ಅರಳಿದೆ ಅರಳಿದೆ ಮುದುಡಿದ ತಾವರೆ ಅರಳಿದೆ

ಅರಳಿದೇ ಅರಳಿದೇ ಮುದುಡಿದ ತಾವರೆ ಅರಳಿದೇ
ಬಯಸಿದೇ ಬಯಸಿದೇ ಪ್ರಿಯತಮನಾಸರೆ ಬಯಸಿದೇ
ಹರೆಯದ ಕರೆ ಸರಿದಿದೆ ತೆರೇ
ಕೇಳದೆ ಈ ಮೊರೆ ಬಾಳಿನಾ ದೊರೇ...ಅರಳಿದೇ...
ಶಮರಿಯ ಮುಕುತಿಗೇ ಜಾನಕಿರಾಮನು ನೀನಾದೇ
ಕಮರಿದೆ ಬದುಕಿಗೆ ಆಸೆಯ ಚಿಲುಮೆಯು ನೀನಾದೇ
ಮಿಡಿದಿದೆ ಮನ ರಸಮಯ ಕ್ಷಣ
ಪ್ರೀತಿಗೆ ಸೇವೆಗೆ ಬಾಗಿದೆ ಚರಣಕೆ
ಜೀವಾ ಭಾವ ನಿನದೇ..ಆ...ಅರಳಿದೇ...
ಚೆಲುವಿನ ಬೆಡಗಿನ ಒಲವನು ಚೆಲ್ಲಿದೆ ಮಧುವನಾ
ಚಂದ್ರನ ಯೌವನ ಬೆರೆತರೆ ಜೀವನ ಪಾವನಾ
ಪಪಮಗ ಮಪ ನಿನಿಪಮ ಪನಿ
ನೀ ಪಮ ಸಾನಿಪ ಗಾರಿನಿಸಾ
ಸೂರ್ಯನ ಉದಯಕೆ ಚಂದಿರನಾಸರೆ
ಬಾರಾ ಬಾರಾ ಬಳಿಗೇ..ಆ...ಅರಳಿದೇ...
More from Filmibeat
English summary
Here is the romantic lyrics by Doddarange Gowda in the film Mududida Tavare Aralithu. S Janaki voice cheers the audience. Music by M.Ranga Rao, his music was very melodious with a classical touch. Enjoy the song.
ಅನಂತನಾಗ್ ಎಸ್ ಜಾನಕಿ ಬಿಜೆಪಿ ದೊಡ್ಡರಂಗೇಗೌಡ ಸಾಹಿತ್ಯ ಸಂಗೀತ ಕಮಲ ಲಕ್ಷ್ಮಿ anant nag s janaki doddarange gowda lyrics music bjp


Click it and Unblock the Notifications











