Don't Miss!
- Sports
Asia Cup 2023: ಎಸಿಸಿ ಸಭೆಯಲ್ಲಿ ತೀರ್ಮಾನ: ಏಷ್ಯಾಕಪ್ ಟೂರ್ನಿ ಪಾಕಿಸ್ತಾನದಿಂದ ಸ್ಥಳಾಂತರ!
- Lifestyle
Horoscope Today 6 Feb 2023: ಸೋಮವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- News
ರಾಜ್ಯ ರಾಜಕೀಯದ ಮುಂದಿನ ರಹಸ್ಯವೊಂದನ್ನು ಬೇಧಿಸಿದ ಎಚ್ಡಿಕೆ
- Finance
ಆಧಾರ್ ಕಾರ್ಡ್ ಸಂಖ್ಯೆಯಿಂದ ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಪರಿಶೀಲಿಸಿ, ಹೇಗೆ ಇಲ್ಲಿ ತಿಳಿಯಿರಿ
- Automobiles
ಹೆಚ್ಚಿನ ಮೈಲೇಜ್ ನೀಡುವ ಬಹುನಿರೀಕ್ಷಿತ ಟಾಟಾ ಆಲ್ಟ್ರೊಜ್ iCNG ಕಾರಿನ ವಿಶೇಷತೆಗಳು...
- Technology
ಇನ್ಮುಂದೆ ಟ್ವಿಟ್ಟರ್ನಲ್ಲೂ ಹಣ ಗಳಿಸಬಹುದು; ಮಸ್ಕ್ರ ಹೊಸ ನಿರ್ಧಾರ ಏನು!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸ್ವಿಮ್ಮಿಂಗ್ ಪೂಲ್‌ನಲ್ಲಿ ಹಲ್‌ಚಲ್ ಎಬ್ಬಿಸಿದ ಕೀರ್ತಿ ಸುರೇಶ್: ಮಹಾನಟಿ ಬಿಸಿಯೇರಿಸುವ ಫೋಟೊಗಳು
ಮಲಯಾಳಂ ನಟಿ ಕೀರ್ತಿ ಸುರೇಶ್ ಸದ್ಯ ರಿಲ್ಯಾಕ್ಸ್ ಮೂಡ್‌ನಲ್ಲಿದ್ದಾರೆ. ಥೈಲ್ಯಾಂಡ್‌ನಲ್ಲಿ ರಜೆಯ ಮಜೆ ಸವಿಯುತ್ತಿದ್ದಾರೆ. ಸಾಗರ ತೀರದಲ್ಲಿ ಈಜುಕೊಳದಲ್ಲಿ ಈಜಾಡಿದ್ದಾರೆ. ಅದರ ಫೋಟೊಗಳನ್ನು ಶೇರ್ ಮಾಡಿದ್ದಾರೆ.
ಮಹಾನಟಿ ಖ್ಯಾತಿಯ ಕೀರ್ತಿ ಸುರೇಶ್, ಸ್ಕಿನ್‌ಶೋನಿಂದ ದೂರವೇ ಉಳಿದಿದ್ದಾರೆ. ಆದರೆ ಬರ್ತಾ ಬರ್ತಾ ಎಲ್ಲದಕ್ಕೂ ಸೈ ಎನ್ನುತ್ತಿದ್ದಾರೆ. ಸದ್ಯ ಮೂರ್ನಾಲ್ಕು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಹೊಸ ವರ್ಷದ ಆರಂಭದಲ್ಲೇ ವಿದೇಶಕ್ಕೆ ಪ್ರವಾಸ ಹೋಗಿದ್ದಾರೆ. ಕಳೆದ ವರ್ಷ 4 ಸಿನಿಮಾಗಳಲ್ಲಿ ಕೀರ್ತಿ ನಟಿಸಿ ಗೆದ್ದಿದ್ದರು. ಮಹೇಶ್ ಬಾಬು ಜೋಡಿಯಾಗಿ 'ಸರ್ಕಾರಿವಾರು ಪಾಟ' ಚಿತ್ರದಲ್ಲೂ ಮಿಂಚಿದ್ದರು. ಕೀರ್ತಿ ತಂದೆ ಸುರೇಶ್ ಕುಮಾರ್ ನಿರ್ದೇಶಕರಾಗಿ ಕೆಲಸ ಮಾಡಿದ್ದರೆ ತಾಯಿ ಕೂಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
Shaakuntalam
trailer
:
ಭೂಮಿ
ಮೇಲೆ
ಅಪ್ಪ
ಅಮ್ಮನಿಗೆ
ಬೇಡವಾದ
ಮೊದಲ
ಮಗುವಿನ
ನೋವು
ನಲಿವಿನ
ಕಥೆ
ಚಿತ್ರರಂಗಕ್ಕೆ ಬಂದ ಆರಂಭದಲ್ಲಿ ಗುಂಡು ಗುಂಡಗೆ ಇದ್ದ ನಟಿ ಕೀರ್ತೀ ಸುರೇಶ್, ತೂಕ ಇಳಿಸಿಕೊಂಡು ಬಳುಕುವ ಬಳ್ಳಿಯಂತಾಗಿದ್ದಾರೆ. ಪೈಪೋಟಿಗೆ ತಕ್ಕಂತೆ ಇತ್ತೀಚೆಗೆ ಸ್ಕಿನ್‌ಶೋ ಮಾಡುವುದಕ್ಕೂ ಸಿದ್ಧ ಎನ್ನುತ್ತಿದ್ದಾರೆ. ಇದೇ ಮೊದಲ ಬಾರಿಗೆ ಸ್ವಿಮ್‌ಸೂಟ್‌ನಲ್ಲಿ ದರ್ಶನ ಕೊಟ್ಟಿದ್ದಾರೆ.

ಸ್ವಿಮ್ಮಿಂಗ್ ಪೂಲ್‌ನಲ್ಲಿ ಮಹಾನಟಿ
ಥೈಲ್ಯಾಂಡ್‌ನ ಕೊ ಸಮುಯ್ ದ್ವೀಪದಲ್ಲಿ ಬೀಡುಬಿಟ್ಟಿರುವ ನಟಿ ಕೀರ್ತಿಸುರೇಶ್ ಕಡಲ ತೀರದಲ್ಲಿ ಕಾಲ ಕಳೆಯುತ್ತಿದ್ದಾರೆ. ಸ್ವಿಮ್ಮಿಂಗ್ ಸೂಟ್ ತೊಟ್ಟು ಪೂಲ್‌ನಲ್ಲಿ ಮಿಂದೆಂದು ಸ್ಟೈಲಿಶ್ ಲುಕ್‌ನಲ್ಲಿ ದರ್ಶನ ಕೊಟ್ಟಿದ್ದಾರೆ. ಮೊದಲ ಬಾರಿಗೆ ನೆಚ್ಚಿನ ನಟಿಯನ್ನು ಈ ಅವತಾರದಲ್ಲಿ ನೋಡಿದ ಅಭಿಮಾನಿಗಳು ಫಿದಾ ಆಗೋಗಿದ್ದಾರೆ. ಒದ್ದೆ ಮುದ್ದೆಯಾದ ನಟಿ ಫ್ಲೋಟಿಂಗ್ ಬ್ರೇಕ್‌ಫಾಸ್ಟ್ ಸವಿದು ಎಂಜಾಯ್ ಮಾಡಿದ್ದಾರೆ. ಗಾಗಲ್ ತೊಟ್ಟು ಕ್ಯಾಮರಾಗೆ ಪೋಸ್ಟ್ ನೀಡಿದ್ದಾರೆ. ಈ ಫೋಟೊಗೆ ಭಾರೀ ಲೈಕ್ಸ್ ಸಿಕ್ತಿದೆ.

ಕೀರ್ತಿ ಪೋಸ್ಟ್ ವೈರಲ್
ಇನ್ನು ಶರ್ಟ್, ಶಾರ್ಟ್ಸ್ ತೊಟ್ಟು ಕಡಲ ತೀರದಲ್ಲಿ ಸುತ್ತಾಡಿದ್ದಾರೆ. ರಮಣೀಯ ತಾಣದಲ್ಲಿ ನಯನ ಮನೋಹರ ಸೂರ್ಯಾಸ್ತ ಸನ್ನಿವೇಶವನ್ನು ನೋಡಿ ಸವಿದಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದಾರೆ. ಅದಕ್ಕೆ ಲಕ್ಷ ಲಕ್ಷ ಲೈಕ್ಸ್, ಕಾಮೆಂಟ್ಸ್ ಸಿಗುತ್ತಿದೆ. ಕಳೆದೊಂದು ವಾರದಿಂದ ಥೈಲ್ಯಾಂಡ್‌ನಲ್ಲೇ ಕೀರ್ತಿ ಸುರೇಶ್ ಉಳಿದುಕೊಂಡಿದ್ದಾರೆ. ಹೊಸ ವರ್ಷವನ್ನೂ ಅಲ್ಲೇ ಸ್ವಾಗತಿಸಿದ್ದಾರೆ. ಸಾಹಸಮಯ ಕ್ರೀಡೆಗಳಲ್ಲೂ ಭಾಗಿ ಆಗಿದ್ದಾರೆ.

'ಮಹಾನಟಿ'ಯಾಗಿ ಮೆರೆದ ಕೀರ್ತಿ
ಚೆನ್ನೈನಲ್ಲಿ ಹುಟ್ಟಿದ ಕೀರ್ತೀ ಅಲ್ಲೇ ಶಾಲೆ ಮುಗಿಸಿದ್ದರು. ನಂತರ ತಿರುವಂತನಪುರಂಗೆ ಶಿಫ್ಟ್ ಆಗಿದ್ದರು. ಅಲ್ಲೇ ಕಾಲೇಜು ಮುಗಿಸಿದ್ದರು. ಫ್ಯಾಷನ್ ಡಿಸೈನಿಂಗ್‌ನಲ್ಲಿ ಡಿಗ್ರಿ ಮುಗಿಸಿದ ಚೆಲುವೆ 9 ವರ್ಷಗಳ ಹಿಂದೆ 'ಗೀತಾಜಂಲಿ' ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದಿದ್ದರು. ಅದಕ್ಕೂ ಮುನ್ನ ಬಾಲನಟಿಯಾಗಿಯೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಎಲ್ಲಾ ಮಲಯಾಳಂ ನಟಿಯರಂತೆ ಅಂದ, ಅಭಿನಯ ಎರಡರಲ್ಲೂ ಸೈ ಎನಿಸಿಕೊಂಡಿದ್ದರು. 2018ರಲ್ಲಿ ಬಂದ ತೆಲುಗಿನ 'ಮಹಾನಟಿ' ಸಿನಿಮಾ ದೊಡ್ಡ ಹೆಸರು ತಂದುಕೊಟ್ಟಿತ್ತು. ಚಿತ್ರದಲ್ಲಿ ಖ್ಯಾತ ನಟಿ ಸಾವಿತ್ರಿ ಪಾತ್ರದಲ್ಲಿ ಕೀರ್ತಿ ಮೋಡಿ ಮಾಡಿದ್ದರು.

4 ಸಿನಿಮಾಗಳಲ್ಲಿ ಕೀರ್ತಿ ನಟನೆ
ತೆಲುಗಿನ 'ದಸರಾ', 'ಭೋಳಾ ಶಂಕರ್' ಹಾಗೂ ತಮಿಳಿನ 'ಮಾಮಾನನ್', 'ಸಿರೆನ್' ಸಿನಿಮಾಗಳಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಹೊಸಬರ ಹಾವಳಿ ನಡುವೆ ಮಹಾನಟಿಯ ಆರ್ಭಟವೂ ಕಮ್ಮಿ ಆಗುತ್ತಿದೆ. ಹಾಗಾಗಿನೇ ಈ ರೀತಿ ಫೋಟೊಗಳನ್ನು ಶೇರ್ ಮಾಡಿ ಪದೇ ಪದೇ ನೆನಪು ಮಾಡುತ್ತಿದ್ದಾರೆ. ಸದ್ಯ ಕೀರ್ತಿ ಥೈಲ್ಯಾಂಡ್ ವಕೇಷನ್ ಫೋಟೊಗಳು ಸಖತ್ ವೈರಲ್ ಆಗಿದೆ.