X
ಕಂಗುವಾ

ಕಂಗುವಾ

Action | Adventure | Fantasy | 14 Nov 2024 | U/A | 154 Mins
Kannada

2.5 /5 Users

0 /5 Filmibeat

ಕಂಗುವಾ ಕಥೆ

ಕಂಗುವಾ ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಸೂರ್ಯ ನಾಯಕನಾಗಿ ನಟಿಸಿದ್ದು, ದಿಶಾ ಪಟಾನಿ ನಾಯಕಿಯಾಗಿ ಮಿಂಚಿದ್ದಾರೆ. ಬಾಲಿವುಡ್ ನಟ ಬಾಬಿ ಡಿಯೋಲ್ ನೆಗೆಟಿವ್ ರೋಲ್‌ನಲ್ಲಿ ಅಬ್ಬರಿಸಿದ್ದು, ಕನ್ನಡ ಸೇರಿದಂತೆ 5 ಭಾಷೆಗಳಲ್ಲಿ 'ಕಂಗುವಾ' ಸಿನಿಮಾ ತೆರೆಕಂಡಿತು. ಕಥೆ: ಬೌಂಟಿ ಹಂಟರ್ ಆಗಿ ಫ್ರಾನ್ಸಿಸ್ (ಸೂರ್ಯ) ಗೋವಾದಲ್ಲಿ ಜಾಲಿ ಲೈಫ್ ಎಂಜಾಯ್ ಮಾಡಿಕೊಂಡಿರುತ್ತಾರೆ. ಆತನಿಗೆ ಏಂಜಲೀನಾ(ದಿಶಾ ಪಟಾನಿ) ಜೊತೆ ಲವ್ ಬ್ರೇಕಪ್ ಆಗಿರುತ್ತದೆ. ಅತ್ತ ರಷ್ಯಾದ ಲ್ಯಾಬ್‌ನಿಂದ ಒಬ್ಬ ಬಾಲಕ ತಪ್ಪಿಸಿಕೊಂಡು ಗೋವಾಗೆ ಬರುತ್ತಾನೆ. ಫ್ರಾನ್ಸಿಸ್ ಹಾಗೂ ಆ ಬಾಲಕನ ಭೇಟಿ ಆಗುತ್ತದೆ. ತಮ್ಮಿಬ್ಬರಿಗೂ ಏನೋ ನಂಟಿದೆ ಎನ್ನುವುದನ್ನು ತಿಳಿದುಕೊಳ್ಳುತ್ತಾರೆ. ಆದರೆ ಆ ಬಾಲಕನಿಗಾಗಿ ಒಂದು ಸೈನ್ಯವೇ ಬರುತ್ತದೆ. ಫ್ರಾನ್ಸಿಸ್ ಆ ಬಾಲಕನ ರಕ್ಷಣೆಗೆ ನಿಲ್ಲುತ್ತಾನೆ. ಈ ಹೋರಾಟದ ಸಮಯದಲ್ಲಿ ಕಂಗುವ ಕಥೆ 1000 ವರ್ಷ ಹಿಂದಕ್ಕೆ ಹೋಗುತ್ತದೆ. ಅದು ಕ್ರಿಶ 1070ರ ಕಾಲಘಟ್ಟ. ಆಗ ಪ್ರಣವಾದಿ ಕೋನದ ನಾಯಕ 'ಕಂಗುವ' ಪ್ರಣವ ಎಂಬ ಬಾಲಕನ ಜವಾಬ್ದಾರಿ ವಹಿಸಿಕೊಂಡಿರುತ್ತಾನೆ. ಅದು 5 ಬೇರೆ ಬೇರೆ ಬುಡಕಟ್ಟು ಜನರ ಗುಂಪುಗಳ ಪ್ರಪಂಚ. ಅಲ್ಲಿ ಕಾಪಾಲ ಕೋನದ ನಾಯಕ ಉಧಿರನ್(ಬಾಡಿ ಡಿಯೋಲ್) ಹಾಗೂ ಕಂಗುವ ವೈರತ್ವ ಇರುತ್ತದೆ. ಅಷ್ಟಕ್ಕೂ ಏನಿದು ಪಂಚ ಕೋನಗಳ ಕಾನ್ಸೆಪ್ಟ್? ಕಂಗುವ ಹಾಗೂ ಪ್ರಣವ ಜನ್ಮಜನ್ಮಾಂತರದ ಕಥೆ ಏನು? ಕ್ಲೈಮ್ಯಾಕ್ಸ್‌ನಲ್ಲಿ ಬರುವ ರುದ್ರಾಂಗ ನೇತ್ರ(ಕಾರ್ತಿ) ಮಾಡುವ ಶಪಥ ಏನು? ಎಂಬುದೇ ಸಿನಿಮಾ ಕಥೆ. 
Read More

ಕಂಗುವಾ ಕಲಾವಿದರು ಮತ್ತು ಸಿಬ್ಬಂದಿ

ಕಂಗುವಾ ಕ್ರೂ ಮಾಹಿತಿ

ನಿರ್ದೇಶಕ ಶಿವ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ NA
ನಿರ್ಮಾಪಕ NA
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಕಂಗುವಾ ವಿಮರ್ಶಕರ ವಿಮರ್ಶೆ

kannada.filmibeat.com
ನಿಜಕ್ಕೂ 'ಕಂಗುವ' ಕಥೆಯ ಕಾನ್ಸೆಪ್ಟ್ ಚೆನ್ನಾಗಿದೆ. ಒಂದು ಫ್ಯಾಂಟಸಿ ಚಿತ್ರಕ್ಕೆ ಇದ್ದಕ್ಕಿಂತ ಒಳ್ಳೆ ಸ್ಟೋರಿಲೈನ್ ಸಿಗಲ್ಲ. ಅದನ್ನು ಅಷ್ಟೇ ಸೊಗಸಾಗಿ ತೆರೆಗೆ ತರುವ ಪ್ರಯತ್ನ ಕೂಡ ನಡೆದಿದೆ. ಬಹಳ ಅದ್ಧೂರಿಯಾಗಿ ಭರ್ಜರಿ ಆಕ್ಷನ್ ಸೀಕ್ವೆನ್ಸ್ ಜೊತೆಗೆ ಹುಬ್ಬೇರಿಸುವಂತಹ ದೃಶ್ಯಕಾವ್ಯ ತೆರೆಮೇಲೆ ನಿರ್ಮಾಣವಾಗಿದೆ. ತ್ರಿಡಿ ಕನ್ನಡಕದಲ್ಲಿ ಸಿನಿಮಾ ಮತ್ತಷ್ಟು ಮಜಾ ಕೊಡುತ್ತದೆ. ಸೂರ್ಯ ಒನ್‌ಮ್ಯಾನ್ ಶೋ ಬಗ್ಗೆ ಎಷ್ಟು ಹೇಳಿದರೂ ಕಮ್ಮಿನೇ. ಆದರೆ ಕೆಲವೆಡೆ ಸಿನಿಮಾ ಬೋರ್ ಹೊಡೆಸುತ್ತದೆ.

ಕಂಗುವಾ ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಕಂಗುವಾ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+