»   »  ಸಂಗೀತ ಸಿನಿಮಾಗೆ ಕಿಟಕಿ ಇದ್ದಂತೆ: ಸುರೇಶ್ ಕೃಷ್ಣ

ಸಂಗೀತ ಸಿನಿಮಾಗೆ ಕಿಟಕಿ ಇದ್ದಂತೆ: ಸುರೇಶ್ ಕೃಷ್ಣ

Posted By:
Subscribe to Filmibeat Kannada
Krishna grace ‘Ghauttham’ audio event
ದಕ್ಷಿಣ ಭಾರತದ ಪ್ರಮುಖ ನಿರ್ದೇಶಕ ಸುರೇಶ್ ಕೃಷ್ಣ ಬಳಿ 10 ವರ್ಷಗಳ ಕಾಲ ಸಹಾಯಕರಾಗಿ ಕೆಲಸ ಮಾಡಿದ ಕೆ.ರಾಜೀವ್ ಪ್ರಸಾದ್ ನಿರ್ದೇಶನದ ಚೊಚ್ಚಲ ಚಿತ್ರ 'ಗೌತಮ್'. ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಶನಿವಾರ ನಡೆಯಿತು. ರಾಜೀವ್ ಪ್ರಸಾದ್ ಗೆ ಶುಭ ಕೋರಲು ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮಕ್ಕೆ ಸುರೇಶ್ ಕೃಷ್ಣ ಆಗಮಿಸಿದ್ದರು.

ತಮ್ಮ ಬಳಿ ಸಹಾಯಕರಾಗಿ ಕೆಲಸ ಮಾಡಿದ ರಾಜೀವ್ ಪ್ರಸಾದ್ ಕುರಿತು ಒಂದೆರಡು ಹಿತನುಡಿಗಳನ್ನು ಆಡಿದರು. ಸುರೇಶ್ ಕೃಷ್ಣ ಮಾತನಾಡುತ್ತಾ, ಸಂಗೀತ ಯಾವುದೇ ಚಿತ್ರಕ್ಕೆ ಕಿಟಕಿ ಇದ್ದಂತೆ. ಚಿತ್ರಕ್ಕೆ ಸಂಗೀತ ನೀಡಿರುವ ಗುರುಕಿರಣ್ ಪ್ರತಿಭಾವಂತ ಸಂಗೀತ ನಿರ್ದೇಶಕ ಎಂದರು. ಚಿತ್ರದ ನಟ ಪ್ರೇಮ್ ಕುಮಾರ್ ಸಹ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದ ಬಗ್ಗೆ ಸೂರಪ್ಪ ಬಾಬು ಬಹಳಷ್ಟು ಜಾಗ್ರತೆ ವಹಿಸಿದ್ದಾರೆ. ಈ ಹಿಂದೆ ತಾವು ಸೂರಪ್ಪ ಬಾಬು ನಿರ್ಮಾಣದ ಕದಂಬ ಮತ್ತು ಜ್ಯೇಷ್ಠ ಚಿತ್ರಗಳನ್ನು ನಿರ್ದೇಶಿಸಿದ್ದನ್ನು ನೆನೆಸಿಕೊಂಡರು.

ಪ್ರಸ್ತುತ ತಾನು ತೆಲುಗು(ಮೇಸ್ತ್ರಿ ಚಿತ್ರ), ತಮಿಳು (ಆರ್ಮುಗಂ ಚಿತ್ರ) ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಕಾರಣ ಗೌತಮ್ ಚಿತ್ರವನ್ನು ನಿರ್ದೇಶಿಸಲು ಆಗಲಿಲ್ಲ. ತಮ್ಮ ಸಹಾಯಕ ರಾಜೀವ್ ಪ್ರಸಾದ್ ಗೆ ಗೌತಮ್ ನಿರ್ದೇಶನದ ಜವಾಬ್ದಾರಿಯನ್ನು ವಹಿಸಿದ್ದಾಗಿ ತಿಳಿಸಿದರು. ಚಿತ್ರವನ್ನು ನೋಡಿದ ಬಳಿಕ ನನಗೆ ರಾಜೀವ್ ನಿರ್ದೇಶನ ನಿಜಕ್ಕೂ ಖುಷಿಕೊಟ್ಟಿತು. ರಾಜೀವ್ ಗೆ ಮತ್ತಷ್ಟು ಚಿತ್ರಗಳನ್ನು ನಿರ್ದೇಶಿಸುವ ಸಾಮರ್ಥ್ಯ ಇದೆ ಎಂದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ನೆನಪಿರಲಿ ಪ್ರೇಮ್ ರ ಗೌತಮ್ ಚಿತ್ರದ ಟ್ರೈಲರ್
'ಗೌತಮ್' ಆಗಿ ಬರಲಿದ್ದಾರೆ ಲವ್ಲಿ ಸ್ಟಾರ್ ಪ್ರೇಮ್
ಗೌತಮ್ ಎಂಬ ಹಳೆಯ ಸರುಕಿನಲ್ಲಿ ಪ್ರೇಮ್

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X