»   »  ಜುಗಾರಿ ಧ್ವನಿಸುರುಳಿ ಮಾರುಕಟ್ಟೆಗೆ

ಜುಗಾರಿ ಧ್ವನಿಸುರುಳಿ ಮಾರುಕಟ್ಟೆಗೆ

Subscribe to Filmibeat Kannada

'ಜುಗಾರಿ' ಚಿತ್ರದ ಧ್ವನಿಸುರುಳಿ ಬಿಡುಗಡೆ ಜತೆಗೆ ಹಿರಿಯ ಕಲಾವಿದರಾದ ಶನಿ ಮಹದೇವಪ್ಪ, ಅಕ್ಕಿ ಚನ್ನಬಸಪ್ಪ, ರತ್ನಾಕರ, ಬೆಂಗಳೂರು ನಾಗೇಶ್ ಹಾಗೂ ರೇಣುಕಾ ಪ್ರಸಾದ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 'ಜುಗಾರಿ' ಚಿತ್ರ ನಿರ್ಮಾಪಕ ರಮೇಶ್ ಮತ್ತು ಚಿತ್ರತಂಡ ವತಿಯಿಂದ ಕಲಾವಿದರಿಗೆ ರು.10,000 ಗೌರವ ಧನ ನೀಡಲಾಯಿತು.

ಪುಟ್ಟಣ್ಣ ಕಣಗಾಲ್ ಅವರ ಪತ್ನಿ ನಾಗಲಕ್ಷ್ಮಿ ಮತ್ತು ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವರ ಪತ್ನಿ ಶಾರದಮ್ಮ ಅವರು ಹಿರಿಯ ಕಲಾವಿದರನ್ನು ಸನ್ಮಾನಿಸಿದರು. ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಚಿತ್ರಗಳು ಬರುತ್ತಿಲ್ಲ. ಸದಭಿರುಚಿಯ ಚಿತ್ರಗಳು ಬರುವಂತಾಗಲಿ. ಒಳ್ಳೆ ಹೆಸರು ತನ್ನಿ ಎಂದು 'ಜುಗಾರಿ' ಚಿತ್ರತಂಡವನ್ನು ನಾಗಲಕ್ಷ್ಮಿ ಪುಟ್ಟಣ್ಣ ಕಣಗಾಲ್ ಹಾರೈಸಿದರು.

ಅರ್ಜುನ್ ಸಂಗೀತ ಸಂಯೋಜನೆಯ 'ಜುಗಾರಿ'ಧ್ವನಿಸುರುಳಿಯನ್ನು ಟೈಮ್ಸ್ ಮ್ಯೂಸಿಕ್ ಹೊರತಂದಿದೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಧ್ವನಿಸುರುಳಿ ಬಿಡುಗಡೆ ಸಮಾರಂಭವನ್ನು ಸುಧಾ ನರಸಿಂಹರಾಜು ಆಯೋಜಿಸಿದ್ದರು. ಅವಿನಾಶ್ ದಿವಾಕರ್, ಗಿರಿಜಾ ಲೋಕೇಶ್, ಹರ್ಷಿಕಾ ಪೂಣಚ್ಚ್ಚ, ನಿರ್ದೇಶಕ ಅರವಿಂದ್ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada