For Quick Alerts
  ALLOW NOTIFICATIONS  
  For Daily Alerts

  ಪಪ್ಪಿ ಜೊತೆ ರಾಧಿಕಾ 'ಲಕ್ಕಿ' ಆಡಿಯೋ ಬಿಡುಗಡೆ

  By Rajendra
  |

  ರಾಧಿಕಾ ಕುಮಾರಸ್ವಾಮಿ ನಿರ್ಮಿಸುತ್ತಿರುವ ಚೊಚ್ಚಲ ಚಿತ್ರ 'ಲಕ್ಕಿ' ಆಡಿಯೋ ಬಿಡುಗಡೆಯಾಗಿದೆ. ಬಹಳ ಸುದೀರ್ಘ ಸಮಯದ ಬಳಿಕ ರಾಧಿಕಾ ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಬರುವ ಮೂಲಕ ಎಲ್ಲರ ಗಮನ ಸೆಳೆದರು. ಈ ಸಂದರ್ಭದಲ್ಲಿ ಅವರ ಮಗಳು ಶಮಿಕಾ ಕೆ ಸ್ವಾಮಿ ಇದ್ದದ್ದು ವಿಶೇಷ ಆಕರ್ಷಣೆ.

  ಈ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ಒಳ್ಳೆಯ ಕತೆ ಸಿಕ್ಕರೆ ಮತ್ತೆ ಬಣ್ಣ ಹಚ್ಚುವುದಾಗಿ ಅವರು ಹೇಳಿದರು. ನಿರ್ಮಾಪಕಿಯಾಗಿ 'ಲಕ್ಕಿ' ಚಿತ್ರ ತಮಗೆ ಒಳ್ಳೆಯ ಅನುಭವ ನೀಡಿದೆ. ಚಿತ್ರೀಕರಣ ವೇಳೆ ಎಲ್ಲರೂ ತಮಗೆ ಸಹಕರಿಸಿದರು. ಲಕ್ಕಿ ಚಿತ್ರದ ಪಾತ್ರಕ್ಕೆ ರಮ್ಯಾ ಅವರೇ ಸೂಕ್ತ ಎನ್ನಿಸಿದ ಕಾರಣ ಅವರನ್ನೇ ಆಯ್ಕೆ ಮಾಡಿಕೊಂಡೆ ಎಂದರು.

  ಚಿತ್ರದಲ್ಲಿ ಪಗ್ ಪಪ್ಪಿಯನ್ನು ಬಳಸಿಕೊಳ್ಳಲಾಗಿದೆಯಂತೆ. ಸಿನಿಮಾದಲ್ಲಿ ಅದರ ಹೆಸರು ಜೂ ಜೂ. ಹಾಗಾಗಿ ಪಪ್ಪಿಯ ಆಟಿಕೆಯನ್ನೂ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಇಡಲಾಗಿತ್ತು. ಲಕ್ಕಿ ಚಿತ್ರದಲ್ಲಿ ಪಗ್ ನಾಯಿ ಪ್ರಮುಖ ಪಾತ್ರ ನಿರ್ವಹಿಸಿದೆಯಂತೆ.

  ರಮ್ಯಾ ಆತ್ಮಕತೆಯ ಒಂದು ಭಾಗವಾಗಿ 'ಲಕ್ಕಿ' ಚಿತ್ರ ತೆರೆಗೆ ತರಲಾಗಿದೆ. ಗೀತ ಸಾಹಿತಿ ಗೌಸ್ ಪೀಸ್ ಪಗ್ ಮೇಲೆ ಬರೆದಿರುವ ಹಾಡು ಅದ್ಭುತವಾಗಿ ಮೂಡಿಬಂದಿರುವುದಾಗಿ ತಿಳಿಸಿದರು. ಅರ್ಜುನ್ ಜನ್ಯ ಸಂಗೀತ ಹಾಗೂ ಡಾ.ಸೂರಿ ನಿರ್ದೇಶನ ಚಿತ್ರಕ್ಕಿದೆ.

  ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಚಿತ್ರದ ನಾಯಕ ನಟರಾದ ಯಶ್, ರಮ್ಯಾ ಸೇರಿದಂತೆ ಯೋಗರಾಜ್ ಭಟ್, ಶಶಾಂಕ್, ಜಯಂತ್ ಕಾಯ್ಕಿಣಿ ಮುಂತಾದವರಿದ್ದರು. ಒಂದು ಮಗುವಿನ ತಾಯಿಯಾಗಿದ್ದರೂ ರಾಧಿಕಾ ಕುಮಾರಸ್ವಾಮಿ ತಮ್ಮ ಗ್ಲಾಮರನ್ನು ಹಾಗೇ ಉಳಿಸಿಕೊಂಡಿರುವ ಅಂಶ ಎದ್ದುಕಾಣುತ್ತಿತ್ತು. (ಒನ್‍ಇಂಡಿಯಾ ಕನ್ನಡ)

  English summary
  Golden girl Ramya and Yash lead Kannada film Lucky audio hits market on Wednesday Jan 18th in Bangalore. Producer Radhika Kumaraswamy, Music director Arjun Janya were present at the audio release function.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X