»   » ಕನ್ನಡಕ್ಕೆ ರ‌್ಯಾಪ್ ಕಲಾವಿದ ಬಾಬಾ ಸೆಹಗಲ್

ಕನ್ನಡಕ್ಕೆ ರ‌್ಯಾಪ್ ಕಲಾವಿದ ಬಾಬಾ ಸೆಹಗಲ್

Posted By:
Subscribe to Filmibeat Kannada

ಭಾರತದ ಮೊದಲ ರ‌್ಯಾಪ್ ಕಲಾವಿದ ಬಾಬಾ ಸೆಹಗಲ್ ಇದೇ ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಪುನೀತ್' ಚಿತ್ರದಐಟಂ ಹಾಡಿನಲ್ಲಿ ಬಾಬಾ ಸೆಹ್ ಗಲ್ ಹಾಡೊಂದನ್ನು ಹಾಡುವುದರ ಜೊತೆಗೆ ಸ್ವತಃ ಅಭಿನಯಿಸಿದ್ದಾರೆ. ಅಂದಹಾಗೆ ಈ ಚಿತ್ರ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರವಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.

ರ‌್ಯಾಪ್ ಹಾಡನ್ನು 'ಪೃಥ್ವಿ' ಚಿತ್ರಕ್ಕಾಗಿ ಮೂರು ತಿಂಗಳ ಹಿಂದೆ ಸೆಹಗಲ್ ಹಾಡಿದ್ದ್ದರು. ಈ ಹಾಡಿನ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದ ಅವರು ಹಾಡಿನ ಚಿತ್ರೀಕರಣದಲಿ ಪಾಲ್ಗೊಂಡಿದ್ದರು. ಹಾಡಿನ ಚಿತ್ರೀಕರಣ ಬಿಡದಿ ಬಳಿಯ ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಎರಡು ದಿನಗಳ ಕಾಲ (ಮಾ.22, 23) ನಡೆದಿದೆ. ರ‌್ಯಾಪ್ ಹಾಡಿಗೆ ಕಬೀರ್ ರಾಜ್ ಅವರು ಸಂಗೀತ ಸಂಯೋಜನೆಯಿದೆ.

ಚಿತ್ರದ ಮುಖ್ಯಭೂಮಿಕೆಯಲ್ಲಿ ನೀತೂ ಮತ್ತು ದಿಲೀಪ್ ಪೈ ಇದ್ದಾರೆ. ನೀಲ್ ಕಮಲ್ ಅವರ ನಿರ್ದೇಶನ 'ಪುನೀತ್' ಚಿತ್ರಕ್ಕಿದೆ. ಹಾಡಿನಲ್ಲಿ ಸೆಹಗಲ್ ಜೊತೆ ಹೆಜ್ಜೆ ಹಾಕಿರುವ ನೀತೂ ಇದೊಂದು ಕಾಲೇಜು ಹಾಡಾಗಿದ್ದು ತುಂಬಾ ಚೆನ್ನಾಗಿ ಮೂಡಿಬಂದಿದೆ ಎನ್ನುತ್ತಾರೆ. ತೆಲುಗು, ತಮಿಳು ಚಿತ್ರರಂಗದಲ್ಲಿ ಕ್ರೀಯಾಶೀಲರಾಗಿರುವ ಬಾಬಾ ಸೆಹ್ ಗಲ್ ಅವರ ಹಾಡುಗಳಿಗೆ ಬಹಳ ಬೇಡಿಕೆಯಿದೆ. ಕನ್ನಡ ಪ್ರೇಕ್ಷಕರನ್ನು ಎಷ್ಟರ ಮಟ್ಟಿಗೆ ಬಾಬಾ ಸೆಳೆಯುತ್ತಾರೆ ಎಂಬುದನ್ನು ಕಾದು ನೋಡಬೇಕು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada