For Quick Alerts
  ALLOW NOTIFICATIONS  
  For Daily Alerts

  ಮಲಯಾಳಂ ಸಿನಿಮಾಗಳಿಗೆ ಹಾಡುವುದಿಲ್ಲ ಎಂದ ಗಾಯಕ ವಿಜಯ್ ಯೇಸುದಾಸ್

  |

  ಖ್ಯಾತ ಗಾಯಕ ಯೇಸುದಾಸ್ ಪುತ್ರ ವಿಜಯ್ ಯೇಸುದಾಸ್ ದೊಡ್ಡ ನಿರ್ಣಯವೊಂದನ್ನು ಪ್ರಕಟಿಸಿದ್ದಾರೆ. ಇನ್ನು ಮುಂದೆ ಮಲಯಾಳಂ ಸಿನಿಮಾಗಳಿಗೆ ಹಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

  ಸ್ವತಃ ಮಲಯಾಳಿ ಆಗಿರುವ ವಿಜಯ್ ಯೇಸುದಾಸ್ ಅವರು ತಮ್ಮದೇ ಭಾಷೆಯ ಸಿನಿಮಾಗಳಿಗೆ ಹಾಡುವುದಿಲ್ಲ ಎಂದಿರುವುದು ವಿವಾದ ಎಬ್ಬಿಸಿದೆ. ಆದರೆ ಮಲಯಾಳಂ ಸಿನಿಮಾಗಳಲ್ಲಿ ಹಾಡುವುದಿಲ್ಲ ಎಂದಿರುವುದಕ್ಕೆ ಕಾರಣವನ್ನೂ ನೀಡಿದ್ದಾರೆ ವಿಜಯ್ ಯೇಸುದಾಸ್.

  ವಿಜಯ್ ಹೇಳಿರುವಂತೆ, ಮಲಯಾಳಂ ಸಿನಿಮಾ ಉದ್ಯಮದಲ್ಲಿ ಹಿನ್ನೆಲೆ ಗಾಯಕರಿಗೆ ಸೂಕ್ತ ಗೌರವ ಸಿಗುತ್ತಿಲ್ಲವಂತೆ. ಹಾಗಾಗಿ ಇನ್ನುಮುಂದೆ ಮಲಯಾಳಂ ಸಿನಿಮಾಗಳಲ್ಲಿ ಹಾಡುವುದಿಲ್ಲ, ಆದರೆ ಇತರೆ ಭಾಷೆಗಳ ಸಿನಿಮಾಗಳಲ್ಲಿ ಹಾಡುವುದು ಮುಂದುವರೆಸಲಿದ್ದೇನೆ ಎಂದಿದ್ದಾರೆ ವಿಜಯ್.

  ಬಹು ಬೇಡಿಕೆಯ ಗಾಯಕ ವಿಜಯ್ ಯೇಸುದಾಸ್

  ಬಹು ಬೇಡಿಕೆಯ ಗಾಯಕ ವಿಜಯ್ ಯೇಸುದಾಸ್

  ವಿಜಯ್ ಯೇಸುದಾಸ್ ದಕ್ಷಿಣ ಭಾರತದಲ್ಲಿ ಖ್ಯಾತ ಹಾಡುಗಾರರು, ಮಲಯಾಳಂ ಸಿನಿಮಾಗಳಲ್ಲಿ ಬಹು ಬೇಡಿಕೆಯ ಗಾಯಕರು, ಆದರೆ ಈಗ ಹಠಾತ್ತನೆ ನಿರ್ಣಯ ಪ್ರಕಟಿಸಿರುವುದು ಮಲಯಾಳಂ ಸಿನಿಮಾ ಉದ್ಯಮದವರಿಗೆ ಹಾಗೂ ಸಿನಿಮಾ ಪ್ರೇಮಿಗಳಿಗೆ ಅಚ್ಚರಿ ತಂದಿದೆ.

  ಅಪ್ಪ ಯೇಸುದಾಸ್ ಸಹ ನಿರ್ಲಕ್ಷ್ಯ ಅನುಭವಿಸಿದ್ದಾರೆ: ವಿಜಯ್

  ಅಪ್ಪ ಯೇಸುದಾಸ್ ಸಹ ನಿರ್ಲಕ್ಷ್ಯ ಅನುಭವಿಸಿದ್ದಾರೆ: ವಿಜಯ್

  'ಮಲಯಾಳಂ ಸಿನಿಮಾ ಉದ್ಯಮದಲ್ಲಿ ಹಿನ್ನೆಲೆ ಗಾಯಕರು ಹಾಗೂ ಸಂಗೀತ ನಿರ್ದೇಶಕರನ್ನು ಅಗೌರವದಿಂದ ಕಾಣಲಾಗುತ್ತಿದೆ. ಈ ನಿರ್ಲಕ್ಷ್ಯ ಸಹಿಸಲಾಗದೆ ಈ ನಿರ್ಣಯಕ್ಕೆ ಬಂದಿದ್ದೇನೆ, ತಂದೆ ಯೇಸುದಾಸ್ ಅವರೂ ಸಹ ಇದೇ ರೀತಿಯ ಅಗೌರವವನ್ನು ಮಲಯಾಳಂ ಸಿನಿಮಾ ಉದ್ಯಮದಲ್ಲಿ ಕಂಡಿದ್ದಾರೆ ಎಂದಿದ್ದಾರೆ ವಿಜಯ್.

  20 ವರ್ಷದಿಂದಲೂ ಹಿನ್ನೆಲೆ ಗಾಯನ

  20 ವರ್ಷದಿಂದಲೂ ಹಿನ್ನೆಲೆ ಗಾಯನ

  20 ವರ್ಷಗಳಿಂದಲೂ ಹಿನ್ನೆಲೆ ಗಾಯನ ಮಾಡುತ್ತಿರುವ ವಿಜಯ್ ಯೇಸುದಾಸ್‌ಗೆ ಕೇರಳದಲ್ಲಿ ಸಾಕಷ್ಟು ಅಭಿಮಾನಿಗಳಿದ್ದಾರೆ. ತಮ್ಮ ಅತ್ಯುತ್ತಮ ಹಾಡುಗಾರಿಕೆಗೆ ಹಲವು ಪ್ರಶಸ್ತಿಗಳನ್ನು ಸಹ ವಿಜಯ್ ಯೇಸುದಾಸ್ ಪಡೆದುಕೊಂಡಿದ್ದಾರೆ.

  ಚಿರು ನನಗೆ 10 ಸಾವಿರ ಆಡಿಯೋ ಮೆಸೇಜ್ ಕಳಿಸಿದ್ದಾರೆ | Chiranjeevi Sarja | Pratham | Filmibeat Kannada
  ನಟನೆಯಲ್ಲಿ ಬ್ಯುಸಿಯಾಗಿರುವ ವಿಜಯ್ ಯೇಸುದಾಸ್

  ನಟನೆಯಲ್ಲಿ ಬ್ಯುಸಿಯಾಗಿರುವ ವಿಜಯ್ ಯೇಸುದಾಸ್

  ಯೇಸುದಾಸ್ ಅವರು ಇತ್ತೀಚೆಗೆ ನಟನೆಯಲ್ಲೂ ತೊಡಗಿಕೊಂಡಿದ್ದಾರೆ. ಧನುಶ್ ನಟನೆಯ ಮಾರಿ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು ವಿಜಯ್, ಜೊತೆಗೆ ಈಗ ನಟ ವಿಜಯ್ ಸಿನಿಮಾದಲ್ಲಿ ಸಹ ನಟಿಸಿದ್ದಾರೆ. ಮಲಯಾಳಂ ನ ಕೆಲವು ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ.

  English summary
  Singer Yesudas's son Vijay Yesudas said he will not sing in Malayalam movies in future. He said Malayalam movie industry not giving respect to playback singers.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X