»   » ಆಡಿಸಿ ನೋಡು ಬೀಳಿಸಿ ನೋಡು ಮರೆತು ಹೋಗದು

ಆಡಿಸಿ ನೋಡು ಬೀಳಿಸಿ ನೋಡು ಮರೆತು ಹೋಗದು

Posted By:
Subscribe to Filmibeat Kannada
PB Srinivas
ಕನ್ನಡ ಚಿತ್ರಗಳ ಹೆಸರಾಂತ ಹಿನ್ನೆಲೆ ಗಾಯಕ ಪಿ ಬಿ ಶ್ರೀನಿವಾಸ್ ಹಾಡಿದ ಸುಮಧುರ ಗೀತೆಗಳನ್ನು ಮರೆಯಲು ಸಾಧ್ಯವೇ? ಆ ಮಧುರ ಗೀತೆಗಳನ್ನು ಮತ್ತೊಮ್ಮೆ ಕೇಳಬೇಕೆ? ಹಾಗಿದ್ದರೆ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ ಸಭಾಂಗಣಕ್ಕೆ ಬನ್ನಿ.

ನವೆಂಬರ್ 13ರಂದು ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪಿ ಬಿ ಶ್ರೀನಿವಾಸ್ ಅವರ ಸುಮಧುರ ಚಿತ್ರಗೀತೆಗಳ ಗಾನಸೌರಭ ಕಾರ್ಯಕ್ರಮವನ್ನು ಸೌರಭ ಸಂಸ್ಥೆ ಹಮ್ಮಿಕೊಂಡಿದೆ. ಅಂದು ಸಂಜೆ 3.30ಕ್ಕೆ ಕಾರ್ಯಕ್ರಮ ನಡೆಯಲಿದೆ.

"ಆಡಿಸಿ ನೋಡು ಬೀಳಿಸಿ ನೋಡು ಮರೆತು ಹೋಗದು" ಎಂಬ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಪಿಬಿ ಶ್ರೀನಿವಾಸ್ ಅವರ ಆಯ್ದ ಜನಪ್ರಿಯ ಚಿತ್ರಗೀತೆಗಳನ್ನು ಗಾಯಕರಾದ ಎಲ್ ಎನ್ ಶಾಸ್ತ್ರಿ, ಹೇಮಂತ್, ಅನುರಾಧ ಭಟ್, ಪಲ್ಲವಿ ಹಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಪಿಬಿಎಸ್ ಅವರನ್ನು ಸನ್ಮಾನಿಸಲಾಗುತ್ತದೆ.

ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಹಿರಿಯ ಸಿನಿಮಾ ತಾರೆಗಳಾದ ಲೀಲಾವತಿ, ಜಯಂತಿ, ಭಾರತಿ ವಿಷ್ಣುವರ್ಧನ್, ದ್ವಾರಕೀಶ್, ರಾಜೇಶ್, ಸುದರ್ಶನ್, ಲೋಕನಾಥ್, ಶ್ರೀನಿವಾಸಮೂರ್ತಿ ಹಾಗೂ ನಿರ್ದೇಶಕರಾದ ಗೀತಪ್ರಿಯ, ಕೆಎಸ್ಎಲ್ ಸ್ವಾಮಿ, ಶಿವಶಂಕರ್, ಗೀತರಚನೆಕಾರ ವ್ಯಾಸರಾವ್ ಮುಂತಾದವರು ಆಗಮಿಸಲಿದ್ದಾರೆ. (ಒನ್‌ಇಂಡಿಯಾ ಕನ್ನಡ)

English summary
Noted Playback singer PB Srinivas's music event "Aadisi Nodu Beelisi Nodu Maretu Hogadu" to be Organized by Sourabha trust. The event will be held at Jnana Jyothi Auditorium, Central College, Bangalore on November 13th.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada