ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ..
1983ರಲ್ಲಿ ತೆರೆಕಂಡ 'ಚಕ್ರವ್ಯೂಹ' ಚಿತ್ರದ ಈ ಹಾಡು, ಪ್ರೇಕ್ಷಕರಿಗೆ ನೆನಪಾದಾಗಲೆಲ್ಲ ಚಳಿ ಚಳಿ ಚಳಿ. ಇನ್ನು ಈ ಡಿಸೆಂಬರ್ ಚಳಿಯಲ್ಲಿ ಹಾಡು ನೆನಪಾದಾಗ, ಚಳಿ ಜೊತೆಗೆ ಬಿಸಿಯೂ ಆಗುತ್ತದೆ. ಚಿ. ಉದಯಶಂಕರ್ ಸಾಹಿತ್ಯಕ್ಕೆ ಶಂಕರ್ ಮತ್ತು ಗಣೇಶ್ ಸಂಗೀತ ಸಂಯೋಜನೆ ಸೊಗಸಾಗಿದೆ. ಜಾನಕಿ ಮತ್ತು ಬಾಲಸುಬ್ರಹ್ಮಣ್ಯಂ ಗಾಯನಕ್ಕೆ ಅಂಬರೀಷ್ ಮತ್ತು ಅಂಬಿಕಾ ಜೀವತುಂಬಿದ ಬಗೆಯನ್ನು ತೆರೆ ಮೇಲೆಯೇ ನೋಡಬೇಕು.
ಅಂಬರೀಷ್ :
ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಗೆಳತಿಯ ಬಾರೆಯ ನೀ ಸನಿಹ, ಆಹಾ ಆಹಾ
ಒಲವಿನ ಕಥೆಯ ಹೇಳುವೆನು
ವಿರಹದ ವ್ಯಥೆಯ ನೀಡುವೆನು
ಚಳಿ ಚಳಿss
ಅಂಬಿಕಾ :
ಚಳಿ ಚಳಿ ತಾಳೆನು ಈ ಚಳಿಯ, ಆಹಾ ಓಹೋ
ಗೆಳಯನೆ ಬಾರೆಯ ನೀ ಸನಿಹ, ಓಹೋ ಆಹಾ
ನಡುಗುವ ಮೈಯ ನೋಡಿದೆಯ
ರಸಿಕನೆ ಜೀವ ತುಂಬುವೆಯ
ಚಳಿ ಚಳಿss
ಅಂಬರೀಷ್ :
ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಅಂಬಿಕಾ :
ಗೆಳಯನೆ ಬಾರೆಯ ನೀ ಸನಿಹ, ಆಹಾ ಓಹೋ
ಅಂಬರೀಷ್ :
ಏಕೆ ಹೀಗೆ ನಾಚುವೆ
ಏಕೆ ಎಲ್ಲೋ ನೋಡುವೆ
ಕಣ್ಣು ಕಣ್ಣು ಬೆರೆಸಿದರೆ
ನನ್ನ ತೋಳಲಿ ಬಳಸಿದರೆ ಚಳಿ ಚಳಿ
ಅಂಬಿಕಾ :
ನಯನದಿ ಮಿಂಚು ತುಂಬುವೆಯ
ಮುತ್ತಿನ ಮಳೆಯ ಸುರಿಸಿವೆಯ
ಚಳಿ ಚಳಿss
ಅಂಬರೀಷ್ :
ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಗೆಳತಿಯ ಬಾರೆಯ ನೀ ಸನಿಹ, ಆಹಾ ಆಹಾ
ಅಂಬಿಕಾ :
ನಡುಗುವ ಮೈಯ ನೋಡಿದೆಯ
ರಸಿಕನೆ ಜೀವ ತುಂಬುವೆಯ
ಚಳಿ ಚಳಿss
ಅಂಬಿಕಾ :
ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಅಂಬರೀಷ್ : ಗೆಳತಿಯ ಬಾರೆಯ ನೀ ಸನಿಹ, ಆಹಾ ಆಹಾ
ಅಂಬಿಕಾ :
ತನುವು ಹೂವಂತಾಗಿದೆ
ಮನವು ಎಲ್ಲೋ ತೇಲಿದೆ
ಪ್ರಣಯದ ಮತ್ತು ಏರುತಿದೆ
ತುಟಿಗಳು ತುಟಿಯ ಸೇರುತಿದೆ..
ಅಂಬರೀಷ್ :
ಸುಖದ ಚಿಲುಮೆ ಉಕ್ಕುತಿದೆ
ಇನ್ನೂ ಬೇಕು ಎನ್ನಿಸಿದೆ
ಚಳಿ ಚಳಿss
ಅಂಬಿಕಾ :
ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಗೆಳಯನೆ ಬಾರೆಯ ನೀ ಸನಿಹ, ಓಹೋ ಓಹೋ
ಅಂಬರೀಷ್ :
ಒಲವಿನ ಕಥೆಯ ಹೇಳುವೆನು
ವಿರಹದ ವ್ಯಥೆಯ ನೀಡುವೆನು
ಚಳಿ ಚಳಿss
ಅಂಬರೀಷ್ :
ಚಳಿ ಚಳಿ ತಾಳೆನು ಈ ಚಳಿಯ, ಆಹಾ ಆಹಾ
ಅಂಬಿಕಾ :
ಗೆಳಯನೆ ಬಾರೆಯ ನೀ ಸನಿಹ, ಓಹೋ ಆಹಾ


Click it and Unblock the Notifications











