For Quick Alerts
  ALLOW NOTIFICATIONS  
  For Daily Alerts

  2012: ಹರಿಕೃಷ್ಣ, ಗುರುಕಿರಣ್ ನಡುವೆ ತೀವ್ರ ಪೈಪೋಟಿ

  |
  ಹೊಸ ವರ್ಷ ಆರಂಭವಾಗಿದೆ. ಎಲ್ಲದರಂತೆ ಚಿತ್ರರಂಗದ ಕುರಿತು ಸಾಕಷ್ಟು ಅದರಲ್ಲೂ ಚಿತ್ರದ ಸಂಗೀತದ ಬಗ್ಗೆ ಯೋಚಿಸಿದರೆ 2012 ನಂಬರ್ ಒನ್ ಪಟ್ಟಕ್ಕಾಗಿ ಪ್ರಾರಂಭದಿಂದಲೇ ಪೈಪೋಟಿ ಏರ್ಪಟ್ಟಿದೆ. 2011ರ ಬೆಸ್ಟ್ ಸಂಗೀತ ನಿರ್ದೇಶಕ ಯಾರು ಅಂದರೆ ಅದಕ್ಕೆ ಎಲ್ಲರೂ ಕೊಡುವ ಉತ್ತರ ಒಂದೇ ಅದು ಹರಿಕೃಷ್ಣ.

  2011 ವರ್ಷಾರಂಭದಲ್ಲಿ ಹರಿಕೃಷ್ಣ ಮಾಡಿದ ಮ್ಯಾಜಿಕ್ , ವರ್ಷದ ಕೊನೆಯಲ್ಲಂತೂ ಪರಮಾತ್ಮ, ವಿಷ್ಣುವರ್ಧನ ಮುಖಾಂತರ ಎಲ್ಲರೂ ಬಾಯಲ್ಲೂ ಗುನುಗುವಂತಾಗಿತ್ತು. ಆದರೆ 2012ರ ಕಥೆಯೇ ಬೇರೆ. ಗುರುಕಿರಣ್ ಈ ಬಾರಿ ಹರಿಕೃಷ್ಣಗೆ ಪ್ರಬಲ ಪೈಪೋಟಿ ನೀಡಲಿದ್ದಾರೆ.

  ಈಗಾಗಲೇ ಗುರುಕಿರಣ್ ಸಂಗೀತ ನೀಡಿದ ವಿಲನ್ ಮತ್ತು ಆರಕ್ಷಕ ಚಿತ್ರಗಳ ಹಾಡುಗಳು ಮಾರುಕಟ್ಟೆಗೆ ಬಂದಿವೆ. ಶಿವ ಮತ್ತು ಲಕ್ಷ್ಮಿ ಚಿತ್ರದ ಹಾಡುಗಳು ಇನ್ನಷ್ಟೇ ಬರಬೇಕಿದೆ. ಹರಿಕೃಷ್ಣ ಸಂಗೀತ ನೀಡಿರುವ ಚಿಂಗಾರಿ ಈಗಾಗಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಡ್ರಾಮಾ, ಅಣ್ಣಾಬಾಂಡ್, ಜಾನೂ, ಜಾದು ಮುಂತಾದ ಚಿತ್ರಗಳ ಮೇಲೆ ಅಪಾರ ನಿರೀಕ್ಷೆಯಿದೆ.

  ಇವರಿಬ್ಬರ ಮಧ್ಯೆ ಜೈಹೋ ಖ್ಯಾತಿಯ ವಿಜಯ್ ಪ್ರಕಾಶ್ ಅಂದರ್ ಬಾಹರ್ ಆಟವಾಡಲಿದ್ದಾರೆ. ಇನ್ನು ಅರ್ಜುನ್ ಜನ್ಯ, ಜೆಸ್ಸಿ ಗಿಫ್ಟ್ ಮುಂತಾದವರು ಭರವಸೆ ಮೂಡಿಸಿದ್ದಾರೆ. ಹಾಗಾಗಿ 2012 ಕನ್ನಡಿಗರಿಗೆ ಮರೆಯಲಾಗದ ವರ್ಷವಾಗುವಷ್ಟು ಉತ್ತಮ ಸಂಗೀತ ಹೊರಹೊಮ್ಮಿದರೂ ಆಶ್ಚರ್ಯವಿಲ್ಲ.

  English summary
  2012 going to be year of fantastic Kannada movie music. Obviously, the fight for laurels will be between Harikrishna and Guru Kiran.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X