»   »  'ಪ್ರೇಮ್ ಕಹಾನಿ' ಖಂಡಿತಗೆದ್ದೇ ಗೆಲ್ಲುತ್ತದೆ: ಚಂದ್ರು

'ಪ್ರೇಮ್ ಕಹಾನಿ' ಖಂಡಿತಗೆದ್ದೇ ಗೆಲ್ಲುತ್ತದೆ: ಚಂದ್ರು

Posted By:
Subscribe to Filmibeat Kannada

'ತಾಜ್ ಮಹಲ್' ಬಳಿಕ ಆರ್ ಚಂದ್ರು ತಮ್ಮ ಎರಡನೇ ಚಿತ್ರ 'ಪ್ರೇಮ್ ಕಹಾನಿ' ಗೆಲುವಿನ ಬಗ್ಗೆ ಅಪಾರ ವಿಶ್ವಾಸ ಇಟ್ಟುಕೊಂಡಿದ್ದಾರೆ. ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಚಂದ್ರು ಮಾತನಾಡುತ್ತಾ, ತಮ್ಮ 'ಪ್ರೇಮ್ ಕಹಾನಿ'ಚಿತ್ರ ಖಂಡಿತ 25 ವಾರಗಳಿಗೂ ಅಧಿಕ ದಿನ ಪ್ರದರ್ಶನ ಕಾಣಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು.

ಧ್ವನಿಸುರುಳಿ ಮತ್ತು ಸಿಡಿ ಬಿಡುಗಡೆ ಕಾರ್ಯಕ್ರಮಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಪೂಜಾಗಾಂಧಿ ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಚಿತ್ರದ ನಾಯಕ ನಟಿಯರಾದ ತೆಲುಗಿನ ಶೀಲಾ ಮತ್ತು ಅಜಯ್ ಸಹ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಪ್ರೇಮ್ ಕಹಾನಿ ಚಿತ್ರ ಇಳಯರಾಜ ಸಂಗೀತ, ಕೆ.ಎಂ.ಚಂದ್ರಶೇಖರ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ರವಿವರ್ಮ ಸಾಹಸವನ್ನು ಒಳಗೊಂಡಿದೆ. ಚಿತ್ರ ಸಾಹಿತಿ ಕೆ.ಕಲ್ಯಾಣ್, ವಿ.ನಾಗೇಂದ್ರ ಪ್ರಸಾದ್, ಕವಿರಾಜ್ ಅವರ ಸಾಹಿತ್ಯ ಪ್ರೇಮ್ ಕಹಾನಿ ಚಿತ್ರಕ್ಕಿದೆ. ರಂಗಯಾಣ ರಘು, ರಾಜೇಶ್, ಸುಧಾ ಬೆಳವಾಡಿ, ಲೋಕನಾಥ್, ಮೈಕೊ ನಾಗರಾಜ್, ಟೆನ್ನಿಸ್ ಕೃಷ್ಣ ಚಿತ್ರದ ಪಾತ್ರಧಾರಿಗಳು. ವಿಶೇಷ ಪಾತ್ರದಲ್ಲಿ ಮಹಾಲಕ್ಷ್ಮಿ ಬಡಾವಣೆ ಹಾಲಿ ಶಾಸಕ ನೆ.ಲ.ನರೇಂದ್ರ ಬಾಬು ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada