»   » ಹಂಸಲೇಖರ ಈ ಹಾಡಿಗೆ ಮರುಳಾಗದವರು ವಿರಳ

ಹಂಸಲೇಖರ ಈ ಹಾಡಿಗೆ ಮರುಳಾಗದವರು ವಿರಳ

Posted By:
Subscribe to Filmibeat Kannada

ರಾಗಬ್ರಹ್ಮ ಹಂಸಲೇಖ ಅವರಿಗೆ ಇಂದು (ಜು.23) ಹುಟ್ಟುಹಬ್ಬದ ಸಂಭ್ರಮ. ಹಂಸಲೇಖ ಸಂಗೀತ, ಸಾಹಿತ್ಯ ಒದಗಿಸಿರುವ ಚಿತ್ರಗಳ ಸಂಖ್ಯೆ ಮುನ್ನೂರಕ್ಕೂ ಹೆಚ್ಚು. ಕ್ರೇಜಿಸ್ಟಾರ್ ರವಿಚಂದ್ರನ್ ವೃತ್ತಿ ಜೀವನದಲ್ಲಿ ಅತ್ಯಂತ ಯಶಸ್ವಿ ಚಿತ್ರಗಳಲ್ಲಿ ಒಂದು 'ರಾಮಾಚಾರಿ'. ಚಿತ್ರದ ನಿಜವಾದ ಯಶಸ್ಸಿನ ರೂವಾರಿ ಹಂಸಲೇಖ.ರಾಮಾಚಾರಿ ಚಿತ್ರದ ಹಾಡುಗಳು ಒಂದಕ್ಕಿಂತಲೂ ಒಂದು ಭಿನ್ನವಾಗಿದ್ದವು.

ಅವಿದ್ಯಾವಂತ ಯುವಕನ ವಿಷಾದಗೀತೆಯಾಗಿ ರಾಮಚಾರಿ ಹಾಡುವ...ಹೆಣ್ಣಿನ ಅಂದಚೆಂದಗಳನ್ನು ಬಣ್ಣಿಸುವ ಯಾರಿವಳು ಯಾರಿವಳು...ಹಾಡಂತೂ ಎಂತವರನ್ನು ನಾಚಿ ನೀರಾಗಿಸುತ್ತಿತ್ತು. ಹಾಗೆಯೇ ಈ ಚಿತ್ರದ ಆಕಾಶದಾಗೆ ಯಾರೊ ಮಾಯಗಾರನು ಚಿತ್ತಾರ ಮಾಡಿ ಹೋಗೊನೇ...ಭಾವನಾ ಲೋಕಕ್ಕೆ ಕರೆದೊಯ್ಯುತ್ತದೆ.

ಈ ಹಾಡು ಕೇಳುತ್ತಿದ್ದರೆ ಕವಿಹೃದಯ ಜಾಗೃತವಾಗುತ್ತದೆ. 1991ರಲ್ಲಿ ತೆರೆಕಂಡ ರಾಮಚಾರಿ ಚಿತ್ರಕ್ಕೆ ಹಂಸಲೇಖ ಅವರ ಸಾಹಿತ್ಯ, ಸಂಗೀತದ ಜುಗಲಬಂದಿ ಚಿತ್ರರಸಿಕರನ್ನು ಸೆಳೆದಿತ್ತು. ನಟ ಭೈರವಿ ರಾಗದಲ್ಲಿರುವ ಈ ಹಾಡಿಗೆ ಮನೊ ಮತ್ತು ಎಸ್ ಜಾನಕಿ ಕಂಠ ಜೀವ ತುಂಬಿತ್ತು. ಈ ಹಾಡಿಗೆ ಮರುಳಾಗದವರು ವಿರಳ.


ಹೆಣ್ಣು: ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೋಗೊನೇ..ಏಏಏ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲನಾಡ ಮಾಡಿ ಹೋಗೋನೇ...

ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆಆಆ..

ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೊಗೋನೇ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ ಮಾಡಿ ಹೋಗೋನೇ..ಏಏಏ

ಸುದ್ದಿ ಇಲ್ಲದೇ ಮೋಡ ಶುದ್ಧಿಯಾಗೋದು
ಸದ್ದೆ ಇಲ್ಲದೇ ಗಂಧ ಗಾಳಿಯಾಗೋದು
ತಂಟೇನೆ ಮಾಡದೆ ಹೊತ್ತುಟ್ಟಿ ಹೋಗೊದು
ಏನೇನು ಮಾಡದೆ ನಾವ್ಯಾಕೆ ಬಾಳೋದು

ಗಂಡು:ಹಾರೊ ಹಕ್ಕಿನ ತಂದು ಕೂಡಿಹಾಕೊದು
ಕಟ್ಟೋ ಜೇನನ್ನ ಸುಟ್ಟು ತಿಂದು ಹಾಕೋದು
ನರಮನುಷ್ಯ ಕಲಿಯಲ್ಲ ಒಳ್ಳೇದು ಉಳಿಸೊಲ್ಲ
ಅವನಡಿಯೋ ದಾರಿಲಿ ಗರಿಕೆನು ಬೆಳೆಯೊಲ್ಲ

ಹೆಣ್ಣು: ಚಿಲಿಪಿಲಿಗಳ ಸರಿಗಮ ಕಿವಿಯೊಳಗೆ..ಏಏಏ

ಗಂಡು: ನೀರಲೆಗಳ ತಕಧಿಮಿ ಎದೆಯೊಳಗೆ..ಏಏಏ
ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆಆಆಆಆ

ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೊಗೋನೇ..ಏಏಏ
ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ ಮಾಡಿ ಹೋಗೋನೇ...ಏಏಏ

ಕಾಡು ಸುತ್ತುವಾ ಆಸೆ ರಾಣಿಗೇಕಮ್ಮ
ಕಾಲು ಇಟ್ಟರೆ ಸುತ್ತ ಕಲ್ಲು ಮುಳ್ಳಮ್ಮಾ
ಏಳೋದು ಬೀಳೋದು ಬಡವರ ಪಾಡಮ್ಮಾ
ನೀವ್ಯಾಕೆ ಹಾಡಿರಿ ಈ ಹಳ್ಳಿ ಹಾಡಮ್ಮಾ

ಹೆಣ್ಣು: ಇಲ್ಲಿ ಬೀಸುವಾ ಗಾಳಿ ಊರಲ್ಯಾಕಿಲ್ಲ
ಇಲ್ಲಿ ಸಿಕ್ಕುವ ಪಾಠ ಶಾಲೆಲ್ಯಾಕಿಲ್ಲ
ಬಂಗಾರ ಸಿಂಗಾರ ಸಾಕಾಗಿ ಹೋಯಿತು
ಅರಮನೆ ಆನಂದ ಬೇಸತ್ತು ಹೋಯಿತು

ಗಂಡು:ಕೆಳಗಿಳಿಸುವ ಮನಸಿನ ಭಾರಗಳಾ..ಆಆಆ
ಜಿಗಿಜಿಗಿಯುವ ಚಿಂತೆಯ ದೂರ್ತಗಳ..ಆಆಆ

ಜೊತೆ: ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆ..

ಹೆಣ್ಣು: ಆಕಾಶದಾಗೆ ಯಾರೊ ಮಾಯಗಾರನು
ಚಿತ್ತಾರ ಮಾಡಿ ಹೊಗೋನೇ

ಗಂಡು:ಈ ಭೂಮಿ ಮ್ಯಾಗೆ ಯಾರೊ ತೋಟಗಾರನು
ಮಲೆನಾಡ ಮಾಡಿ ಹೋಗೋನೇ...ಏಏಏಏ

ಜೊತೆ: ಬೆಳ್ಳಿ ಹಕ್ಕಿಯಾಗಿ ಹಾರಿ ಹೋಗಿ ನಾವು
ಸಂಚಾರ ಮಾಡುವ ಬಾರಾ..ಆಆ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada