»   » ಮುರಳಿ ನೆನಪು: ಹೀರೋ ಹೀರೋ ನಾನೆ ನಾನೆ ನಾನೇ

ಮುರಳಿ ನೆನಪು: ಹೀರೋ ಹೀರೋ ನಾನೆ ನಾನೆ ನಾನೇ

Posted By:
Subscribe to Filmibeat Kannada
Actor Murali
ಸಿದ್ದಲಿಂಗಯ್ಯ ಅವರ ಪುತ್ರ ಮುರಳಿ(46) ಬುಧವಾರ ಮುಂಜಾನೆ ಅಸ್ತಂಗತರಾಗಿದ್ದಾರೆ. ಆದರೆ ಅವರು ನೆನಪು ಮಾತ್ರ ಸದಾ ಹಸಿರು. ಎಂಬತ್ತರ ದಶಕದಲ್ಲಿ ತೆರೆಕಂಡ 'ಅಜಯ್' ಚಿತ್ರದ ಈ ಹಾಡು ಕೇಳಿದರೆ ಇಂದಿಗೂ ಹುಡುಗಿಯರು ಪುಳಕಿತರಾಗುತ್ತಾರೆ. ಹುಡುಗರ ಉತ್ಸಾಹ ಇಮ್ಮಡಿಸುತ್ತದೆ. ಈ ಚಿತ್ರದ ನಾಯಕ ನಟ ಮುರಳಿ. ಅವರು ಹೀರೋ ಹೀರೋ ಹೀರೋ...ನಾನೆ ನಾನೆ ನಾನೆ...ಎಂದು ಹಾಡುತ್ತಿದ್ದರೆ ಕಾಲ ಹಿಂದಕ್ಕೆ ಸರಿಯುತ್ತದೆ.

ಇಳಯರಾಜಾ ಅವರ ಸಂಗೀತದಲ್ಲಿ ಮೂಡಿಬಂದ ಈ ಹಾಡನ್ನು ಜೇಸುದಾಸ್ ತುಂಬಿದ ಕಂಠದಲ್ಲಿ ಹಾಡಿದ್ದರು. ಸಾಹಿತ್ಯ ಶಾಮಸುಂದರ ಕುಲಕರ್ಣಿ. ಹಾಡು ಹಳೆಯದಾದರೂ ಹುಡುಗರ ಪಾಲಿಗೆ ಇದು ಇಂದಿಗೂ ಭಾವಗೀತೆ, ಪ್ರೇಮ ಗೀತೆ, ಭಕ್ತಿ ಗೀತೆ ಇದ್ದಂತೆ.


ಹೀರೋ ಹೀರೋ ಹೀರೋ ಹೀರೋ

ನಾನೆ ನಾನೆ ನಾನೆ ನಾನೇ…

ಚೆಲುವಿನ ನನ್ನ ಅರಗಿಣಿ

ಸೊಬಗಿನ ನನ್ನ ರಸಮಣಿ

ನಾನೇ ನಿನ್ನ ಪ್ರಿಯತಮ ನಮ್ಮ ಜೋಡಿ ಅನುಪಮಾ

ಕಳ್ಳನಾ ಮಾತನೆಂದು ಕೇಳಬೇಡವೆ, ಸುಳ್ಳನಾ ಸಂಗವನ್ನು ಮಾಡಬೇಡವೆ ||ಪ||

ಕರೆದಲ್ಲಿ ಬರುವೆನು ಜೊತೆಯಲ್ಲಿ ಇರುವೆನು

ಒಂಟಿಯಾಗಿ ಏಕೆ ಕೊರಗುವೆ

ನಿನ್ನನ್ನು ನೆಲದಲಿ ಓಡಾಡ ಬಿಡದೆಲೆ

ಹೆಗಲ ಮೇಲೆ ಹೊತ್ತು ತಿರುಗುವೆ

ಎಣ್ಣೆಯಾ ಒತ್ತುವೆ ಬೆನ್ನನು ತಿಕ್ಕುವೆ

ಜಡೆಯ ಹಾಕಿ ಹೂವ ಮುಡಿಸುವೆ

ಈ ನಿನ್ನ ಚೆಲುವಿನ ಮೈಯೆಲ್ಲ ಬಳಸಿದ

ಬಟ್ಟೆಯಾಗಿ ಸುತ್ತಿಕೊಳ್ಳುವೆ

ಕಸವ ಗುಡಿಸುವೆ ದಿನಾ ಮುಸುರೆ ತೊಳೆಯುವೆ

ಅಡುಗೆ ಮಾಡುವೆ ಕೈ ತುತ್ತು ಹಾಕುವೆ

ಸದಾ ನಿನ್ನ ಸೇವೆ ಮಾಡಿ ರಾಣಿಯಂತೆ ನೋಡಿಕೊಳ್ಳುವೇ ಹೇ… ||1||

ನನ್ನಂಥ ಚೆಲುವನು ನಿನಗೆಲ್ಲಿ ಸಿಗುವನು

ಮನಸು ಮಾಡು ಮದುವೆಯಾಗುವೆ

ಮನೆಯಲ್ಲಿ ಕಿಲಕಿಲ ನಗುವಂಥ ಮಗುವನು

ವರುಷದೊಳಗೆ ನಿನಗೆ ನೀಡುವೆ

ನೀ ನನ್ನ ಮಡದಿಯು ಆದಾಗ ಅನುದಿನ

ಭೂಮಿಯಲ್ಲೆ ಸ್ವರ್ಗ ಕಾಣುವೆ

ಹತ್ತಾರು ಮಕ್ಕಳ ಮಡಿಲಲ್ಲಿ ಹಾಕುತ

ನಿನ್ನ ಮಹಾತಾಯಿ ಮಾಡುವೆ

ಎರಡು ಮಕ್ಕಳ ನಡುವಿರಲಿ ಅಂತರ

ಮಿತಿಯು ನಮಗಿರೆ ಹಾಯ್ ಬದುಕು ಸುಂದರ

ಎಷ್ಟು ಮಕ್ಕಳ ಹೆತ್ರೂ ನೀನು ಸಾಕಿ ಸಲಹೊ ಧೈರ್ಯ ನನ್ನದೇಹೇ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada