»   » ಶುಭಮಂಗಳ ಚಿತ್ರದ ಎಂದೂ ಮರೆಯದ ಹಾಡು

ಶುಭಮಂಗಳ ಚಿತ್ರದ ಎಂದೂ ಮರೆಯದ ಹಾಡು

Posted By:
Subscribe to Filmibeat Kannada
Movie Shubhamangala
ಪುಟ್ಟಣ್ಣ ಕಣಗಾಲರ ಜನಪ್ರಿಯ ಚಿತ್ರಗಳಲ್ಲಿ 'ಶುಭಮಂಗಳ' ಚಿತ್ರವೂ ಒಂದು. ಕಾದಂಬರಿ ಆಧಾರಿತ ಈ ಚಿತ್ರದಲ್ಲಿ ಪ್ರಣಯರಾಜ ಶ್ರೀನಾಥ್, ಆರತಿ, ಶಿವರಾಂ, ಅಂಬರೀಷ್, ಉಪಾಸನಾ ಸೀತಾರಾಮ್ ಅಭಿನಯಿಸಿದ್ದರು. ವಾಣಿ ಅವರ ಅದೇ ಹೆಸರಿನ ಕಾದಂಬರಿಯನ್ನು ಯಥಾವತ್ತಾಗಿ ತರದೆ ಚಿತ್ರಕತೆಯಲ್ಲಿ ಕೊಂಚ ಬದಲಾವಣೆಗಳನ್ನು ಮಾಡಿಕೊಂಡು ಪುಟ್ಟಣ್ಣ ತೆರೆಗೆ ತಂದಿದ್ದರು.

ಈ ಚಿತ್ರಕ್ಕೆ ಸಂಬಂಧಿಸಿದಂತೆ ಹಲವು ವಿಶೇಷತೆಗಳಿವೆ. ಖ್ಯಾತ ಸಾಹಿತಿ ಬೀಚಿ ಅವರು ಈ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದ ಮೂಲಕವೇ ಪುಟ್ಟಣ್ಣ ಹಾಗೂ ಆರತಿ ಆಪ್ತರಾಗಿದ್ದು, ಬಳಿಕ ಮದುವೆಯಾಗಿದ್ದು. ಹೇಮಾ ಆಗಿ ಆರತಿ, ಪ್ರಭಾಕರನಾಗಿ ಶ್ರೀನಾಥ್, ತಿಮ್ಮನಾಗಿ ಶಿವರಾಂ, ಮೂಗನಾಗಿ ಅಂಬರೀಷ್, ವೈದ್ಯರ ಪಾತ್ರದಲ್ಲಿ ಅಶ್ವತ್ಥ್ ಅಮೋಘ ಅಭಿನಯ ನೀಡಿದ್ದಾರೆ.

'ಶುಭಮಂಗಳ' ಚಿತ್ರದ ಎಲ್ಲ ಹಾಡುಗಳು ಇಂದಿಗೂ ಜನಪ್ರಿಯ. ಇದೇ ಚಿತ್ರದ "ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ..." ಸಾಹಿತ್ಯವನ್ನು ಒನ್‌ಇಂಡಿಯಾ ಕನ್ನಡ ತನ್ನ ಓದುಗರಿಗಾಗಿ ನೀಡುತ್ತಿದೆ. ಲಾಲ್‌ಬಾಗ್ ಸಸ್ಯತೋಟದಲ್ಲೂ ವೈವಿಧ್ಯಮಯ ಹೂಗಳು ಹೃನ್ಮನ ಸೆಳೆಯುತ್ತಿವೆ. ವಿಜಯಾನರಸಿಂಹ ಸಾಹಿತ್ಯ, ವಿಜಯಭಾಸ್ಕರ್ ಸಂಗೀತವಿರುವ ಈ ಹಾಡನ್ನು ಆರ್ ಎನ್ ಸುದರ್ಶನ್ ಹಾಡಿದ್ದಾರೆ. ಓದಿ, ಹಾಡಿ ಆನಂದಿಸಿ.

ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ
ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ

ಕಾವೇರಿ ಸೀಮೆಯ ಕನ್ಯೆಯು ನಾನೂ, ಬೇಲೂರು ಬಾಲೆಯ ಪ್ರತಿನಿಧಿ ನಾನೂ
ತುಂಗೆಯ ಭದ್ರೆಯಾ, ತುಂಗೆಯ, ಭದ್ರೆಯಾ, ತೌರಿನ ಹೂ ನಾನು, ತೌರಿನ ಹೂ ನಾನು

ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ

ಸೂರ್ಯನ ಕಾಂತಿಯ ಸುಂದರಿ ನಾನು ತಿಂಗಳ ಬೆಳಕಿನ ತಂಗಿಯು ನಾನೂ
ಪ್ರೇಮದ, ಕಾವ್ಯಕ್ಕೆ, ಪ್ರೇಮದ, ಕಾವ್ಯಕ್ಕೆ, ಪೂಜೆಯ ಹೂ ನಾನೂ, ಪೂಜೆಯ ಹೂ ನಾನೂ

ಹೂವೊಂದು ಬಳಿಬಂದು ತಾಕಿತು ಎನ್ನೆದೆಯಾ
ಏನೆಂದು, ಕೇಳಲು, ಹೇಳಿತು, ಜೇನಂಥ ಸಿಹಿ ನುಡಿಯಾ, ಜೇನಂಥ ಸಿಹಿ ನುಡಿಯಾ
(ಒನ್‌ಇಂಡಿಯಾ ಕನ್ನಡ)

English summary
Hoovondu bali bandu...lyrics from the Kannada movie "shubhamagala".The movie starred Aarathi & Srinath in lead roles and Shivaram, Ambareesh, upasane seetharam in pivotal roles. Lyrics Vijaya Narasimha, music by Vijaya Bhaskar, singer RN Sudarshan

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada