»   » 'ಪೃಥ್ವಿ'ಗೆ ಶ್ರುತಿ ಹಾಸನ್ ಹೊಸ ಗಾನ ಬಜನಾ

'ಪೃಥ್ವಿ'ಗೆ ಶ್ರುತಿ ಹಾಸನ್ ಹೊಸ ಗಾನ ಬಜನಾ

Posted By:
Subscribe to Filmibeat Kannada

ಸಕಲಕಲಾ ವಲ್ಲಭ ಕಮಲ ಹಾಸನ್ ಮಗಳು ಶ್ರುತಿ ಹಾಸನ್ ಕನ್ನಡದ 'ಪೃಥ್ವಿ' ಚಿತ್ರಕ್ಕಾಗಿ ಹಾಡಲಿದ್ದಾರೆ. ಪುನೀತ್ ರಾಜ್ ಕುಮಾರ್ ಮತ್ತು ಪಾರ್ವತಿ ಮೆನನ್ ಮುಖ್ಯಭೂಮಿಕೆಯಲ್ಲಿರುವ ಚಿತ್ರದಲ್ಲಿ ಹಾಡಲು ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಈಗಾಗಲೇ ಶ್ರುತಿ ಹಾಸನ್ ಅವರಿಗೆ ಆಹ್ವಾನ ಕಳುಹಿಸಿದ್ದಾರೆ.

'ಪೃಥ್ವಿ' ಚಿತ್ರತಂಡ ಜೋರ್ಡಾನ್ ನಲ್ಲಿ ಚಿತ್ರೀಕರಣ ಮುಗಿಸಿಕೊಂಡು ಇತ್ತೀಚೆಗಷ್ಟೆ ಬೆಂಗಳೂರಿಗೆ ಹಿಂತಿರುಗಿದೆ. ಸೂರಪ್ಪ ಬಾಬು ಈಗಾಗಲೇ ಶ್ರುತಿ ಹಾಸನ್ ಅವರನ್ನು ಸಂಪರ್ಕಿಸಿದ್ದು ಹಾಡೊಂದನ್ನು ಹಾಡಿಸುವ ಸಿದ್ಧತೆಯಲ್ಲಿದ್ದಾರೆ. ಒಂದು ವೇಳೆ ಶ್ರುತಿ ಹಾಸನ್ ಒಪ್ಪಿದ್ದೆ ಆದರೆ ಕನ್ನಡಕ್ಕೆ ಮತ್ತೊಂದು ಕೋಗಿಲೆಯ ಆಗಮನವಾಗಲಿದೆ.

'ಪೃಥ್ವಿ' ಚಿತ್ರವನ್ನು 'ಸವಾರಿ' ಚಿತ್ರದ ರೂವಾರಿ ಜೇಕಬ್ ವರ್ಗೀಸ್ ನಿರ್ದೇಶಿಸುತ್ತಿದ್ದಾರೆ. ಪೃಥ್ವಿ ಚಿತ್ರಕ್ಕೆ ಈಗಾಗಲೇ ಹಾಡುಗಳ ಧ್ವನಿಮುದ್ರಣ ಕಾರ್ಯ ಭರದಿಂದ ಸಾಗಿದ್ದು, ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನದಲ್ಲಿ ಮೂಡಿಬಂದಿರುವ ಎರಡು ಹಾಡುಗಳ ಬಗ್ಗೆ ಪುನೀತ್ ಮೆಚ್ಚುಗೆ ಸೂಚಿಸಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada