»   »  ರಾಜನ್ ನಾಗೇಂದ್ರ ಹಳೆ ಗೀತೆಗಳಿಗೆ ಹೊಸ ಸ್ಪರ್ಶ

ರಾಜನ್ ನಾಗೇಂದ್ರ ಹಳೆ ಗೀತೆಗಳಿಗೆ ಹೊಸ ಸ್ಪರ್ಶ

Posted By:
Subscribe to Filmibeat Kannada
Rajan (Rajan Nagendra fame)
ಕನ್ನಡ ಚಿತ್ರರಂಗದ ಜನಪ್ರಿಯ ಜೋಡಿ ರಾಜನ್ ನಾಗೇಂದ್ರ ಸಂಗೀತ ಸಂಯೋಜಿಸಿದ ಹಳೆಯ ಚಿತ್ರಗೀತೆಗಳಿಗೆ ಹೊಸ ಸ್ಪರ್ಶ ನೀಡಲಾಗುತ್ತಿದೆ. ಹೊಸ ಗಾಯಕರ ಧ್ವನಿಯಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಈ ಹಾಡುಗಳು ಹೊರಹೊಮ್ಮಲಿವೆ. ಮೂಲ ಸಂಗೀತದ ಹಳೆಯ ಮಾಧುರ್ಯ ಹೊಸ ಸಂಗೀತದಲ್ಲೂ ಉಳಿಯುತ್ತದೆಯೇ? ಈ ಪ್ರಶ್ನೆಗೆ ಉತ್ತರ ಸಿಗಬೇಕಾದರೆ ಯುಗಾದಿ ಹಬ್ಬದ ತನಕ ಕಾಯಲೇಬೇಕು.

ಇಂಡಿಯಾಟೇಲ್ಸ್ ಡಾಟ್ ಕಾಮ್ ಹೆಸರಿನಲ್ಲಿ ರಾಜನ್ ನಾಗೇಂದ್ರ ಜೋಡಿಯ 60 ಹಾಡುಗಳು ಸಿಡಿ ರೂಪದಲ್ಲಿ ಬಿಡುಗಡೆಯಾಗಲಿವೆ. ಅರ್ಪಣೆ(ಡಾ.ರಾಜ್ ಕುಮಾರ್), ಅನುದಿನ(ಸಮಕಾಲೀನ), ಆಡುಮಾತು(ಜಾನಪದ), ಅನುಬಂಧ(ಪ್ರೇಮ ಗೀತೆಗಳು) ಮತ್ತು ಆರಾಧನೆ (ಭಕ್ತಿ ಗೀತೆಗಳು) ಎಂದು ಬಿಡಿಬಿಡಿಯಾಗಿ ಧ್ವನಿಸುರುಳಿಗಳು ಬರಲಿವೆ.

ಇಂಡಿಯಾ ಟೇಲ್ಸ್ ಡಾಟ್ ಕಾಂ ಪರವಾಗಿ ಯೋಗೀಶ್ ಮಾತನಾಡುತ್ತಾ, ನಮ್ಮ ಪ್ರತಿಷ್ಠಿತ ಸಂಸ್ಥೆಯು ಸಂಗೀತ ಪ್ರಿಯರಿಗೆ ಕೊಡುತ್ತಿರುವ ಉತ್ತಮ ಕೊಡುಗೆ ಇದಾಗಿದೆ ಎಂದರು. ಇಂಡಿಯಾಟೇಲ್ಸ್ ಡಾಟ್ ಕಾಂ ಅನಿಮೇಶನ್ ಕ್ಷೇತ್ರಕ್ಕೂ ಕಾಲಿರಿಸಲಿದ್ದು ಈ ವರ್ಷ ತಲಾ ಒಂದೊಂದು ಹಾಲಿವುಡ್ ಹಾಗೂ ಬಾಲಿವುಡ್ ಚಿತ್ರಗಳನ್ನು ನಿರ್ಮಿಸುತ್ತಿದೆ ಎಂದರು. ಇಳಯರಾಜ ಸಂಗೀತ ಸಂಯೋಜಿಸಿದ್ದಭಕ್ತಿ ಪ್ರಧಾನ 'ಅಯ್ಯಪ್ಪಸ್ವಾಮಿ' ಇಂಡಿಯಾಟೇಲ್ಸ್ ನ ಮೊದಲ ಧ್ವನಿಸುರುಳಿಯಾಗಿದೆ.

ಇಂದಿನ ತಂತ್ರಜ್ಞಾನದ ಬಗ್ಗೆ ರಾಜನ್ ಸಂತಸ ವ್ಯಕ್ತಪಡಿಸಿದರು. ಇದು ಮೂಲ ಸಂಗೀತವೇ ಆಗಿದ್ದು ಇಲ್ಲಿ ಯಾವುದೇ ಕಾಪಿರೈಟ್ ಸಮಸ್ಯೆ ಉದ್ಭವಿಸುವುದಿಲ್ಲ ಎಂದರು. ಗಾಯಕರು ವಾದ್ಯಗೋಷ್ಠಿಯಲ್ಲಿ ಹಾಡಿದಂತೆ ಹಾಡದೆ ಎರಡು ಗಂಟೆಗಳ ಕಾಲ ಈ ಆಲ್ಪಂ ಗೀತೆಗಳನ್ನು ಹಾಡಿರುವುದಾಗಿ ರಾಜನ್ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada