»   » ತಿಂಗಳಾಂತ್ಯದಲ್ಲಿ 'ಪರಮಾತ್ಮ' ಆಡಿಯೋ ರಿಲೀಸ್

ತಿಂಗಳಾಂತ್ಯದಲ್ಲಿ 'ಪರಮಾತ್ಮ' ಆಡಿಯೋ ರಿಲೀಸ್

Posted By: * ಬಾಲರಾಜ್ ತಂತ್ರಿ
Subscribe to Filmibeat Kannada

ಸದ್ಯ ಕನ್ನಡ ಚಿತ್ರರಂಗದಲ್ಲಿ ಭಾರೀ ಸುದ್ದಿಯಲ್ಲಿರುವ ಚಿತ್ರಗಳೆಂದರೆ ಜೋಗಯ್ಯ ಮತ್ತು ಪರಮಾತ್ಮ. ಸಹೋದರರ ಈ ಎರಡು ಚಿತ್ರಗಳು ಸದಾ ಒಂದಲ್ಲೊಂದು ವಿಷಯದಲ್ಲಿ ಸುದ್ದಿಯಲ್ಲಿರುತ್ತದೆ. ಜೋಗಯ್ಯ ಚಿತ್ರ ಈ ವಾರ ಬಿಡುಗಡೆಯಾಗುತ್ತಿದ್ದರೆ ಪರಮಾತ್ಮ ಚಿತ್ರದ ಧ್ವನಿಸುರುಳಿ ಬಿಡುಗಡೆ ಕೂಡ ಇದೇ ತಿಂಗಳು ನಡೆಯಲಿದೆ.

ಸದ್ಯದ ಕನ್ನಡದ ಬಾಕ್ಸ್ ಆಫೀಸ್ ಕಿಂಗ್ ಪುನೀತ್ ರಾಜಕುಮಾರ್ ಮುಖ್ಯ ಭೂಮಿಕೆಯಲ್ಲಿರುವ ಪರಮಾತ್ಮ ಚಿತ್ರದ ಕ್ಯಾಸೆಟ್ ಮಾಸಾಂತ್ಯಕ್ಕೆ ಅಥವಾ ಗೌರಿ ತೃತೀಯದಂದು (ಆ 31) ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.

ಸ್ವಾತಂತ್ರ್ಯದಿನದಂದೆ ಕ್ಯಾಸೆಟ್ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದ್ದರೂ ಕೊನೆ ಗಳಿಗೆಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಟ್ಯೂನ್ ಮತ್ತು ಸಾಹಿತ್ಯದಲ್ಲಿ ಸ್ವಲ್ಪ ಬದಲಾವಣೆ ಮಾಡಿದ್ದರಿಂದ ಬಿಡುಗಡೆ ದಿನಾಂಕ ಮುಂದೂಡ ಬೇಕಾಯಿತೆಂದು ಚಿತ್ರದ ನಿರ್ಮಾಪಕರೊಲ್ಲಬ್ಬರಾದ ಜಯಣ್ಣ ಹೇಳಿಕೆ ನೀಡಿದ್ದಾರೆ.

ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ದೀಪಾ ಸನ್ನಿಧಿ, ಐಂದ್ರಿತಾ ರಾಯ್, ರಮ್ಯಾ ಬಾರ್ನೆ ಇದ್ದರೆ, ಪೋಷಕ ನಟರಾಗಿ ಅವಿನಾಶ್ ಮತ್ತು ರಂಗಾಯಣ ರಘು ಕೂಡ ಇದ್ದಾರೆ. ಹರಿಕೃಷ್ಣ ಸಂಗೀತ ನೀಡಿರುವ ಈ ಚಿತ್ರಕ್ಕೆ ಸಂತೋಷ್ ರೈ ಪಾತಾಜೆ ಅವರು ಕ್ಯಾಮೆರ ಹಿಡಿದಿದ್ದಾರೆ.

ಸೆಪ್ಟಂಬರ್ ಅಥವಾ ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಚಿತ್ರಕ್ಕೆ ಎರಡು ಹಾಡಿನ ಚಿತ್ರೀಕರಣ ನಡೆಯ ಬೇಕಾಗಿದ್ದು ನೃತ್ಯಗಾರರ ಮುಷ್ಕರದಿಂದಾಗಿ ಶೂಟಿಂಗ್ ಸಾಧ್ಯವಾಗುತ್ತಿಲ್ಲ ಎಂದು ಜಯಣ್ಣ ನಮ್ಮ ಚಿತ್ರತಂಡಕ್ಕೆ ತಿಳಿಸಿದ್ದಾರೆ.

English summary
PowerStar Puneeth Rajkumar starrer Paramathma kannada movie audio likely to be relessed by August month end. Director Yogaraj Bhat has made some changes in lyrics which caused delay in much awaited audio launch

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada