»   » ವಾಯ್ಸ್ ಆಫ್ ಬೆಂಗಳೂರ್ ನಲ್ಲಿ ಶಿವರಾಜ್ ಕುಮಾರ್

ವಾಯ್ಸ್ ಆಫ್ ಬೆಂಗಳೂರ್ ನಲ್ಲಿ ಶಿವರಾಜ್ ಕುಮಾರ್

Posted By:
Subscribe to Filmibeat Kannada
ಕೊನೆಗೂ ಜನರು ಕಾತರದಿಂದ ಕಾಯುತ್ತಿದ್ದ 'ವಾಯ್ಸ್' ಆಫ್ ಬೆಂಗಳೂರು' ಸೀಜನ್ 5 ರ ಫೈನಲ್ ಕಾರ್ಯಕ್ರಮ ಮುಗಿದಿದೆ. ಬೆಂಗಳೂರು ಯುನಿಲಿವರ್ ಉದ್ಯೋಗಿ ಒಡಿಶಾ ಮೂಲದ 'ಪ್ರಗ್ಯಾ ಪಾತ್ರಾ' ಹಾಗೂ ಮಂಗಳೂರಿನ ದಂತವೈದ್ಯ 'ಡಾ. ನಿತಿನ್ ಆಚಾರ್ಯ' ಬೆಂಗಳೂರು ಧ್ವನಿಗಳಾಗಿ ಹೊರಹೊಮ್ಮಿದ್ದಾರೆ.
ಬಹುಮಾನದ ರೂಪದಲ್ಲಿ ಒಂದೊಂದು 'ಮಾರುತಿ ಎ ಸ್ಟಾರ್' ಕಾರು ತಮ್ಮದಾಗಿಸಿಕೊಂಡಿದ್ದಾರೆ.

ಗರುಡಾ ಮಾಲ್ ಆಯೋಜಿಸಿದ್ದ ಈ ಕಾರ್ಯಕ್ರಮದ ಅಂತಿಮ ಹಂತದ ನಿರ್ಣಾಯಕರಾಗಿ ಚಲನಚಿತ್ರರಂಗದ ದಿಗ್ಗಜರಾದ ನಟ ಶಿವರಾಜ್ ಕುಮಾರ್, ಹಂಸಲೇಖ, ಬಾಲಿವುಡ್ ಅನು ಮಲ್ಲಿಕ್ ಆಗಮನ ಪ್ರಮುಖ ಆಕರ್ಷಣೆಯಾಗಿತ್ತು. ನಟ ಶಿವರಾಜ್ ಕುಮಾರ್ ವೇದಿಕೆ ಏರಿ ಹಾಡಿಗೆ ಹೆಜ್ಜೆ ಹಾಕುವ ಮೂಲಕ ತಾರಾಮೆರಗು ಕೊಟ್ಟರು. ಜೊತೆಯಲ್ಲಿ ಖ್ಯಾತ ಗಾಯಕ ರಾಜೇಶ್ ಕೃಷ್ಣನ್ ಸಾಥ್ ನೀಡಿದರು.


ಶ್ರೀರಕ್ಷಾ, ಸುಚಿತ್ರಾ, ಮಧು ಕಶ್ಯಪ್ ಹಾಗೂ ಕೃಷ್ಣ ರನ್ನರ್ ಅಪ್ ಗೌರವಕ್ಕೆ ಪಾತ್ರರಾದರು. ಒಡಿಶಾದಿಂದ ಸ್ಪರ್ಧೆಗೆ ಬಂದು ಕೊನೆ ಹಂತದವರೆಗೂ ಸ್ಪರ್ಧೆ ಪ್ರಬಲ ಸ್ಪರ್ಧೆಗೆ ಒಡ್ಡಿಕೊಂಡು ಬೆಂಗಳೂರು ಧ್ವನಿಯಾಗಿ ಹೊರಹೊಮ್ಮಿದ ಪ್ರಗ್ಯಾ ಪಾತ್ರಾ ಕಂಠಕ್ಕೆ ಜನರು ಮಾರು ಹೋದರು. ಕನ್ನಡ ಬಾರದಿದ್ರೂ ಅವರ ಸ್ಪಷ್ಟ ಉಚ್ಚಾರಣೆ ಗಮನಸೆಳೆಯುವಂತಿತ್ತು. ಪ್ರಥಮ ಸುತ್ತಿನಲ್ಲಿ ಅವರು ಹಾಡಿದ 'ಕೇಳಿಸದೆ ಕಲ್ಲುಕಲ್ಲಿನಲಿ' ಎಲ್ಲರೂ ಕೇಳಲೇಬೇಕಾಂದಂತಿತ್ತು.

ಇನ್ನು ಕನ್ನಡದ ಹುಡುಗ ಡಾ. ನಿತಿನ್ ಆಚಾರ್ಯ ಅವರ ವಿಶಿಷ್ಠ ಕಂಚಿನ ಕಂಠ ಇತರರಿಗಿಂತ ತೀರಾ ಭಿನ್ನವಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಅವರ 'ಕಣ್ ಕಣ್ಣ ಸಲಿಗೆ' ಹಾಡಿಗೆ ಪ್ರೇಕ್ಷಕರು ಕಣ್ ಕಣ್ ಬಿಟ್ಟು ತಮ್ಮನೇ ತಾವು ಮರೆತು ತಲೆದೂಗಿದರು. ಒಟ್ಟಿನಲ್ಲಿ ಎಲ್ಲರೂ ಬಹಳ ಕುತೂಹಲದಿಂದ ಕಾಯುತ್ತಿದ್ದ ಸೀಜನ್ 5 ರ ಫೈನಲ್ಸ್ ಮುಗಿದು ಕಾರ್ಯಕ್ರಮಕ್ಕೆ ತೆರೆಬಿದ್ದಿದೆ, ಇದೀಗ ಪ್ರಗ್ಯಾ ಮತ್ತು ನಿತಿನ್ ಹೆಸರು ಎಲ್ಲರ ಬಾಯಲ್ಲಿ ಹರಿದಾಡುತ್ತಾ ಮನೆಮಾತಾಗುತ್ತಿದೆ.

ಕಂಗ್ರಾಜ್ಯಲೇಶನ್ಸ್ ಡಾ. ನಿತಿನ್ ಆಚಾರ್ಯ ಹಾಗೂ ಪ್ರಗ್ಯಾ ಪಾತ್ರಾ... (ಒನ್ ಇಂಡಿಯಾ ಕನ್ನಡ)

English summary
Voice of Bangalore Season 5 final programme result announced in Bangalore Garuda Mall. Dr. Nithin Acharya and Pragya Patra are the winners. 
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada