»   » ಅ ಆ ಇ ಈ ಕನ್ನಡದ ಅಕ್ಷರಮಾಲೆ

ಅ ಆ ಇ ಈ ಕನ್ನಡದ ಅಕ್ಷರಮಾಲೆ

Posted By: Staff
Subscribe to Filmibeat Kannada
Song Lyrics from film 'Karulina Kare'
1970ರಲ್ಲಿ ತೆರೆಕಂಡ 'ಕರುಳಿನ ಕರೆ'ಚಿತ್ರಕ್ಕಾಗಿ ಈ ಹಾಡನ್ನು ಬರೆದವರು ಆರ್.ಎನ್.ಜಯಗೋಪಾಲ್. ಡಾ.ರಾಜ್ ಕುಮಾರ್ ಮತ್ತು ಕಲ್ಪನಾ ಅಭಿನಯದ ಈ ಚಿತ್ರದ ನಿರ್ದೇಶಕ ಪುಟ್ಟಣ್ಣ ಕಣಗಾಲ್. ಈ ಹಾಡು ಎಂ. ರಂಗರಾವ್ ಸಂಗೀತ ಸಂಯೋಜನೆಯಲ್ಲಿ, ಬಿ.ಕೆ.ಸುಮಿತ್ರ ಮತ್ತು ಸಂಗಡಿಗರ ಕಂಠಸಿರಿಯಲ್ಲಿ ಕನ್ನಡಿಗರ ಮನೆಮನಗಳ ಮುಟ್ಟಿದೆ. ವರ್ಣಮಾಲೆಯನ್ನು ಮಕ್ಕಳಿಗೆ ಪರಿಚಯಿಸುತ್ತಾ, ನೀತಿ ಪಾಠ ಹೇಳುವ ಈ ಹಾಡು ಎಲ್ಲರಿಗೂ ಗೊತ್ತಿರಲಿ. ಗೊತ್ತುಮಾಡಿಕೊಳ್ಳಲು ಮತ್ತೆಮತ್ತೆ ಓದಿಕೊಳ್ಳಿ.

ಅ ಆ..ಅ ಆ.. ಇ ಈ..ಇ ಈ..
ಅ ಆ ಇ ಈ ಕನ್ನಡದ ಅಕ್ಷರಮಾಲೆ
ಅ ಅ ಅಮ್ಮ ಎಂಬುದೆ ಕಂದನ ಕರುಳಿನ ಕರೆಯೋಲೆ ||ಅ ಆ||

ಆ ಆ (ಆಟ ಊಟ ಓಟ ಕನ್ನಡ ಒಂದನೆ ಪಾಠ)
ಕನ್ನಡ ಭಾಷೆಯ ಕಲಿತವಗೆ ಜೀವನವೇ ರಸದೂಟ 2||ಅ ಆ||

ಇ ಇ (ಇದ್ದವರೆಲ್ಲ ಇಲ್ಲದವರಿಗೆ ನೀಡಲೇ ಬೇಕು)
ಈ ಈ (ಈಶ್ವರನಲ್ಲಿ ಎಂದೂ ನಂಬಿಕೆ ಇಡಬೇಕು) 2||ಅ ಆ||

ಉ ಉ (ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ)
ಊ ಊ (ಊರಿಗೆ ದ್ರೋಹ ಮಾಡಿ ಬದುಕಲೆನಿಸಬೇಡ) 2||ಅ ಆ||

ಋ ೠ ಎ ಏ ಐ.. ಭಾರತ ಮಾತೆಗೆ ಜೈ !
ಒ ಒ (ಒಂದೇ ತಾಯಿ ಮಕ್ಕಳು ನಾವು ಒಂದುಗೂಡಬೇಕು)
ಓ ಓ (ಓದನು ಕಲಿತು ದೇಶದ ಸೇವೆಗೆ ನಿಲ್ಲಬೇಕು) 2||ಅ ಆ||

ಔ ಅಂ ಅಃ..ಔ ಅಂ ಅಃ..
ಅಃ.. ಆಹಾ.. ಆಹ ಹ ಹ ಹ

English summary
Song Lyrics from film 'Karulina Kare'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada