For Quick Alerts
  ALLOW NOTIFICATIONS  
  For Daily Alerts

  ಎಕ್ಸ್ ಫ್ಯಾಕ್ಟರ್ : ಗೀತ್ ಸಾಗರ್ ಕೊರಳಿಗೆ ಜಯಮಾಲೆ

  By Prasad
  |

  ಸೋನಿ ಚಾನಲ್ಲಿನಲ್ಲಿ ಬರುತ್ತಿದ್ದ ಯುವ ಗಾಯಕರಲ್ಲಿ ಪ್ರತಿಭೆಯನ್ನು ಅರಸುವ ಹಿಂದಿ ಸಂಗೀತ ಸ್ಪರ್ಧೆ 'ಎಕ್ಸ್ ಫ್ಯಾಕ್ಟರ್'ನಲ್ಲಿ 27 ವರ್ಷದ ಗೀತ್ ಸಾಗರ್ ಜಯಶಾಲಿಯಾಗಿದ್ದಾರೆ. ಈ ಗೆಲುವಿನೊಂದಿಗೆ 50 ಲಕ್ಷ ರು. ನಗದು, ಟಾಟಾ ಮಾಂಜಾ ಕಾರು ಮತ್ತು ನಿರ್ದೇಶಕ ಕರಣ್ ಜೋಹರ್ ಅವರ ಬ್ಯಾನರ್ ನಲ್ಲಿ ಹಾಡುವ ಅವಕಾಶ ಗಿಟ್ಟಿಸಿದ್ದಾರೆ.

  ಗೀತ್ ಸಾಗರ್ ಇದ್ದದ್ದು ತೀರ್ಪುಗಾರರಲ್ಲೊಬ್ಬರಾದ ಹಿನ್ನೆಲೆ ಗಾಯಕಿ ಶ್ರೇಯಾ ಘೋಷಾಲ್ ತಂಡದಲ್ಲಿ. ಇನ್ನಿಬ್ಬರು ತೀರ್ಪುಗಾರರಾದ ಸೋನು ನಿಗಂ ತಂಡದಿಂದ ಸೀಮಾ ಝಾ ಮತ್ತು ದೇವದಾಸ್ ಚಿತ್ರದ ಖ್ಯಾತಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ತಂಡದಿಂದ ಸಜದಾ ಸಹೋದರರಿಯರು ಫೈನಲ್ ತಲುಪಿದ್ದರು.

  ಲೆಮನ್ 91.1 ಎಫ್ಎಮ್ ಚಾನಲ್ಲಿನಲ್ಲಿ ರೇಡಿಯೋ ಜಾಕಿ ಆಗಿದ್ದ ಗೀತ್ ಸಾಗರ್ ಫೈನಲ್ ಅಂತರ ಬಲಿಷ್ಠ ಸ್ಪರ್ಧಾಳು ಆಗಿರಲಿಲ್ಲ. ಆದರೆ, ಶ್ರೋತೃಗಳ ಕೃಪಾಕಟಾಕ್ಷದಿಂದ ಜಯದ ಮಾಲೆಯನ್ನು ಧರಿಸಿದ್ದಾರೆ. ಅದ್ಭುತ ಕಂಠದ ಹುಡುಗಿ ಸೀಮಾ ಝಾ ನಿರಾಸೆ ಅನುಭವಿಸಿದ್ದು ಸೋನು ನಿಗಂ ಮುಖದಲ್ಲಿಯೂ ಎದ್ದು ಕಾಣುತ್ತಿತ್ತು.

  ಈ ರಿಯಾಲಿಟಿ ಶೋ ವಿವಾದಗಳಿಂದ ಹೊರತೇನೂ ಆಗಿರಲಿಲ್ಲ. ಸೋನು ನಿಗಂ ಮತ್ತು ಶ್ರೇಯಾ ಘೋಷಾಲ್, ಹಾಗು ಬನ್ಸಾಲಿ ಮತ್ತು ಶ್ರೇಯಾ ಘೋಷಾಲ್ ನಡುವೆ ಅನೇಕ ಬಾರಿ ಮಾತಿನ ಚಕಮಕಿಗಳು ಕೂಡ ನಡೆದಿದ್ದವು. ಒಂದು ಬಾರಿ ಬನ್ಸಾಲಿ ಶೋದಿಂದ ವಾಕೌಟ್ ಕೂಡ ಮಾಡಿದ್ದರು.

  ಗೀತ್ ಸಾಗರ್ ಗೆ ಬಾರಿಬಾರಿ ಋಣಾತ್ಮಕ ಕಾಮೆಂಟುಗಳು ಸೋನು ನಿಗಂರಿಂದ ಬಂದಿದ್ದರಿಂದ ಶ್ರೇಯಾ ಘೋಷಾಲ್ ತಮ್ಮ ಅಸಮಾಧಾನವನ್ನು ಕೂಡ ಬಹಿರಂಗವಾಗಿ ಹೇಳಿದ್ದರು. ಇಷ್ಟೆಲ್ಲ ಆದರೂ ಗೀತ್ ಸಾಗರ್ ಗೆದ್ದಿದ್ದಾರೆ. ಜೋ ಜೀತಾ ವಹೀ ಸಿಕಂದರ್!

  English summary
  Singer Geet Sagar of playback singer Shreya Ghoshal's team has won X Factor India reality show. Seema Zha from Sonu Nigam's team and Sajda sisters from Sanjay Leela Bhansali's team were other two in the final.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X