»   » ಗುರುಕಿರಣ್ ಶಿಷ್ಯ ಮಂಜು ಸಾಗರ್ ಚಿತ್ರರಂಗಕ್ಕೆ ಎಂಟ್ರಿ!

ಗುರುಕಿರಣ್ ಶಿಷ್ಯ ಮಂಜು ಸಾಗರ್ ಚಿತ್ರರಂಗಕ್ಕೆ ಎಂಟ್ರಿ!

Posted By:
Subscribe to Filmibeat Kannada

ಸಂಗೀತ ನಿರ್ದೇಶಕ ಗುರುಕಿರಣ್ ಶಿಷ್ಯ ಮಂಜು ಸಾಗರ್ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿಯಲಿದ್ದಾರೆ. ಹಲವು ವರ್ಷಗಳಿಂದ ಗುರು ಜೊತೆಗಿದ್ದುಕೊಂಡು, ಅವರೆಲ್ಲ ಪರ್ಸನಲ್ ಕೆಲಸಗಳನ್ನು ಮಾಡುತ್ತಿದ್ದ ಮಂಜುವನ್ನು ಚಿತ್ರರಂಗಕ್ಕೆ ಪರಿಚಯಿಸಲು ಮುಂದಾಗಿದ್ದಾರೆ ಗುರು.

ಈಗಾಗಲೇ ಕತೆ, ಚಿತ್ರಕತೆ ಪೂರ್ಣಗೊಂಡಿದ್ದು, ಮಾರ್ಚ್ ಹೊತ್ತಿಗೆ ಚಿತ್ರ ಮುಹೂರ್ತ ಕಾಣಲಿದೆ. ಚಿತ್ರಕ್ಕೆ 'ಮತ್ತೆ ವಸಂತ' ಎಂದು ಹೆಸರಿಡುವ ಸಾಧ್ಯತೆ ಇದೆ. ಸಾಗರ ಮೂಲದ ಮಂಜು, ಊರಿಂದ ಬರುವ ಮುನ್ನ ಚಿತ್ರವನ್ನು ನಿರ್ದೇಶಿಸಬೇಕು ಎಂಬ ಕನಸು ಹೊತ್ತು ಬಂದಿದ್ದರು. ಅವರ ಕನಸಿಗೆ ನೀರೆರೆಯುವ ಕೆಲಸ ಮಾಡುತ್ತಿದ್ದಾರೆ ಗುರುಕಿರಣ್.

ಒಬ್ಬ ನಿರ್ದೇಶಕನ ಜೊತೆ ಕೆಲಸ ಮಾಡಿ, ತಾವೂ ನಿರ್ದೇಶಕರಾಗುವುದನ್ನು ನೋಡಿದ್ದೇವೆ. ಆದರೆ, ಒಬ್ಬ ಸಂಗೀತ ನಿರ್ದೇಶಕನ ಬಳಿ ಒಂದಷ್ಟು ವರ್ಷಗಳಿಂದ ಇದ್ದು, ಚಿತ್ರ ನಿರ್ದೇಶನಕ್ಕಿಳಿಯುವುದು ಬಲು ಅಪರೂಪ. ಗುರು ಶಿಷ್ಯರ ಜೋಡಿ ಕನ್ನಡ ಚಿತ್ರರಂಗಕ್ಕೆ ಸುಶ್ರಾವ್ಯ ಸಂಗೀತ ನೀಡಲಿ ಎಂದು ಆಶಿಸೋಣ. ಆಲ್ ದಿ ಬೆಸ್ಟ್ ಮಂಜು!

English summary
Kannada films noted music director Gurukiran student Manju Sagar steps into films as a music director. The movie has to be titled as 'Matte Vasantha'. He is from Sagar Taluk, Shimoga. All the best to you Manju Sagar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada