯರನ್ನು ನೇರವಾಗಿಯೇ ಕೇಳುತ್ತೇನೆ. ಅವರು ಓಕೆ ಅಂದರೆ ಓಕೆ. ಇಲ್ಲವಾದರೆ ನಾನು ಆ ವಿಷಯವನ್ನು ಅಲ್ಲೇ ಬಿಟ್ಟು ಬಿಡುತ್ತೇನೆ. ಆ ವಿಚಾರವಾಗಿ ನಾನು ಅವರಿಗೆ ಬಲವಂತವನ್ನು ಮಾಡುವುದಿಲ್ಲ'' ಎಂದಿದ್ದಾರೆ. ವಿನಾಯಕನ್‌ರ ಈ ಹೇಳಿಕೆಗೆ ಮಲಯಾಳಂ ಚಿತ್ರರಂಗದ ಅನೇಕರು ಆಕ್ರೋಶ ವ್ಯಕ್ತಪಡಿಸಿದ್ದರು.

  English summary
  Sexual harassment case booked on Kerala actor producer Vijay Babu. He came live and claimed he is the victim in this case
  Wednesday, April 27, 2022, 14:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X