»   »  'ಕಳ್ಳರ ಸಂತೆ' ಚಿತ್ರಕ್ಕೆ ಹಿನ್ನೆಲೆ ಸಂಗೀತ

'ಕಳ್ಳರ ಸಂತೆ' ಚಿತ್ರಕ್ಕೆ ಹಿನ್ನೆಲೆ ಸಂಗೀತ

Posted By:
Subscribe to Filmibeat Kannada

ಮೇಘ ಮೂವೀಸ್ ಲಾಂಛನದಲ್ಲಿ ಸೈಯ್ಯದ್ ಅಮಾನ್ ಹಾಗೂ ರವೀಂದ್ರ ಅವರು ನಿರ್ಮಿಸುತ್ತಿರುವ 'ಕಳ್ಳರ ಸಂತೆ' ಚಿತ್ರಕ್ಕೆ ಪ್ರಸಾದ್ ಸ್ಟೂಡಿಯೋದಲ್ಲಿ ಸಂಗೀತ ನಿರ್ದೇಶಕ ವಿ.ಮನೋಹರ್ ಅವರ ಸಾರಥ್ಯದಲ್ಲಿ ಹಿನ್ನೆಲೆ ಸಂಗೀತ ನಡೆಯುತ್ತಿದೆ.

ನಮ್ಮ ಸಂಸ್ಥೆಯಿಂದ ನಿರ್ಮಾಣವಾದ 'ಆ ದಿನಗಳು', 'ಸ್ಲಂ ಬಾಲ' ಚಿತ್ರಕ್ಕೆ ನೋಡುಗರಿಂದ ಉತ್ತಮ ಪ್ರತಿಕ್ರಿಯೆ ದೊರಕಿದ್ದು ವಿಭಿನ್ನ ಕಥಾ ಹಂದರವುಳ್ಳ 'ಕಳ್ಳರ ಸಂತೆ' ಚಿತ್ರ ಕೂಡ ಸಿನಿಮಾಸಕ್ತರಿಗೆ ಮೆಚ್ಚುಗೆಯಾಗಲಿದೆ ಎಂದು ತಿಳಿಸಿರುವ ನಿರ್ಮಾಪಕರು, ನಿರ್ದೇಶಕಿ ಸುಮನಾ ಕಿತ್ತೂರು ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಪತ್ರಕರ್ತ ಆಗ್ನಿ ಶ್ರೀಧರ್ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಸುಂದರನಾಥ ಸುವರ್ಣ ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಸುಮನಾ ಕಿತ್ತೂರು ಹಾಗೂ ವಿ.ಮನೋಹರ್ ಗೀತರಚನೆ, ಡಿಫರೆಂಟ್ ಡ್ಯಾನಿ ಸಾಹಸ, ಮದನ್ ಹರಿಣಿ ನೃತ್ಯ ಹಾಗೂ ಮಧುಗಿರಿ ಪ್ರಕಾಶ್ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಯಶ್, ಹರಿಪ್ರಿಯಾ, ಕಿಶೋರ್, ರಂಗಾಯಣ ರಘು, ಸುಧಾ ಬೆಳವಾಡಿ ಇದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X