»   » ರಿಮಿಕ್ಸ್ ನಲ್ಲಿ ನೂರು ಜನ್ಮಕು ಸೂಪರ್ ಹಿಟ್ ಹಾಡು

ರಿಮಿಕ್ಸ್ ನಲ್ಲಿ ನೂರು ಜನ್ಮಕು ಸೂಪರ್ ಹಿಟ್ ಹಾಡು

Posted By:
Subscribe to Filmibeat Kannada

'ಅಮೆರಿಕ ಅಮರಿಕ' ಚಿತ್ರದ ನೂರು ಜನ್ಮಕು ನೂರಾರು ಜನ್ಮಕು...ಹಾಡನ್ನು ಮತ್ತೆ ರಿಮಿಕ್ಸ್ ನಲ್ಲಿ ಕೇಳಿಸಲಿದ್ದಾರೆ ನಾಗತಿಹಳ್ಳಿ ಚಂದ್ರಶೇಖರ್. ಸಂತೋಷ್ ಮತ್ತು ಐಂದ್ರಿತಾ ರೇ ಮುಖ್ಯಪಾತ್ರದಲ್ಲಿರುವ 'ನೂರು ಜನ್ಮಕು' ಚಿತ್ರಕ್ಕಾಗಿ ಈ ಹೊಸ ಪ್ರಯೋಗವನ್ನು ನಾಗತಿಹಳ್ಳಿ ಮಾಡಿದ್ದಾರೆ.

ಈ ಹಾಡಿನ ಚಿತ್ರೀಕರಣದ ವೇಳೆ ಅಧೈರ್ಯ ಕಾಡುತ್ತಿತ್ತು.ಚಿತ್ರೀಕರಣಕ್ಕೂ ಮುನ್ನ ರಮೇಶ್ ಅರವಿಂದ್ ಅವರಿಗೆ ಫೋನಾಯಿಸಿ ವಿಷಯ ತಿಳಿಸಿದೆ. ಭಯಬೀಳುವಂತಹದ್ದು ಏನು ಇಲ್ಲ, ರಿಮಿಕ್ಸ್ ಹಾಡನ್ನು ಎಂಜಾಮ್ ಮಾಡು ಎಂದು ಧೈರ್ಯ ತುಂಬಿದ್ದಾಗಿ ಸಂತೋಷ್ ತಿಳಿಸಿದ್ದಾರೆ.

ಹರ್ಷ ನೃತ್ಯ ನಿರ್ದೇಶನ ಮಾಡಿದ್ದ ಆ ಹಾಡನ್ನು ಮಕಾವು ಪ್ರಾಂತ್ಯದಲ್ಲಿ ಚಿತ್ರೀಕರಿಸಲಾಗಿತ್ತು. ನಾಗತಿಹಳ್ಳಿ ಚಂದ್ರಶೇಖರ್ ಸಾಹಿತ್ಯಕ್ಕೆ ಮನೋಮೂರ್ತಿ ಸಂಗೀತ ಸಂಯೋಜಿಸಿದ್ದರು. ಸದ್ಯಕ್ಕೆ ಐಂದ್ರಿತಾ ರೇ ಸುದೀಪ್ ಜೊತೆ 'ವೀರಪರಂಪರೆ' ಚಿತ್ರೀಕರಣಕ್ಕಾಗಿ ಹುಬ್ಬಳ್ಳಿಯಲ್ಲಿದ್ದಾರೆ.

'ನೂರು ಜನ್ಮಕು' ಚಿತ್ರದಲ್ಲಿನ ಎಲ್ಲಾ ಹಾಡುಗಳು ಸುಶ್ರಾವ್ಯವಾಗಿ ಮೂಡಿಬಂದಿವೆ. ಅದರಲ್ಲೂ ಮುಖ್ಯವಾಗಿ ನೂರು ಜನ್ಮಕು ನೂರಾರು ಜನ್ಮಕು ಹಾಡಂತೂ ಸೂಪರ್ ಹಿಟ್ ಆಗಲಿದೆ ಎಂಬ ವಿಶ್ವಾಸವನ್ನು ಸಂತೋಷ್ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರ ವಚನವೊಂದನ್ನು ಚಿತ್ರದಲ್ಲಿ ಹಾಡಾಗಿಸಲಾಗಿದೆ ಎಂಬ ವಿವರವನ್ನು ಸಂತೋಷ್ ನೀಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada