ಯೋಗರಾಜ್ ಭಟ್ ನಿರ್ದೇಶನ 'ಕರಟಕ ದಮನಕ' ಸಿನಿಮಾದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಮತ್ತು ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಿಶ್ವಿಕಾ ನಾಯ್ಡು ಹಾಗೂ ಪ್ರಿಯಾ ಆನಂದ್ ನಾಯಕಿರಾಗಿ ಅಭಿನಯಿಸಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಪೊಲೀಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ರಂಗಾಯಣ ರಘು, ದೊಡ್ಡಣ್ಣ, ರವಿಶಂಕರ್ ವಿಭಿನ್ನ ಗೆಟಪ್‌ನಲ್ಲಿದ್ದಾರೆ. ರಾಕ್‌ಲೈನ್ ವೆಂಕಟೇಶ್ ಸಿನಿಮಾ ನಿರ್ಮಾಣ ಮಾಡಿದ್ದಾರೆ.
ಕಥೆ: ಕರಟಕ ದಮನಕ ಇದೊಂದು ಕುತಂತ್ರಿ ನರಿಗಳ ಸ್ವಭಾವವನ್ನು ಹೋಲುವ ಕಥೆ. ಶಿವಣ್ಣ ಹಾಗೂ ಪ್ರಭುದೇವ ಇಬ್ಬರೂ ಆ ಕುತಂತ್ರಿ ನರಿಗಳು. ಊರು ತುಂಬಾ ಮೋಸ ಮಾಡುತ್ತಾ? ಕಳ್ಳತನ ಮಾಡುತ್ತಾ ಬದುಕು ಸಾಗಿಸುವ ಕುತಂತ್ರಿಗಳು. ಇನ್ನೊಂದು ಕಡೆ ನೀರಿಗಾಗಿ ಪರದಾಡುತ್ತಿರುವ ಉತ್ತರ ಕರ್ನಾಟಕದ ಒಂದೂರಿನ ಜನರು. ನೀರಿಗಾಗಿ ನಡೆಯುವ ರಾಜಕೀಯ.
ನೀರು ಸಿಗದೆ ನಗರಗಳಲ್ಲಿ ಬದುಕು ಕಟ್ಟಿ ಕೊಂಡ ಕೆಲವು ಜನರು. ಏನೇ ಕಷ್ಟ ಬಂದರೂ ಅದೇ ನನ್ನೂರು ಅನ್ನೋ ಮತ್ತೊಂದಿಷ್ಟು ಮಂದಿ. ಇಂತಹ ಊರಿಗೆ ಕರಟಕ ದಮನಕದಂತಹ ಕುತಂತ್ರಿ ನರಿಗಳು ಎಂಟ್ರಿ ಕೊಟ್ಟಾಗ, ಆ ಊರಲ್ಲಿ ಏನಾಗುತ್ತೆ? ಅನ್ನೋದೇ ಈ ಸಿನಿಮಾದ ಕಥೆ.
ಬಿಡುಗಡೆ: ಕರಟಕ ದಮನಕ ಸಿನಿಮಾ ಮಾರ್ಚ್ 8ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.