»   » ಸದನದಲಿ ಇದೇನಿದು…. ಫಿಲಮೊಂದು ನೋಡಿದೆ

ಸದನದಲಿ ಇದೇನಿದು…. ಫಿಲಮೊಂದು ನೋಡಿದೆ

Posted By: * ವಿಜಯರಾಜ್ ಕನ್ನಂತ
Subscribe to Filmibeat Kannada
BJP Ministers Dirty Picture
ದೇವತಾ ಮನುಷ್ಯ ಚಿತ್ರದ ಹೃದಯದಲಿ ಇದೇನಿದು ಹಾಡಿನ ಸ್ಟೈಲಲ್ಲಿ ಮಾಜಿಗಳಾಗಿರೋ ಸೆಕ್ಸ್ ಕ್ರೇಜಿ ಮಂತ್ರಿಗಳ ಬಾಯಲ್ಲಿ ಹಾಡಿನ ಸಾಹಿತ್ಯ ಹಿಂಗ್ ಬಂದ್ರೆ ಹೆಂಗೇ ಅಂತ :-)

ಫಾರ್ ಅ ಚೇಂಜ್ ಈ ಅಣಕು ಗೀತೆ ಯುಗಳ ಗೀತೆಯಾಗಿದ್ದು ಇನ್ನೊಬ್ರು ಮಾಜಿಗೆ ರೋಲ್ ಸಿಕ್ಲಿಲ್ಲ :-) ಓವರ್ ಟು…ಮಾಜೀಸ್…

ಸದನದಲಿ ಇದೇನಿದು…. ಫಿಲಮೊಂದು ನೋಡಿದೆ
ಸದನದಲಿ ಇದೇನಿದು…. ಫಿಲಮೊಂದು ನೋಡಿದೆ
ಕದ್ದು ನೋಡಿದ್ದು ಕ್ಯಾಮರವ ಸೇರಿ…. ನಮ್ಮ ಮಂತ್ರಿ ಕುರ್ಚಿ ಉರುಳಿ
ಜೊತೆಯಲ್ಲಿ ಶೋಕ ಗೀತೆ… ಹಾಡುವಾಸೆ… ಈಗಾ….

ಸದನದಲಿ ಇದೇನಿದು…. ಫಿಲಮೊಂದು ನೋಡಿದೆ
ಸದನದಲಿ ಇದೇನಿದು…. ಫಿಲಮೊಂದು ನೋಡಿದೆ
ಕದ್ದು ನೋಡಿದ್ದು ಕ್ಯಾಮರವ ಸೇರಿ…. ನಮ್ಮ ಮಂತ್ರಿ ಕುರ್ಚಿ ಉರುಳಿ
ಜೊತೆಯಲ್ಲಿ ಶೋಕ ಗೀತೆ… ಹಾಡುವಾಸೆ… ಈಗಾ….

ಸದನದಲಿ ಇದೇನಿದು…. ಫಿಲಮೊಂದು ನೋಡಿದೆ

ಗುರ್ರೆನ್ನುತಾ… ಬಯ್ಯುವ… ಟಿ.ವಿ.ಯ… ಧಾಳಿಗೆ
ಥೂಎನ್ನುವ… ಮಂದಿಯ… ಮಾತಿನ… ರೇಜಿಗೆ
ಈ ಮನಸು… ಬೆದರುತಿದೆ… ಕೆಟ್ಟಕನಸು…. ಕೆಣಕುತಿದೆ
ಮಾಡುವುದೇನೀಗಾ………

ಸದನದಲಿ ಇದೇನಿದು…. ಫಿಲಮೊಂದು ನೋಡಿದೆ

ಭುಸ್ಸೆನ್ನುವ… ತಾವರೆ… ಪಾರ್ಟಿಯ… ಲೀಡ್ರಿಗೆ
ಕ್ಯಾಕರಸುತಾ… ಕ್ಷೇತ್ರದಲಿ… ಉಗಿಯುವಾ… ವೋಟರಿಗೆ
ಮಂಡೆ ಬಿಸಿಯು… ಏರುತಿದೆ… ಈ ಹೇಸಿಗೆ… ನಾರುತಿದೆ
ತಂದೆಯೆ ಸದಾನಂದಾ………

English summary
Karnataka BJP Ministers Dirty Picture watching in assembly has become talk of town. Devatha Manushya movie's Hrudayadalli idenedu song lyrics remix version as Political satire by Vijayaraj Kannantha.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X